ಜಿಲ್ಲೆಯಲ್ಲಿ ನವರಾತ್ರಿ ಉತ್ಸವ ಸಂಪನ್ನ

0
38

ಉಡುಪಿ: ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ 10 ದಿನ ನಡೆದ ನವರಾತ್ರಿ ಉತ್ಸವ ಗುರುವಾರ ವಿಜಯದಶಮಿಯಂದು ಸಂಪನ್ನಗೊಂಡಿತು.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನ, ನೀಲಾವರ ಮಹಿಷಮರ್ಧನಿ, ಕಡಿಯಾಳಿ ಮಹಿಷಮರ್ಧಿನಿ, ಕನ್ನರ್ಪಾಡಿ ಜಯದುರ್ಗಾ ದೇವಸ್ಥಾನ, ಕುಂಜಾರುಗಿರಿ ದುರ್ಗಾಪರಮೇಶ್ವರಿ ದೇವಸ್ಥಾನ, ಅಂಬಲಪಾಡಿ ಮಹಾಕಾಳಿ&ಜನಾರ್ದನ ದೇವಸ್ಥಾನಗಳಲ್ಲಿ ನಡೆದ ವಿಶೇಷ ಪೂಜೆ, ಚಂಡಿಕಾ ಯಾಗದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ವಿಜಯದಶಿಮಿಯಂದು ದೇವಿ ದೇವಸ್ಥಾನಗಳಲ್ಲಿ ನೂರಾರು ಮಂದಿ ಪೋಷಕರು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು. ಜಿಲ್ಲೆಯ ಹೆಚ್ಚಿನ ದೇವಾಲಯ ಮತ್ತು ಮನೆಗಳಲ್ಲಿ ಮಹಾನವಮಿ ಮತ್ತು ವಿಜಯದಶಮಿ ಅಂಗವಾಗಿ ತೆನೆ ಹಬ್ಬ ನಡೆಯಿತು. ಕೃಷ್ಣ ಮಠದಲ್ಲಿ ಕದಿರು ಕಟ್ಟುವ ಕಾರ್ಯ ನೆರವೇರಿತು.

ಆಯುಧ ಪೂಜೆ
ಜಿಲ್ಲೆಯ ಕೈಗಾರಿಕಾ ಟಕ, ವಿವಿಧ ಪೊಲೀಸ್​ ಠಾಣೆ, ಅಂಗಡಿಗಳಲ್ಲಿ ಮಹಾನವಮಿ ಅಂಗವಾಗಿ ಬುಧವಾರ ಆಯುಧಪೂಜೆ ನೆರವೇರಿತು. ಜಿಲ್ಲಾ ಸಶಸ ಮೀಸಲು ಪಡೆ ಕೇಂದ್ರ ಸ್ಥಾನ ಚಂದು ಮೈದಾನದಲ್ಲಿ ಆಯುಧ ಪೂಜೆ ನಡೆಯಿತು. ಅಜ್ಜರಕಾಡು ಸಾರಥಿ ಭವನ ಮುಂಭಾಗ ಸರ್ಕಾರಿ ವಾಹನಗಳಿಗೆ ವಾಹನ ಪೂಜೆ ಜರಗಿತು.

LEAVE A REPLY

Please enter your comment!
Please enter your name here