“ಅಪ್ಪೆ ಬೇರ್ ದ ತುಳುನಾಡ್” ವಿಷಯಾಧಾರಿತ ರಾಷ್ಟ್ರೀಯ ತುಳು ವಿಚಾರಗೋಷ್ಠಿ – ಪ್ರಬಂಧ ಆಹ್ವಾನ

0
1

ಮುಲ್ಕಿ: ತುಳುನಾಡಿನ ತಾಯಿ ಮೂಲ ಸಂಸ್ಕೃತಿ, ಆಚಾರ–ವಿಚಾರ ಮತ್ತು ದೈವ ಪರಂಪರೆಯನ್ನು ಆಧಾರವಾಗಿಟ್ಟುಕೊಂಡು ನಡೆಯುವ “ಅಪ್ಪೆ ಬೇರ್ ದ ತುಳುನಾಡ್” ರಾಷ್ಟ್ರೀಯ ತುಳು ವಿಚಾರಗೋಷ್ಠಿ 2026 ಮೇ 24ರಂದು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ನಡೆಯಲಿದೆ.

ಈ ವಿಚಾರಗೋಷ್ಠಿಯ ಅಂಗವಾಗಿ ಸಂಶೋಧಕರು, ಲೇಖಕರು, ವಿದ್ಯಾರ್ಥಿಗಳು ಹಾಗೂ ತುಳು ಅಭಿಮಾನಿಗಳಿಗೆ ಪ್ರಬಂಧ ಮಂಡಿಸಲು ಅವಕಾಶ ಕಲ್ಪಿಸಲಾಗಿದೆ.

“ಅಪ್ಪೆ ಬೇರ್ ದ ತುಳುನಾಡ್” ವಿಷಯಕ್ಕೆ ಸಂಬಂಧಿಸಿದ ಪ್ರಬಂಧ ಮಾತೃಮೂಲ ಪದ್ಧತಿ ಸಂಬಂಧಪಟ್ಟ ಅಧ್ಯಯನ, ಅಳಿಯ ಸಂತಾನ ಪದ್ಧತಿ, ಮಾತೃಮೂಲ ಆಚರಣೆ ಜೀವನ ಪದ್ಧತಿ ಮತ್ತು ನಂಬಿಕೆಗಳು, ತುಳುನಾಡಿನ ಜನಪದ ಕಥೆಗಳಲ್ಲಿ ಮಾತೃ ಮೂಲ ಪದ್ಧತಿಗಳು, ಮಾತೃಮೂಲ ಪದ್ಧತಿ ನಿನ್ನೆ, ಇಂದು, ನಾಳೆ, ಮಾತೃಮೂಲ ಪದ್ಧತಿ “ಏನು? ಯಾಕೆ? ಹೇಗೆ?” – ಮಾತೃಮೂಲ ಸಂಸ್ಕೃತಿ ಮತ್ತು ಜೀವನ ಶೈಲಿಯ ವಿಶ್ಲೇಷಣೆ ಮುಂತಾದ ವಿಷಯಗಳಲ್ಲಿ ನಿಮ್ಮ ಪ್ರಬಂಧವನ್ನು ಮಂಡಿಸಬಹುದು.

ಈ ಕೆಳಗೆ ನಮೂದಿಸಿರುವ ವಿಷಯಗಳ ಮೇಲೆ ಸಂಶೋಧನಾ ಲೇಖ ನಗಳನ್ನು / ಪ್ರಬಂಧಗಳನ್ನು/ ಮಾಹಿತಿಗಳನ್ನು ಈ ಕೆಳಗೆ ನೀಡಿರುವ ವಿಳಾಸಕ್ಕೆ / ಈ ಮೇಲ್ / ಪೋಸ್ಟ್/ ವಾಟ್ಸಪ್/ ಮುಖಾಂತರ ದಿನಾಂಕ ಏಪ್ರಿಲ್ 30 , 2026 ರ ಒಳಗೆ ಕಳುಹಿಸಿಕೊಡಿ.

