ಸುರತ್ಕಲ್ :ಹಬ್ಬ ಹರಿದಿನಗಳನ್ನು ಆಚರಿಸುವುದು ಕೇವಲ ಮೋಜು ಮಸ್ತಿಗೆ ಮಾತ್ರ ಅಲ್ಲ ಅವುಗಳು ನಮ್ಮ ಸಂಸ್ಕೃತಿಯನ್ನು ಹಳೆ ತಲೆಮಾರಿನಿಂದ ಹೊಸ ತಲೆಮಾರಿಗೆ ಕೊಂಡೊಯ್ಯುವ ವಾಹಕಗಳು ಎಂದು ಚೇಳೈರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ! ಜ್ಯೋತಿ ಚೇಳೈರು ನುಡಿದರು. ಅವರು ಚೇಳೈರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ನಡೆಸಿದ ಆಟಿದ ನೆಂಪು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ವೇದಿಕೆಯಲ್ಲಿ ಪ್ರಾಧ್ಯಾಪಕರಾದ ಚಂದ್ರನಾಥ್ ಎಂ,ಶೋಭಾ ಶರ್ಮ,ರವಿಚಂದ್ರ,ಜಯಶ್ರೀ, ಅಪರ್ಣ,ತ್ರಿವೇಣಿ ,ಕುಮಾರಿ ದೀಕ್ಷ ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹಳ್ಳಿ ಮದ್ದನ್ನು ತಯಾರಿಸುವ ಸ್ಪರ್ಧೆಯನ್ನು ಏರ್ಪಡಿಸಲಾಯಿತು.