ಉಡುಪಿಯಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಉದ್ಘಾಟನೆ

0
61


ಓದುಗರ ಸ್ನೇಹಿ ಗ್ರಂಥಾಲಯಗಳ ನಿರ್ಮಾಣಕ್ಕೆ ಆದ್ಯತೆ : ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯುಕ್ತ ಬಸವರಾಜೇಂದ್ರ ಎಚ್.
ಉಡುಪಿ : ಗ್ರಂಥಾಲಯಗಳಲ್ಲಿ ಏಕಾಗ್ರತೆಯಿಂದ ಓದಲು, ಅಧ್ಯಯನ ಮಾಡಲು ಸೂಕ್ತ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಸೌಕರ್ಯಗಳೊಂದಿಗೆ ರಾಜ್ಯದಲ್ಲಿ ಇನ್ನಷ್ಟು ಗ್ರಂಥಾಲಯಗಳನ್ನು ಆಧುನೀಕರಣಗೊಳಿಸಿ ಓದುಗರ ಸ್ನೇಹಿಯಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆ ಬೆಂಗಳೂರು ಇದರ ಆಯುಕ್ತ ಬಸವರಾಜೇಂದ್ರ ಎಚ್.ಹೇಳಿದರು.
ಅವರು ಭಾನುವಾರ ಅಜ್ಜರಕಾಡು ಜಿಲ್ಲಾ ಹಾಗೂ ನಗರಕೇಂದ್ರ ಗ್ರಂಥಾಲಯದ ಸಹಭಾಗಿತ್ವದಲ್ಲಿ ಹಮ್ಮಿಕೊಂಡ ರಾಷ್ಟಿçÃಯ ಗ್ರಂಥಾಲಯ ಸಪ್ತಾಹ, ಉತ್ತಮ ಸಿಬಂದಿ ಸೇವಾ ಪುರಸ್ಕಾರ, ಉತ್ತಮ ಓದುಗ ಪ್ರಶಸ್ತಿ ಪ್ರದಾನ ಹಾಗೂ ಗ್ರಂಥಾಲಯ ಸಪ್ತಾಹದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ಸುಸಜ್ಜಿತ ಗ್ರಂಥಾಲಯಗಳ ಕೊರತೆ ಇಲ್ಲದಿದ್ದರೂ, ಓದುಗರ ಕೊರತೆ ಕಾಣುತ್ತಿದ್ದೇವೆ. ಇಂದಿನ ಆಧುನಿಕ ಮೊಬೈಲ್ ತಂತ್ರಜ್ಞಾನದಲ್ಲಿಎಲ್ಲವನ್ನೂ ಮೊಬೈಲ್ ಮೂಲಕವೇ ಪಡೆದುಕೊಳ್ಳುವ ಅವಕಾಶವಿರುವಾಗ ಗ್ರಂಥಾಲಯಕ್ಕೆ ಬಂದು ಓದುವವರು ಕಡಿಮೆಯಾಗುವುದು ಸಹಜ. ಹೀಗಾಗಿ ಓದುಗರನ್ನು ಸೆಳೆಯಲು ಅತ್ಯಾಧುನಿಕ ತಂತ್ರಜ್ಞಾನಗಳೊAದಿಗೆ ಲೈಬ್ರೇರಿಯಲ್ಲಿ ಮೇಲ್ದರ್ಜೆಗೇರಿಸಿಕೊಂಡು ಮುನ್ನಡೆಯುವ ಅಗತ್ಯವಿದೆ. ಗ್ರಂಥಾಲಯಕ್ಕೆ ಓದಲು ಬರುವ ವಿದ್ಯಾರ್ಥಿಗಳು, ಸಾರ್ವಜನಿಕರು ಯಾವುದೇ ಅಡಚಣೆಯಿಲ್ಲದೆ ಒಳ್ಳೆಯ ವಾತಾವರಣದಲ್ಲಿ ಓದುವಂತಾಗಬೇಕು ಎಂಬುದೇ ಇಲಾಖೆಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಇ-ಲೈಬ್ರೇರಿ ಅಂದರೆ ಕಂಪ್ಯೂಟರೀಕೃತ ಮಾಹಿತಿಗಳನ್ನೊಳಗೊಂಡ ಗ್ರಂಥಾಲಯವನ್ನು ಓದುಗರಿಗೆ ನೀಡಿ ಅವರ ಜ್ಞಾನಾರ್ಜನೆ, ವ್ಯಕ್ತಿತ್ವ ವಿಕಸನಕ್ಕೆ ಗ್ರಂಥಾಲಯಗಳು ಸಹಕಾರಿಯಾಗಲಿವೆ ಎಂದು ಅವರು ತಿಳಿಸಿದರು.
ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ ಹಿರಿಯ ಸಾಹಿತಿ ವಸಂತಿ ಶೆಟ್ಟಿ ಬ್ರಹ್ಮಾವರ ಮಾತನಾಡಿ, ಉಡುಪಿಯಲ್ಲಿ ರಾಜ್ಯದಲ್ಲಿಯೇ ಅತೀ ಸುಸಜ್ಜಿತ ಗ್ರಂಥಾಲಯವಿದೆ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳು, ಅಧ್ಯಯನಕ್ಕೆ ಪೂರಕವಾದ ಸೌಲಭ್ಯವನ್ನು ಕಲ್ಪಿಸಿಕೊಡಲಾಗಿದೆ. ಇಂತಹ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಐಎಎಸ್, ಐಪಿಎಸ್‌ನಂತಹ ಅತ್ಯುನ್ನತ ಹುದ್ದೆಗೆ ಏರುವ ಕನಸು ಕಾಣಬೇಕು. ಇಂತಹ ಅತ್ಯಾಧುನಿಕ ಗ್ರಂಥಾಲಯವನ್ನು ರೂಪಿಸಲು ಶ್ರಮಿಸಿದ ಗ್ರಂಥಾಲಯ ಅಧಿಕಾರಿಗಳು, ಸಹಕರಿಸಿದ ಅಭಿನಂದನಾರ್ಹರು ಎಂದರು.


