ನವದೆಹಲಿ:ಎಕ್ಸಲೆಂಟ್ ಮೂಡುಬಿದಿರೆ ಪ್ರಶಂಸಿದ ರಾಷ್ಟ್ರಪತಿಗಳು: ರಾಣಿ-ಚೆನ್ನಭೈರಾದೇವಿ ಸ್ಮಾರಕ ಅಂಚೆ ಚೀಟಿ ಬಿಡುಗಡೆ ಸಮಾರಂಭ

0
7


ನವದೆಹಲಿ: : ಇಡೀ ಭರತ ಖಂಡದಲ್ಲಿ ೧೫೫೨ ರಿಂದ ೧೬೦೬ ರವರೆಗೆ ೫೪ ವರ್ಷಗಳ ಸುದೀರ್ಘಕಾಲ ರಾಜ್ಯಭಾರ ನಡೆಸಿದ ರಾಣಿಚೆನ್ನಭೈರಾದೇವಿಯ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆ ಪ್ರಕಟಸಿದ ವಿಶೇಷ ಅಂಚೆ ಚೀಟಿಯ ಲೋಕಾರ್ಪಣೆಯ ಐತಿಹಾಸಿಕ ಕಾರ‍್ಯಕ್ರಮ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ದಿನಾಂಕ ೨೪.೭.೨೦೨೫ ರಂದು ನಡೆಯಿತು. ಗೌರವಾನ್ವಿತ ರಾಷ್ಟçಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮುಅವರು ಈ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದರು. ಅಂಚೆಚೀಟಿ ಬಿಡುಗಡೆಗೊಳಿಸಿ ಮಾತನಾಡಿದ ರಾಷ್ಟçಪತಿಗಳು ರಾಣಿಚೆನ್ನಭೈರಾದೇವಿಯ ಕೊಡುಗೆಗಳನ್ನು ಸ್ಮರಿಸಿಕೊಂಡು ರಾಷ್ಟçದಗೌರವವನ್ನು ಸಲ್ಲಿಸಿದರು.ರಾಷ್ಟ್ರ ಪತಿಗಳು ತಮ್ಮ ಸಂದೇಶದಲ್ಲಿ, ರಾಣಿ ಚೆನ್ನಭೈರಾದೇವಿಯ ಧೈರ್ಯ ಸ್ಥರ್ಯ ಮತ್ತು ಸಾಧನೆಯನ್ನು ನಾವು ಸುವರ್ಣಾಕ್ಷರಗಳಲ್ಲಿ ಮಾತ್ರವಲ್ಲ ವಜ್ರದ ಅಕ್ಷರಗಳಲ್ಲಿ ಕೆತ್ತಬೇಕು. ರಾಣಿ ಚೆನ್ನಭೈರಾದೇವಿಯ ನಾಡಿನರಕ್ಷಣೆಗಾಗಿ ಆಕೆ ನಡೆಸಿದ ಹೋರಾಟ, ಸಾಮಾಜಿಕ ಕಾಳಜಿ, ಜಾತ್ಯತೀತ ಮನೋಭಾವ, ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಅಭಿವೃದ್ಧಿಗಾಗಿ ಆಕೆ ಕೈಕೊಂಡ ರಾಜನೀತಿಗಳನ್ನು ಮುಕ್ತಕಂಠದಿAದ ಪ್ರಶಂಶಿಸಿದರು. ಅಂಚೆಚೀಟಿ ಹೊರತಂದ ಭಾರತೀಯ ಅಂಚೆ ಇಲಾಖೆ ಹಾಗೂ ಪ್ರಾಯೋಜಕರಾದ ಮೂಡುಬಿದಿರೆಯಎಕ್ಸಲೆಂಟ್ ವಿದ್ಯಾಸಂಸ್ಥೆಗಳನ್ನು ಅಭಿನಂದಿಸಿದರು.
