ಫ್ಯಾಷನ್ ಸ್ಪರ್ಧೆಯಲ್ಲಿ ನೇಹಾ ಚನ್ನಗಿರಿ ಪ್ರಥಮ ಸ್ಥಾನ

0
324


ದಾವಣಗೆರೆ: ಅಭಿನಿತ ಚಾರಿಟೇಬಲ್ ಟ್ರಸ್ಟ್ವತಿಯಿಂದ ಇತ್ತೀಚಿಗೆ ದಾವಣಗೆರೆಯ ಬಾಪೂಜಿ ಭವನಲ್ಲಿ ನಡೆದ ಫ್ಯಾಷನ್ ದಿವ ಪ್ರೆöÊಡ್ ಐಶಾನ್ ಆಫ್ ಸೌತ್ ಇಂಡಿಯಾ-2025 ಸೀಸನ್ 7 ಯಶಸ್ವಿಯಾಗಿ ಆಯೋಜಿಸಲಾಯಿತು.
ದಾವಣಗೆರೆಯ ಹೆಸರಾಂತ ಚನ್ನಗಿರಿ ವಂಶದ ಶ್ರೀಮತಿ ರಶ್ಮಿ ಮತ್ತು ಭರತ ಎಸ್. ಚನ್ನಗಿರಿಯವರ ಸುಪುತ್ರಿ ಕುಮಾರಿ ನೇಹಾ ಚನ್ನಗಿರಿಯವರು ಈ ಫ್ಯಾಷನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ದಾವಣಗೆರೆಯ ಆರ್.ಜಿ. ಕಾಲೇಜಿನ ತೃತೀಯ ವರ್ಷದ ಬಿ.ಬಿ.ಎ. ವ್ಯಾಸಂಗ ಮಾಡುತ್ತಿರುವ ನೇಹಾ ಚನ್ನಗಿರಿಯವರು ಚಿತ್ರಕಲೆ, ಸಾಂಸ್ಕೃತಿಕ ಚಟುವಟಿಕೆ ಸಂಗೀತ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಶ್ಲಾಘನೀಯ. ಈ ಸಮಾರಂಭದಲ್ಲಿ ದೂಡಾ ಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿ, ದಾವಣಗೆರೆ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಎ.ನಾಗರಾಜ್, ಅಭಿನಿತ ಚಾರಿಟೇಬಲ್ ಟ್ರಸ್ಟ್ನ ಸಂಸ್ಥಾಪಕರಾದ ಶ್ರೀಮತಿ ಫ್ಯಾಷನ್ ದಿವ ಎಂ.ಎನ್. ಶಿವಕುಮಾರ್ ಸ್ಟೆಟ್ ಪಾರ್ಕ್ ಮಾಲೀಕರಾದ ರೂಪಿತ್ ನಾಗರಾಜ್, ನಿಖಿತ ಶೆಟ್ಟಿ, ರೋಹಿತ್ ಕೂಡ್ಲಿ, ಫ್ಯಾಷನ್ ಗ್ರೂಮರ್, ಶಬದ್ ಖಾನ್, ಗೌರವ್ ಲೋಖ್ರೆ ಮುಂತಾದವರು ಉಪಸ್ಥಿತರಿದ್ದರು.
ಕುಮಾರಿ ನೇಹಾ ಚನ್ನಗಿರಿಯವರಿಗೆ ಚನ್ನಗಿರಿ ವಂಶಸ್ಥರು ಸೇರಿದಂತೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಹಾಗೂ ವಿವಿಧ ಸಂಘಟನೆಗಳು ಅಭಿಮಾನದಿಂದ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here