ಉಡುಪಿಯ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಕಾಲೇಜಿನ ಪ್ರಾಧ್ಯಾಪಕಿ ಹಾಗೂ ಉಡುಪಿ ನಗರ ಗ್ರಂಥಾಲಯ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ನಿಕೇತನಾ ಮಾತನಾಡಿ, ಜ್ಞಾನವನ್ನು ಹಂಚಿದಷ್ಟು ನಮ್ಮ ಜ್ಞಾನದ ಆಳ ವಿಸ್ತಾರವಾಗುತ್ತಾ ಹೋಗುತ್ತದೆ. ಮಕ್ಕಳು ಮುಂದಿನ ಸಾಹಿತಿ, ಐಎಎಸ್ ಅಧಿಕಾರಿಗಳು ಅಥವಾ ಇನ್ನಾವುದೇ ಜೀವನದ ಗುರಿಯನ್ನು ಸಾಧಿಸಲು ಓದುವ ಸಂಸ್ಕಾರ ಬೆಳೆಯಬೇಕು. ಇದಕ್ಕೆ ಪೂರಕವಾದ ವಾತಾವರಣವನ್ನು ಕಲ್ಪಿಸುವುದು ಅಗತ್ಯ. ಹೀಗಾಗಿ ಗ್ರಂಥಾಲಯದ ಕಡೆಗೆ ವಿದ್ಯಾರ್ಥಿಗಳನ್ನು, ಓದುಗರನ್ನು ಸೆಳೆಯಲು ಗ್ರಂಥಾಲಯಗಳನ್ನು ಆಧುನಿಕೃತಗೊಳಿಸಬೇಕು. ಪ್ರಸ್ತುತ ಉಡುಪಿಯ ಅಜ್ಜರಕಾಡಿನಲ್ಲಿರುವ ಈ ಸುಸಜ್ಜಿತ ಗ್ರಂಥಾಲಯ ರಾಜ್ಯಕ್ಕೆ ಮಾದರಿಯಾಗಿದ್ದು, ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.


ಡಾ.ಜಿ.ಶAಕರ್ ಸರಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲರು ಹಾಗೂ ನಗರ ಗ್ರಂಥಾಲಯ ಪ್ರಾಧಿಕಾರದ ಉಪಾಧ್ಯಕ್ಷರಾಗಿರುವ ಡಾ.ಸೋಜನ್ ಕೆ.ಜಿ.ಮಾತನಾಡಿ, ಗ್ರಂಥಾಲಯ ಸಪ್ತಾಹವನ್ನು ಆಚರಿಸುತ್ತಿರುವ ಆಶಯ ಏನೆಂದರೆ ನಮ್ಮ ಮಕ್ಕಳು, ಯುವ ಜನತೆ ಗ್ರಂಥಾಲಯದ ಕಡೆಗೆ ಆಕರ್ಷಿತರಾಗಬೇಕು ಎಂಬುದಾಗಿದೆ. ಮನುಷ್ಯ ಸಂಪಾದಿಸಬಹುದಾದ ಅತ್ಯಂತ ಶ್ರೇಷ್ಠವಾದ ಸಂಪತ್ತುಎAದರೆ ಅದು ಜ್ಞಾನ. ಅದನ್ನು ಯಾರೂ ಕದಿಯಲು ಸಾಧ್ಯವಿಲ್ಲ ಅಲ್ಲದೆ ಅದನ್ನು ಇನ್ನೊಬ್ಬರಿಗೆ ಧಾರೆಯೆರೆಯುವ ಅವಕಾಶವೂ ಇದೆ. ಇದಕ್ಕೆ ಸಾಕ್ಷಿ ಈ ಗ್ರಂಥಾಲಯದ ಪುಸ್ತಕಗಳು. ನಮ್ಮ ಹಿರಿಯರು, ದಾರ್ಶನಿಕರ ಜ್ಞಾನ ಸಂಪತ್ತು ಈ ಪುಸ್ತಕಗಳಲ್ಲಿವೆ. ಅದನ್ನು ಓದಿ ಮನನ ಮಾಡಿಕೊಂಡು ಬೆಳೆಯುವ ಹುಮ್ಮನಸ್ಸನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.
ನಗರಕೇAದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ. ಸ್ವಾಗತಿಸಿದರು. ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಮಮತಾ ರೈ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯ ಮಂಗಳೂರು ಇಲ್ಲಿನ ಮುಖ್ಯ ಗ್ರಂಥಾಲಯಾಧಿಕಾರಿ ಗಾಯತ್ರಿ, ನಗರಸಭೆ ಪೌರಾಯುಕ್ತ ಮಹಾಂತೇಶ್ ಹಂಗರಗಿ ಉಪಸಸ್ಥಿತರಿದ್ದರು.