ಕಾರ್ಯಕ್ರಮದಆರಂಭದಲ್ಲಿರಾಜ್ಯಸಭಾ ಸದಸ್ಯರಾದಡಾ.ಡಿ.ವೀರೇಂದ್ರ ಹೆಗ್ಗಡೆಯವರುಅತಿಥಿಗಣ್ಯರನ್ನು ಸ್ವಾಗತಿಸುತ್ತ, “ರಾಜ್ಯ ವಿಸ್ತರಣೆರಾಣಿಚೆನ್ನಭೈರಾದೇವಿಯರಾಜ ನೀತಿಯಾಗಿರಲಿಲ್ಲ. ಬದಲಿಗೆ ಪ್ರಜೆಗಳ ಬದುಕಿಗೆ ಸುಖ ಸೌಲಭ್ಯಒದಗಿಸುವುದು ಅವಳ ಉದ್ದೇಶವಾಗಿತ್ತು. ಆಕೆ ವಾಣಿಜ್ಯ ವ್ಯವಹಾರದಲ್ಲಿ ನಿಷ್ಣಾತೆಯಾಗಿದ್ದಳು.ತನ್ನರಾಜ್ಯದಿಂದ, ಕರಿ ಮೆಣಸು, ದಾಲ್ಚಿನ್ನಿ, ಶುಂಠಿ, ಏಲಕ್ಕಿ, ಗಂಧ, ಅಕ್ಕಿ, ಬೆಲ್ಲ, ದಂತ ಮುಂತಾದ ವಸ್ತುಗಳನ್ನು ವಿದೇಶಗಳಿಗೆ ರಫ್ತು ಮಾಡಿಅಪಾರ ಪ್ರಮಾಣದ ವಿದೇಶೀ ವಿನಿಮಯಗಳಿಸಿದ್ದಳು. ರಾಜಕೀಯವಾಗಿ ವೈರ ಸಾಧಿಸುತ್ತಿದ್ದ ಪೋರ್ಚುಗೀಸರೊಡನೆಉತ್ತಮ ವ್ಯಾವಹಾರಿಕ ಸಂಬAಧ ಇರಿಸಿಕೊಂಡು, ಅವರಿಂದಲೇ “ರೈನಾದ ಪೆಮೆಂಟಾ” ಅರ್ಥಾತ್ “ಕರಿಮೆಣಸಿನ ಅರಸಿ” ಎಂಬ ಬಿರುದು ಪಡೆದಿದ್ದಳು.ಅಂಥ ಹೆಮ್ಮೆಯ ವೀರವನಿತೆಗೆಇಂದುದೇಶದದೊಡ್ಡಗೌರವ ಪ್ರಾಪ್ತವಾಗಲಿದೆ” ಎಂದು ಆಶಿಸಿದರು.
ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕರ‍್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್‌ಅವರು ಪ್ರಾಸ್ತಾವಿಕವಾಗಿ ಮಾತನಾಡಿರಾಣಿ ಚೆನ್ನಭೈರಾದೇವಿಯಇತಿಹಾಸ, ವೀರತ್ವ ಹಾಗೂ ಸಮಾಜಮುಖಿ ಕರ‍್ಯಗಳನ್ನು ನೆನಪಿಸಿ ಗೌರವ ಸೂಚಿಸಿದರು. ಅಲ್ಲದೆ ಚೆನ್ನಭೈರಾದೇವಿ ಸ್ಮಾರಕ ಅಂಚೆ ಚೀಟಿಯನ್ನು ಹಾಗೂ ಇಂದಿನ ಕಾರ‍್ಯಕ್ರಮವನ್ನು ಎಕ್ಸಲೆಂಟ್‌ ಎಜುಕೇಶನ್ ಫೌಂಡೇಶನ್, ಮೂಡುಬಿದಿರೆ ಇದರ ಮೂಲಕ ಪ್ರಾಯೋಜಿಸಲಾಗಿದೆಎಂಬುದನ್ನೂ ಅವರು ವಿವರಿಸಿದರು.
ಕರ‍್ಯಕ್ರಮಕ್ಕೆ ಮಾರ್ಗದರ್ಶನ ನೀಡಿಸಹಕರಿಸಿದವ ಕೇಂದ್ರಸಚಿವರಾದಪ್ರಹ್ಲಾದಜೋಷಿ ಅವರುರಾಣಿಚೆನ್ನಭೈರಾದೇವಿಯ ಶೌರ್ಯ, ದೃಢ ನಿರ್ಧಾರ ಮತ್ತು ಆಡಳಿತ ಕೌಶಲ್ಯವನ್ನು ಸ್ಮರಿಸಿದರು.ರಾಣಿಚೆನ್ನಭೈರಾದೇವಿ ವಾಣಿಜ್ಯ ಮತ್ತು ನೌಕಾಯಾನದಲ್ಲಿ ದಿಟ್ಟ ಹೆಜ್ಜೆಇಟ್ಟ ಹೆಗ್ಗುರುತು ಸ್ವರೂಪಎಂದುಅವರು ಹೇಳಿದರು. ಪೋರ್ಚುಗೀಸ್ ಬಲಗಳ ವಿರುದ್ಧ ನಿರ್ಭೀತಿಯಾಗಿ ಪ್ರತಿರೋಧಿಸಿದ ರಾಷ್ಟಿçÃಯ ಸ್ವಾಭಿಮಾನದ ಸಂಕೇತವಾಗಿದ್ದಾಳೆ ಎಂದರು.ರೈತರು ಮತ್ತು ಮೀನುಗಾರರ ನೆಮ್ಮದಿಗೆ ಹಲವಾರು ಸಾಮಾಜಿಕ ಸೌಲಭ್ಯಗಳನ್ನು ನೀಡಿದಳು ಎಂಬುದನ್ನುಜೋಷಿ ತಿಳಿಸಿದರು. ಇಂತಹ ಮಹಾನ್ ಮಹಿಳೆಯ ನೆನಪಿಗಾಗಿ ಸ್ಮಾರಕಅಂಚೆಪಟ್ಟಿ ಬಿಡುಗಡೆ ಮಾಡುವುದು ಹೆಮ್ಮೆಯ ವಿಚಾರಎಂದುಅವರುಅಭಿಪ್ರಾಯಪಟ್ಟರು.ಅಂಚೆ ಚೀಟಿ ಪ್ರಾಯೋಜಕರಾದ ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯಅಧ್ಯಕ್ಷರಾದ ಶ್ರೀ ಯುವರಾಜ ಜೈನ್ ಉಪಸ್ಥಿತರಿದ್ದು ಶುಭಕೋರಿದರು.
