ವರದಿ ರಾಯಿ ರಾಜ ಕುಮಾರ
ಬೊಂಡಂತಿಲ, ಪೆರ್ಮಂಕಿ, ಮಲ್ಲೂರು, ಅಮ್ಮುಂಜೆ ಗ್ರಾಮಸ್ಥರು ಹಲವಾರು ವರ್ಷಗಳ ಬೇಡಿಕೆಯನ್ನು ಮನ್ನಿಸಿದ ರಾಜ್ಯ ರಸ್ತೆ ಸಾರಿಗೆ ಪ್ರಾಧಿಕಾರದ ಮಂಗಳೂರು ವಲಯದ ಅಧಿಕಾರಿಗಳು ವಿಶೇಷ ಬಸ್ಸಿನ ಸಂಚಾರಕ್ಕೆ ಇಂದು ಚಾಲನೆ ನೀಡಿದರು. ಈ ಬಸ್ಸು ಸ್ಟೇಟ್ ಬ್ಯಾಂಕ್ ನಿಂದ ಹೊರಟು ಕುಲಶೇಖರ, ವಾಮನ್ಜೂರು, ತಾರಿಗುಡ್ಡೆ, ಮಲ್ಲೂರು, ಅಮುಂಜೆ ಮೂಲಕ ಪೊಳಲಿಗೆ ಸಂಪರ್ಕವನ್ನು ನೀಡುತ್ತದೆ ಎಂದು ಪ್ರಕಟಣೆ ತಿಳಿಸಿದೆ.
.