ಉತ್ತಮ ಓದುಗ ಪ್ರಶಸ್ತಿ ಪ್ರದಾನ : ಕಾರ್ಯಕ್ರಮದಲ್ಲಿ ಗ್ರಂಥಾಲಯ ಸಪ್ತಾಹದ ಅಂಗವಾಗಿ ನಗರಕೇಂದ್ರ ಗ್ರಂಥಾಲಯ ಹಾಗೂ ಶಾಖಾ ಗ್ರಂಥಾಲಯಗಳಿಗೆ ಭೇಟಿ ನೀಡಿ ಗ್ರಂಥಾಲಯದ ಸದುಪಯೋಗವನ್ನು ಪಡೆಯುತ್ತಿರುವ ಓದುಗರಾದ ಪ್ರಕಾಶ್ ಸುವರ್ಣ ಕಟಪಾಡಿ, ಸುಧಾ ಪೈ ಉಡುಪಿ, ರಾಜು ಭಂಡಾರಿ ಹಾಗೂ ಅನನ್ಯ ಸುನೀಲ್ ಅವರಿಗೆ ` ಉತ್ತಮ ಓದುಗ ‘ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉತ್ತಮ ಸಿಬಂದಿ ಸೇವಾ ಪುರಸ್ಕಾರವನ್ನು ಸಮುದಾಯ ಮಕ್ಕಳ ಕೇಂದ್ರ ಗ್ರಂಥಾಲಯದ ಸಹಾಯಕಿ ಗೀತಾ ಹಾಗೂ ಮಲ್ಲಾರು ಪಂಚಾಯಿತಿಯ ಗ್ರಂಥಾಲಯ ಮೇಲ್ವಿಚಾರಕಿ ನಸ್ರೀನ್ ಫಾತಿಮ ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ನಗರಕೇಂದ್ರ ಗ್ರಂಥಾಲಯದ ಅಜ್ಜರಕಾಡು ಶಾಖೆ, ಕೆ.ಎಂ.ಮಾರ್ಗ ಶಾಳೆ ಮತ್ತು ಸಮುದಾಯ ಮಕ್ಕಳ ಕೇಂದ್ರ ಗ್ರಂಥಾಲಯದಲ್ಲಿ ಗ್ರಂಥಾಲಯ ಸಪ್ತಾಹದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ನಡೆಸಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.

ಉಡುಪಿ ನಗರಕೇಂದ್ರ ಗ್ರಂಥಾಲಯದ ಗ್ರಂಥಪಾಲಕಿ ರಂಜಿತಾ ಸಿ. ಕಾರ್ಯಕ್ರಮ ನಿರೂಪಿಸಿದರು.ಜಿಲ್ಲಾ ಕೇಂದ್ರ ಗ್ರಂಥಾಲಯದ ಗ್ರಂಥಪಾಲಕಿ ನಮಿತಾ ಬಿ. ವಂದಿಸಿದರು. ಜಿಲ್ಲಾ ಕೇಂದ್ರ ಗ್ರಂಥಾಲಯದ ಪ್ರಥಮ ಧರ್ಜೆ ಸಹಾಯಕಿ ಪ್ರೇಮಾ ಹಾಗೂ ನಗರಕೇಂದ್ರ ಗ್ರಂಥಾಲಯದ ಪ್ರಥಮ ಧರ್ಜೆ ಸಹಾಯಕಿ ಶಕುಂತಳ ಕುಂದರ್ ಹಾಗೂ ಗ್ರಂಥಾಲಯ ಸಹಾಯಕಿ ಸುನೀತಾ ಬಿ.ಎಸ್. ಅವರು ವಿಜೇತರ ಪಟ್ಟಿ ವಾಚಿಸಿದರು.

LEAVE A REPLY

Please enter your comment!
Please enter your name here