  1. ತುಳುನಾಡ ಮಾತ್ರ್ ಮೂಲಿಯ ಸಂಸ್ಕೃತಿ
  2. ತುಳುನಾಡ ಕೃಷಿ ಮತ್ತು ಮಾತ್ರ್ ಮೂಲಿಯ ಸಂಸ್ಕೃತಿ
  3. ಮಾತ್ರ್ ಮೂಲಿಯ ಸಂಸ್ಕೃ ತಿ ಮತ್ತು.ಜೀವನ ಶೈಲಿ.
  4. ತುಳುನಾಡ ಮಾತ್ರ್ ದೇವತೆಗಳು
  5. ಅಪ್ಪೆ ಕಟ್ಟ್ ದ ಪೊಣ್ಣು ದೈವಳು
  6. ತುಳುವ ಕಟ್ಟುಗಳಲ್ಲಿ ಅಪ್ಪೆ ಕಟ್ಟಿನ ಪ್ರಾಮುಖ್ಯತೆ
  7. ಅಳಿಯ ಕಟ್ಟು ಮತ್ತು ಮಕ್ಕಳ ಸಂತಾನ ಕಟ್ಟು.
  8. ದೈವಾರಾಧನೆ ಯಲ್ಲಿ ಅಪ್ಪೆ ಕಟ್ಟಿನ ಪ್ರಾಧಾನ್ಯತೆ
  9. ತುಳುನಾಡಿನ ಹೆಣ್ಣು ಮತ್ತು ಕುಟುಂಬ ಪದ್ಧತಿ
  10. ಅಪ್ಪೆ ಕಟ್ಟಿನ ಸಮಸ್ಯೆಗಳು ಮತ್ತು ಆಧುನಿಕ ಜಗತ್ತು
  11. ಅಪ್ಪೆ ಕಟ್ಟು ಮತ್ತು ಅದರ ಪ್ರಸ್ತುತತೆ
  12. ಅಪ್ಪೆ ಕಟ್ಟು ಮತ್ತು ಮಹಿಳೆ ಎದುರಿಸುತ್ತಿರುವ ಸಮಸ್ಯೆಗಳು.
  13. ಅಪ್ಪೆ ಕಟ್ಟು ವೈಜ್ಞಾನಿಕ ಪರಿಕಲ್ಪನೆಯೇ?
  14. ಪಾಡ್ದನ ಗಳಲ್ಲಿ ಅಪ್ಪೆ ಕಟ್ಟು
  15. ಸಿರಿ ಪಾಡ್ದನದಲ್ಲಿ ಅಪ್ಪೆ ಕಟ್ಟಿನ ಪ್ರಾಮುಖ್ಯತೆ ಮತ್ತು ಸವಾಲುಗಳು.
  16. ಅಪ್ಪೆ ಕಟ್ಟಿನ ಮೂರು ತಲೆಮಾರುಗಳ ಸಂಘರ್ಷ – ಸಿರಿ ಪಾಡ್ದನ
    ಇತ್ಯಾದಿ ವಿಷಯಗಳ ಮೇಲೆ ತಮ್ಮ ಸಂಶೋಧನಾ ಲೇಖನಗಳನ್ನು ಕಳುಹಿಸಿ.

ಕಳುಹಿಸುವ ವಿಳಾಸ :
ಗೀತಾ ಗಣೇಶ್
ಪ್ರಧಾನ ಕಾರ್ಯದರ್ಶಿ
“ಅಪ್ಪೆ ಬೇರ್ ದ ತುಳುನಾಡ್” ರಾಷ್ಟ್ರೀಯ ತುಳು ವಿಚಾರಗೋಷ್ಠಿ 2026
C/o ಅಕ್ಕ ಸಂಜೀವಿನಿ
ಮುಲ್ಕಿ – 574154, ತುಳುನಾಡು
Contact No : 94831 04506

WhatsApp : 9061086101
ಇಮೇಲ್: tuluworld@gmail.com

ಈ ಸಮಿನಾರಿನ ಮೂಲಕ ತುಳುನಾಡಿನ ಪರಂಪರೆ, ಸಂಸ್ಕೃತಿ ಮತ್ತು ನಂಬಿಕೆಗಳನ್ನು ಅಧ್ಯಯನ ಹಾಗೂ ಸಂಶೋಧನಾ ದೃಷ್ಟಿಯಿಂದ ಸಮಾಜಕ್ಕೆ ಪರಿಚಯಿಸುವ ಮಹತ್ವದ ವೇದಿಕೆ ರೂಪುಗೊಳ್ಳಲಿದೆ.

ಆಸಕ್ತರು ತಮ್ಮ ಪ್ರಬಂಧಗಳನ್ನು ನಿಗದಿತ ದಿನಾಂಕದೊಳಗೆ ಸಲ್ಲಿಸಿ ಈ ಅಪೂರ್ವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ವಿನಂತಿಸಲಾಗಿದೆ.

LEAVE A REPLY

Please enter your comment!
Please enter your name here