ನವಶಕ್ತಿ , ನವಸಂಕಲ್ಪ!

0
15

ಸರಸ್ ಬಾಬುರಾಯ ಕಾಂಚನ್ ಚಾರಿಟೆಬಲ್ ಟ್ರಸ್ಟ್ (ರಿ.) ವತಿಯಿಂದ ಇಂದು (ಡಿಸೆಂಬರ್ 13, 2025) ಆಯೋಜಿಸಿದ್ದ ‘ಆಶಾ ಗೌರವ ಮತ್ತು ಸಂಕಲ್ಪ ಸಮ್ಮೇಳನ’ – ಆಶಾ ಕಿರಣೋತ್ಸವ ಕಾರ್ಯಕ್ರಮವು ಅದ್ಭುತ ಯಶಸ್ಸು ಕಂಡಿದೆ.

ಪ್ರಸಾದ್ ರಾಜ್ ಕಾಂಚನವರ ಮಾರ್ಗದರ್ಶನದಲ್ಲಿ ಸಮಾಜದ ವಿವಿಧ ಸ್ತರದ ಸಾಧಕರಿಗೆ ಗೌರವ ಸಲ್ಲಿಸಿ, ಭವಿಷ್ಯದ ಬಗೆಗಿನ ನಮ್ಮ ಸಂಕಲ್ಪವನ್ನು ಇನ್ನಷ್ಟು ಗಟ್ಟಿಗೊಳಿಸಲಾಯಿತು.​ಬ್ರಹ್ಮಾವರದ ಹೋಟೆಲ್ ಆಶ್ರಯದಲ್ಲಿ ನಡೆದ ಈ ಮಹತ್ವದ ಕಾರ್ಯಕ್ರಮಕ್ಕೆ ಗಣ್ಯರು ಬಂಧು ಮಿತ್ರರು ಆಗಮಿಸಿ ಶುಭ ಹಾರೈಸಿದರು.ಇದೇ ಉತ್ಸಾಹ ಮತ್ತು ಶಕ್ತಿಯೊಂದಿಗೆ ನಮ್ಮ ಸೇವಾ ಕಾರ್ಯ ಮುಂದುವರಿಯಲಿದೆ.

ಈ ಕಾರ್ಯಕ್ರಮದಲ್ಲಿ ಉಡುಪಿ ನಗರ ಪ್ರಾಧಿಕಾರ ಅಧ್ಯಕ್ಷರು ದಿನಕರ್ ಹೆರೂರು,ಬ್ರಹ್ಮಾವರ ಬ್ಲಾಕ್ ಅಧ್ಯಕ್ಷರು ರಾಘವೇಂದ್ರ ಶೆಟ್ಟಿ,ಬ್ರಹ್ಮಾವರದ ಗ್ಯಾರಂಟಿ ತಾಲೂಕು ಸಮಿತಿಯ ಅಧ್ಯಕ್ಷರು ಡಾ ಸುನಿತಾ ಶೆಟ್ಟಿ,ಅನಿತಾ ಪೂಜಾರಿ , ಸುಧಾಕರ್ ಶೆಟ್ಟಿ ಮೈರ್ಮಾಡಿ, ಮಾಜಿ ಜಿಲ್ಹಾ ಪಂಚಾಯತ್ ಸದಸ್ಯೆ ಗೋಪಿ ಕೆ ನಾಯಕ್ , ಸುದೇಶ್ ಶೆಟ್ಟಿ,ಅಫ್ತಾಬ್ ಅಬ್ದುಲ್ ರಝಕ್,ಬ್ರಹ್ಮಾವರ ವ್ಯಾಪ್ತಿಯ ವೈದ್ಯಧಿಕಾರಿಗಳು ಸೇರಿದಂತೆ ಸ್ಥಳೀಯ ಅನೇಕರು ಮುಖಂಡರು ಉಪಸ್ಥಿತರಿದ್ದರು .

LEAVE A REPLY

Please enter your comment!
Please enter your name here