ಕರ‍್ಯಕ್ರಮದಲ್ಲಿದೆಹಲಿಯ ಅಂಚೆ ಮಹಾನಿರ್ದೇಶಕರಾದ ಅಖಿಲೇಶ್‌ಕುಮಾರ್ ಪಾಂಡಿಯವರು, ಹುಬ್ಬಳ್ಳಿಯ ಸಾಮಾಜಿಕಕರ‍್ಯಕರ್ತರಾದ ಮಹೇಂದ್ರ ಸಿಂಗ್, ಕರಿಮೆಣಸಿನ ರಾಣಿಕಾದಂಬರಿಯ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಚಿರಪರಿಚಿತರಾಗಿರುವಖ್ಯಾತ ಲೇಖಕರಾದಡಾ.ಗಜಾನನ ಶರ್ಮ, ಸಂಯೋಜಕರಾದ ಹುಬ್ಬಳ್ಳಿಯ ಖ್ಯಾತಉದ್ಯಮಿ ಶ್ರೀ ಮಹಾವೀರಕುಂದೂರ್, ಎಕ್ಸಲೆಂಟ್ ವಿದ್ಯಾಸಂಸ್ಥೆಯ ಆಡಳಿತ ನಿರ್ದೇಶಕರೂಕರ‍್ಯಕ್ರಮ ಸಂಯೋಜಕರೂಆದಡಾ. ಬಿ.ಪಿ.ಸಂಪತ್‌ಕುಮಾರ, ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತುಇತರಗಣ್ಯರು ಈ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾದರು.
ಎಕ್ಸಲೆಂಟ್ ವಿದ್ಯಾಸಂಸ್ಥೆಯ ಪ್ರಾಯೋಜಕತ್ವದಲ್ಲಿ ಭಾರತೀಯ ಅಂಚೆ ಇಲಾಖೆ ಪ್ರಕಟಿಸಿದ ರಾಣಿಚೆನ್ನಭೈರಾದೇವಿಯಅಂಚೆಚೀಟಿ ಬಿಡುಗಡೆ ಸಮಾರಂಭವುಇತಿಹಾಸದ ಪುಟದಲ್ಲಿ ಶಾಶ್ವತ ಸ್ಥಾನ ಪಡಯುವಲ್ಲಿ ಸಾರ್ಥಕತೆಯನ್ನು ಪಡೆಯಿತು. ಇತಿಹಾಸದಗರ್ಭದಲ್ಲಿ ಮರೆಯಾಗಿದ್ದ ಮಹಾನ್‌ಚೇತನವೊಂದಕ್ಕೆಗೌರವ ನೀಡುವ ಹಾಗೂ ಹೊಸತಲೆಮಾರಿನಲ್ಲಿರಾಣಿಯ ಪೌರುಷ, ರಾಜನೀತಿ, ದೂರದೃಷ್ಟಿಯ ಆಡಳಿತ, ನಾಡಪ್ರೇಮ, ಸಂಸ್ಕೃತಿ ಪ್ರೀತಿ ಮೊದಲಾದ ನೆನಪುಗಳನ್ನು ಪುನರ್ ಸ್ಥಾಪಿಸುವ ರಾಷ್ಟçಭಕ್ತಿಯ ಪ್ರತೀಕವಾಗಿಯೂ ಗಮನಸೆಳೆಯಿತು.

LEAVE A REPLY

Please enter your comment!
Please enter your name here