ಕಾಸರಗೋಡು : ಕಾಸರಗೋಡು ನಾಗರಕಟ್ಟೆಯ ಶ್ರೀ ಭಿಕ್ಷು ಲಕ್ಷಮಣಾನಂದ ಸ್ವಾಮೀಜಿ 1930ರಲ್ಲಿ ಸ್ಥಾಪಿಸಿದ ಶ್ರೀ ಶಾರದಾ ಭಜನಾಶ್ರಮದ ಸಮಗ್ರ ಜೀರ್ಣೋದ್ದಾರ ನೂತನ ನಾಗನ ಕಟ್ಟೆ, ಅಪೂರ್ಣ ಸಭಾಭವನ ಪೂರ್ಣಗೋಳಿಸುವಿಕೆ,ಹಾಗೂ ಬ್ರಹ್ಮ ಕಲಶೋತ್ಸವ ಬಗ್ಗೆ ಸಮಿತಿ ವತಿಯಿಂದ “ವಿನಂತಿ ಪತ್ರ “ಬಿಡುಗಡೆ ಸಮಾರಂಭ ಸಮಿತಿ ಅಧ್ಯಕ್ಷರಾದ ಶ್ರೀ ಲಕ್ಷ್ಮಣ ಬೀರಂತಬೈಲ್ ಅದ್ಯಕ್ಷತೆಯಲ್ಲಿ ನಡೆಯಿತು. 11.10.2025.ರ ರಾತ್ರಿ 9ಗಂಟೆಗೆ ಶ್ರೀ ಶಾರದಾಂಬ ಸನ್ನಿದಿಯಲ್ಲಿ ಪೂಜಾವೇಳೆ ಸಮಿತಿ ಅಧ್ಯಕ್ಷರಾದ ಲಕ್ಷ್ಮಣ ಬೀರಂತಬೈಲ್ ಕ್ಷೇತ್ರ ಅರ್ಚಕರಾದ ಗಣಪತಿ ಭಟ್ ಇವರೀಗೆ ವಿನಂತಿ ಪತ್ರ ನೀಡಿ, ಕ್ಷೇತ್ರ ನಡೆಯಲ್ಲಿ ಸಮರ್ಪಸಿ ಸಭಾ ಸದಸ್ಯರೀಗೆ ವಿತರಿಸಿ ಬಿಡುಗಡೆ ಮಾಡಿದರು.
ಸುಮಾರು 30ಲಕ್ಷ ಅಂದಾಜು ವೆಚ್ಚದ ಜೀರ್ಣೋದ್ದಾರ ಕಾಮಗಾರಿಯಲ್ಲಿ ಊರ, ಪರವೂರ ಆಸ್ತಿಕ ಬಂಧುಗಳ ಪೂರ್ಣ ಮನಸ್ಸಿನ ಸಹಕಾರ, ಜನಭಲ, ಧನಭಲ, ಈ ಸಮಾಜ ಹಿತರಕ್ಷಣ, ಹಾಗೂ ಧರ್ಮ ಸಂರಕ್ಷಣ ಕಾರ್ಯದಲ್ಲಿ ಬೇಕಿದೆ ಎಂದು ಮುಖ್ಯ ಅತಿಥಿಯಾದ ಕನ್ನಡ ಭವನ ಅಧ್ಯಕ್ಷರೂ, ಸಮಿತಿ ಉಪಾಧ್ಯಕ್ಷರೂ ಆದ ವಾಮನ್ ರಾವ್ ಬೇಕಲ್ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರುಗಳಾದ ರಮೇಶ್ ಕೆ. ಎಸ್. ಆರ್. ಟಿ. ಸಿ., ಪಾಂಡುರಂಗ ವಿದ್ಯಾನಗರ, ಮೋಹನ್ದಾಸ್ ಕೊರಕ್ಕೊಡು, ಪ್ರದಾನ ಕಾರ್ಯದರ್ಶಿ ದಿನೇಶ್ ನಾಗರಕಟ್ಟೆ, ರಾಜ್ ಕುಮಾರ್, ನವೀನ್ ನಾಯ್ಕ್, ಪ್ರಸಾದ್, ರಮಾನಂದ, ಉದಯಕುಮಾರ್ ಸಿ. ಎಸ್, ಪ್ರದೀಪ್ ನಾಯ್ಕ್ ಮುಂತಾದವರಿದ್ದರು. ದಿನೇಶ್ ನಾಗರಕಟ್ಟೆ ಸ್ವಾಗತಿಸಿ, ಮೋಹನ್ದಾಸ್ ವಂದಿಸಿದರು, ವಾಮನ್ ರಾವ್ ಬೇಕಲ್ ಕಾರ್ಯಕ್ರಮ ನಿರ್ವಹಿಸಿದರು.
Home Uncategorized ಶ್ರೀ ಶಾರದಾ ಭಜನಾಶ್ರಮ ನಾಗರಕಟ್ಟೆ ನೂತನ ನಿರ್ಮಾಣ ಹಾಗೂ ಬ್ರಹ್ಮ ಕಲಶೋತ್ಸವ ಸಮಿತಿ ವಿನಂತಿ ಪತ್ರ ಬಿಡುಗಡೆ