ಹೆಬ್ರಿ ಗೋಪಾಲ ಭಂಡಾರಿ ಸೇವಾ ಟ್ರಸ್ಟ್‌ ಅಧ್ಯಕ್ಷರಾಗಿ ನೀರೆ ಕೃಷ್ಣ ಶೆಟ್ಟಿ

0
15

ಹೆಬ್ರಿ : ಜನನಾಯಕ ಕಾರ್ಕಳ ಶಾಸಕರಾಗಿದ್ದ ದಿ. ಹೆಬ್ರಿ ಗೋಪಾಲ ಭಂಡಾರಿಯವರ ಹೆಸರಿನಲ್ಲಿ ದಿ. ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್‌ ಹೆಬ್ರಿ ರಚಿಸಲಾಗಿದೆ. ಹೆಬ್ರಿ ಗೋಪಾಲ ಭಂಡಾರಿ ಸೇವಾ ಟ್ರಸ್ಟ್‌ ಅಧ್ಯಕ್ಷರಾಗಿ ನೀರೆ ಕೃಷ್ಣ ಶೆಟ್ಟಿಯವರನ್ನು ಚೈತನ್ಯ ಯುವ ವೃಂದದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ದೀಪಾ ಭಂಡಾರಿ ಚಾರ, ಕೋಶಾಧಿಕಾರಿಯಾಗಿ ಎಚ್.‌ ಜನಾರ್ಧನ್‌ ಹೆಬ್ರಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ರಾಜೇಶ ಭಂಡಾರಿ ಹುತ್ತುರ್ಕೆ ಚಾರ, ವಾದಿರಾಜ ಶೆಟ್ಟಿ ಚಾರ, ನವೀನ್‌ ಕೆ ಅಡ್ಯಂತಾಯ, ಪತ್ರಕರ್ತ ಸುಕುಮಾರ್‌ ಮುನಿಯಾಲ್‌, ಗೋಪಿನಾಥ ಭಟ್‌ ಮುನಿಯಾಲು, ಮೋಹನದಾಸ ನಾಯಕ್‌ ಶಿವಪುರ, ಜಗದೀಶ ಹೆಗ್ಡೆ ಕಡ್ತಲ, ಜಗನ್ನಾಥ ಕುಲಾಲ್‌ ಶಿವಪುರ, ಬೈಕಾಡಿ ಮಂಜುನಾಥ ರಾವ್‌ ಶಿವಪುರ, ಪ್ರಕಾಶ ಪೂಜಾರಿ ಮಾತಿಬೆಟ್ಟು, ಜಾನ್‌ ಟೆಲ್ಲಿಸ್‌ ಅಜೆಕಾರು, ರಾಘವೇಂದ್ರ ನಾಯ್ಕ್‌ ಹಾಗೂ ಅಜೀವ ಸದಸ್ಯರನ್ನು ನೇಮಕ ಮಾಡಲಾಗಿದೆ. ಹೆಬ್ರಿ ಗೋಪಾಲ ಭಂಡಾರಿ ಸೇವಾ ಟ್ರಸ್ಟ್‌ ಪ್ರಥಮ ಸಭೆಯು ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಗೋಪಾಲ ಭಂಡಾರಿಯವರ ಮನೆಯಲ್ಲಿ ನಡೆಯಿತು. ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಗೋಪಾಲ ಭಂಡಾರಿಯವರ ಪತ್ನಿ ಪ್ರಕಾಶಿನಿ ಭಂಡಾರಿ, ರಾಜೇಶ ಭಂಡಾರಿ, ಶ್ವೇತ ಕುಮಾರ್‌ ಮುಂತಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here