ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಮತ್ತು ವೆಬ್‌ಫ್ಲೋ ಸಮುದಾಯದ ಸಹಯೋಗದಲ್ಲಿ ತಂತ್ರಜ್ಞಾನ ಆಧಾರಿತ ಮೂರು ದಿನಗಳ ರಾಷ್ಟ್ರೀಯ ಮಟ್ಟದ “ಕೋಡ್ ಮೀಟ್ 2025” ಹ್ಯಾಕಥಾನ್ ಸ್ಪರ್ಧೆಯನ್ನು ಅಕ್ಟೋಬರ್ 11-12-13 ರಂದು ಆಯೋಜಿಸಲಾಗುವುದು. ಈ ಮೂರು ದಿನಗಳ ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ತಂತ್ರಜ್ಞಾನ ಮತ್ತು ನಾವೀನ್ಯತೆಯ ಸಂಯೋಜನೆಯೊಂದಿಗೆ ವಿವಿಧ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲಿದ್ದಾರೆ.
ಕಳೆದ ವರ್ಷ ಆಯೋಜಿಸಿದ್ದ ಕೋಡ್ ಮೀಟ್ ಸ್ಪರ್ಧೆಯ ಎರಡನೆಯ ಆವೃತ್ತಿಯಲ್ಲಿ 110 ತಂಡಗಳು ಭಾಗವಹಿಸಿದ್ದವು. ಈ ವರ್ಷದ ಕೋಡ್ ಮೀಟ್ ಹ್ಯಾಕಥಾನ್ ಸ್ಪರ್ಧೆಯ ಮೂರನೆಯ ಆವೃತ್ತಿಯಲ್ಲಿ 200 ಕ್ಕೂ ಅಧಿಕ ತಂಡಗಳು ದೇಶದಾದ್ಯಂತದಿಂದ ಭಾಗವಹಿಸಲಿರುವ ನಿರೀಕ್ಷೆಯಿದೆ. ಅಕ್ಟೋಬರ್ 11ರಂದು (ಮೊದಲನೇ ದಿನ), ಟ್ರೆಜರ್ ಹಂಟ್, ಪೇಪರ್ ಪಿಚ್, ಬಗ್ ಹಂಟ್, ಫ್ರೀ ಫೈರ್ ಟೂರ್ನಮೆಂಟ್ ಸ್ಪರ್ಧೆಗಳನ್ನು ಮತ್ತು ವಿವಿಧ ಕಂಪೆನಿಗಳ ನುರಿತ ತಜ್ಞರ ಜೊತೆಗೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಅಕ್ಟೋಬರ್ 12 ಮತ್ತು 13ರಂದು, ಸತತ 24 ಗಂಟೆಗಳ ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ಸ್ಪರ್ಧೆಯು ನಡೆಯಲಿದೆ. ಇದರಲ್ಲಿ ಭಾಗವಹಿಸುವ ತಂಡಗಳಿಗೆ, ನೈಜ ಜೀವನದ ಸಮಸ್ಯೆಗಳ ಆಧಾರಿತ ನಾಲ್ಕು ವಿಭಿನ್ನ ಸಮಸ್ಯೆಗಳನ್ನು ನೀಡಲಾಗುತ್ತಿದ್ದು, ಆಧುನಿಕ ತಂತ್ರಜ್ಞಾನದ ಬಳಕೆಯ ಮೂಲಕ ನಾವೀನ್ಯತೆಯ ಪರಿಹಾರಗಳನ್ನು ಕಂಡುಕೊಳ್ಳಲಿದ್ದಾರೆ. ಉತ್ತಮವಾಗಿ ಪ್ರದರ್ಶನ ನೀಡುವ ತಂಡಗಳಿಗೆ ಒಟ್ಟು ₹1,00,000 ಮೌಲ್ಯದ ಬಹುಮಾನವನ್ನು ನೀಡಲಾಗುವುದು. ಇದು ತಾಂತ್ರಿಕ ನೈಪುಣ್ಯವನ್ನು ಪ್ರದರ್ಶಿಸಲು ಮತ್ತು ಕೈಗಾರಿಕಾ ಕ್ಷೇತ್ರದ ನುರಿತ ತಜ್ಞರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ಒಂದು ಉತ್ತಮ ವೇದಿಕೆಯನ್ನು ಕಲ್ಪಿಸಲಿದೆ. ಈ ಹ್ಯಾಕಥಾನ್ ಕಾರ್ಯಕ್ರಮದಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿಗಳಾದ ಡಾ. ಸಿಎ ಎ. ರಾಘವೇಂದ್ರ ರಾವ್, ಗೌರವಾನ್ವಿತ ಸಹಕುಲಾಧಿಪತಿಗಳಾದ ಡಾ. ಎ. ಶ್ರೀನಿವಾಸ ರಾವ್, ಶ್ರೀನಿವಾಸ ವಿಶ್ವವಿದ್ಯಾಲಯದ ವಿಶ್ವಸ್ಥ ಮಂಡಳಿಯ ಸದಸ್ಯರುಗಳಾದ ಶ್ರೀಮತಿ ಎ. ವಿಜಯಲಕ್ಷ್ಮಿ ಆರ್. ರಾವ್ ಮತ್ತು ಪ್ರೊ. ಎ. ಮಿತ್ರಾ ಎಸ್. ರಾವ್, ಉಪಕುಲಪತಿಗಳಾದ ಡಾ. ಕೆ. ಸತ್ಯನಾರಾಯಣ ರೆಡ್ಡಿ, ಕುಲಸಚಿವರಾದ ಡಾ. ಅನಿಲ್ ಕುಮಾರ್, ಮೌಲ್ಯಮಾಪನ ವಿಭಾಗದ ಕುಲಸಚಿವರಾದ ಡಾ. ಶ್ರೀನಿವಾಸ ಮಯ್ಯ ಡಿ, ಅಭಿವೃದ್ಧಿ ವಿಭಾಗದ ಕುಲಸಚಿವರಾದ ಡಾ. ಅಜಯ್ ಕೆ. ಜಿ., ಶೈಕ್ಷಣಿಕ ವಿಭಾಗದ ಕುಲಸಚಿವರಾದ ಡಾ. ಆದಿತ್ಯ ಕುಮಾರ್ ಮಯ್ಯ, ವೆಬ್‌ಫ್ಲೋ ಸಮುದಾಯದ ಮಾರ್ಗದರ್ಶಕರಾದ ಡಾ. ಸುಷ್ಮಾ ವಿ. ಅಕ್ಕರಾಜು, ಕಾಲೇಜಿನ ಮುಖ್ಯಸ್ಥರಾದ ಡಾ. ರಾಮಕೃಷ್ಣ ಎನ್. ಹೆಗಡೆ, ಹ್ಯಾಕಥಾನ್ ಸ್ಪರ್ಧೆಯ ಸಂಯೋಜಕರಾದ ಪ್ರೊ. ವರ್ಷಾ ಜಿ. ಬಂಗೇರಾ ಮತ್ತು”ಮುಕ್ಕ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ರಾಷ್ಟ್ರೀಯ ಮಟ್ಟದ ಕೋಡ್ ಮೀಟ್ 2025 ಹ್ಯಾಕಥಾನ್” ಆರ್. ಉಪಸ್ಥಿತರಿರಲಿದ್ದಾರೆ. ಹೆಚ್ಚಿನ ಮಾಹಿತಿಗೆ ಈ ವೆಬ್ ಸೈಟನ್ನು ಸಂಪರ್ಕಿಸಬಹುದು: hackathon.suiet.in