ಭಾರತೀಯ ಮಜ್ದೂರ್ ಸಂಘದ ಮೂಡುಬಿದಿರೆ ತಾಲೂಕು ಘಟಕ ವಿಶ್ವಕರ್ಮ ಜಯಂತಿಯ ಪ್ರಯುಕ್ತ ನರೇಂದ್ರ ಮೋದಿ ಜನ್ಮ ದಿನಾಚರಣೆಯ ಸಂದರ್ಭ ರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನು ಸಪ್ಟಂಬರ್ 17ರಂದು ಸಮಾಜ ಮಂದಿರದಲ್ಲಿ ಆಚರಿಸಿದ. ಹಿರಿಯ ಸರಸಂಘ ಚಾಲಕ ಚಂದ್ರಹಾಸ ದೇವಾಡಿಗರು ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಿ ಎಂ ಎಸ್ ರಾಜ್ಯ ಘಟಕದ ಮಾಜಿ ಉಪಾಧ್ಯಕ್ಷ ಭಗವಾನ್ ದಾಸ್ ಅವರ ರಾಷ್ಟ್ರೀಯ ಕಾರ್ಮಿಕ ಸಂಘ 1955 ರಲ್ಲಿ ಪ್ರಾರಂಭವಾಗಿ ರಾಷ್ಟ್ರಮಟ್ಟದಲ್ಲಿ ಬೆಳೆದು ಬಂದ ಹಲವಾರು ಮಜಲುಗಳನ್ನು ಸಭೆಗೆ ತಿಳಿಸಿಕೊಟ್ಟರು. ಸಂಘಕ್ಕಾಗಿ ದುಡಿದ ಚಂದ್ರಹಾಸವನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಪರಿಸರ ವಿಭಾಗದ ಸಂಚಾಲಕ ಮಂಜುನಾಥ ಶೆಟ್ಟಿ, ತಾಲೂಕು ಪ್ರಮುಖ ಪ್ರಮೋದ್ ಪೆರಾಡಿ, ರುದ್ರಾಂಶ ಕನ್ಸ್ಟ್ರಕ್ಷನ್ ಸಂಸ್ಥೆಯ ಅಜಯ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮೂಡುಬಿದಿರೆ ಆಟೋರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ದೀಪಕ್ ರಾಜ್ ಕೊಡಂಗಲ್ಲು, ಬಿ ಎಂ ಎಸ್ ತಾಲೂಕು ಸಮಿತಿ ಅಧ್ಯಕ್ಷ ರಾಜೇಶ್ ಸುವರ್ಣ, ಕಾರ್ಯದರ್ಶಿ ಸಂದೀಪ್ ಶೆಟ್ಟಿ, ಕೋಶಾಧಿಕಾರಿ ರಾಜೇಶ್ ಶೆಟ್ಟಿ, ಚಿನ್ನು ಕಾರ್ಯಕ್ರಮ ನಿರ್ವಹಿಸಿ ವೇದಿಕೆಯಲ್ಲಿದ್ದರು. ಉಪಾಧ್ಯಕ್ಷರುಗಳಾದ ಪದ್ಮನಾಭ, ಜಯರಾಮ್, ಜೊತೆ ಕಾರ್ಯದರ್ಶಿ ಹರೀಶ್ ಪೂಜಾರಿ ಕಾರ್ಯಕ್ರಮವನ್ನು ಸಂಘಟಿಸಿದ್ದರು.
ವರದಿ ರಾಯಿ ರಾಜಕುಮಾರ ಮೂಡುಬಿದಿರೆ