ಉಡುಪಿ: ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ ಉಡುಪಿ ಶಾಖೆ ರಜತ ಮಹೋತ್ಸವ ಅಂಗವಾಗಿ ಐಸಿಎಐ ವೃತ್ತಿ ಅಭಿವೃದ್ಧಿ ಸಮಿತಿ ಆಶ್ರಯದಲ್ಲಿ ನ.8 ಮತ್ತು 9ರಂದು ಬಾಸೆಲ್ ಮಿಷನರೀಸ್ ಮೆಮೊರಿಯಲ್ ಆಡಿಟೋರಿಯಂನಲ್ಲಿ ಯುಡಿ&ರಜತಿ ರಾಷ್ಟ್ರೀಯಮಟ್ಟದ ಸಮ್ಮೇಳನ ಆಯೋಜಿಸಲಾಗಿದೆ ಎಂದು ಜಿಲ್ಲಾ ಶಾಖೆ ಅಧ್ಯೆ ಅರ್ಚನಾ ಮಯ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಖ್ಯ ಅತಿಥಿಯಾಗಿ ಐಸಿಎಐ ಮಾಜಿ ಅಧ್ಯಕ್ಷ ಸಿಎ ಕೆ. ರಘು ಭಾಗವಹಿಸಲಿದ್ದು, ಗೌರವ ಅತಿಥಿಗಳಾಗಿ ದಕ್ಷಿಣ ಪ್ರಾದೇಶಿಕ ಮಂಡಳಿ ಅಧ್ಯಕ್ಷ -ಸಿಎ ರೇವತಿ ರಘುನಾಥನ್, ಐಸಿಎಐ ಮಾಜಿ ಅಧ್ಯಕ್ಷ ಅತುಲ್ ಕುಮಾರ್ ಗುಪ್ತಾ ಉಪಸ್ಥಿತರಿರುವರು. ಕೇಂದ್ರ ಮಂಡಳಿ ಸದಸ್ಯ ಸಿಎ ಮಧುಕರ್ ಹಿರೇಗಂಗೇ ಅವರಿಂದ ಒಂದು ವಿಶೇಷ ಅಧಿವೇಶನ ಮತ್ತು ಎರಡು ಚರ್ಚಾ ಅಧಿವೇಶನಗಳು ನಡೆಯಲಿವೆ. 500ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀೆ ಇದೆ ಎಂದು ಹೇಳಿದರು.
ಉಪಾಧ್ಯಕ್ಷ ರಾಘವೇಂದ್ರ ಮೊಗೇರಾಯ, ಅಶ್ವತ್ ಶೆಟ್ಟಿ, ಲಕ್ಷ್ಮೀಶ ರಾವ್, ಸೋನಿತ್ ಶೆಟ್ಟಿ ಉಪಸ್ಥಿತರಿದ್ದರು.

