ಬೆಳ್ತಂಗಡಿ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ರಾಷ್ಟ್ರೀಯ ಕೈ ಮಗ್ಗ ದಿನಾಚರಣೆ ಕಾರ್ಯಕ್ರಮ

0
170

ಬೆಳ್ತಂಗಡಿ : ರಾಷ್ಟ್ರೀಯ ಕೈ ಮಗ್ಗ ದಿನಾಚರಣೆಯ ಅಂಗವಾಗಿ ಕೈಮಗ್ಗ ನೇಕಾರಿಕೆಗೆ ಉತ್ತೇಜನ ಮತ್ತು ಉತ್ಪನ್ನಗಳಿಗೆ ಪ್ರಚಾರವನ್ನು ನೀಡುವ ಸಲುವಾಗಿ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತದೆ. ಸ್ವದೇಶಿ ಚಳವಳಿಯ ನೆನಪಿಗಾಗಿ 2015 ರ ಆಗಸ್ಟ್‌ 7 ರಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರೀಯ ಕೈಮಗ್ಗ ದಿನಕ್ಕೆ ಚಾಲನೆ ನೀಡಿದ್ದರು.

ಆ 07 ರಂದು ರಾಷ್ಟ್ರೀಯ ಕೈಮಗ್ಗದ ದಿನಾಚರಣೆಯ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ಮಹಿಳಾ ಮೋರ್ಚಾದ ವತಿಯಿಂದ ಲಾಯಿಲದಲ್ಲಿರುವ ಸಿರಿ ಗ್ರಾಮೋದ್ಯೋಗ ಸಂಸ್ಥೆ ಗೆ ತೆರಳಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಖಾದಿಯ ಬಟ್ಟೆಗಳನ್ನು ಖರೀದಿಸಲಾಯಿತು. ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಮಂಡಲ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷರಾದ ವಿದ್ಯಾ ಶ್ರೀನಿವಾಸ್ ಗೌಡ ಪ್ರಧಾನ ಕಾರ್ಯದರ್ಶಿಗಳಾದ ಪೂರ್ಣಿಮಾ ಜಯಂತ್, ಹಾಗೂ ತುಳಸಿ ಉಮೇಶ್ ಸದಸ್ಯರಾದ ರಶ್ಮಿ ಪಠವರ್ಧನ್ ಹಾಗೂ ಶ್ರೀಲಕ್ಷ್ಮಿ ರಾವ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here