ದಿನಾಂಕ 12.07.2025 ಶನಿವಾರದಂದು ಉಡುಪಿ ಬೋರ್ಡ್ ಹೈಸ್ಕೂಲಲ್ಲಿ ಇಂಟರಾಕ್ಟ್ ಕ್ಲಬ್ ನ ಪದಗ್ರಹಣ ಕಾರ್ಯಕ್ರಮವು ನೆರವೇರಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಮಣಿಪಾಲ್ ಇದರ ಅಧ್ಯಕ್ಷರಾಗಿರುವಂತಹ ಶ್ರೀಮತಿ ರೋ,ಶಶಿಕಲಾ ವಹಿಸಿದ್ದು ಅಧ್ಯಕ್ಷರ ಹಾಗೂ ಸದಸ್ಯರ ಪದಗ್ರಹಣ ಕಾರ್ಯಕ್ರಮ ನೆರವೇರಿಸಿ ಮಕ್ಕಳು ವಿದ್ಯಾರ್ಥಿ ಜೀವನದಿಂದಲೇ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು.ಸಮಾಜದ ಹಿತ ಚಿಂತಕರಾಗಬೇಕು ಎಂದು ಹೇಳಿದರು. ಇಂಟ್ರಾಕ್ಟ್ ಕ್ಲಬ್ಬಿನ ನಿರ್ದೇಶಕರಾದ ಶ್ರೀ ರೊ, ಶ್ರೀಶ ಹೆಗ್ದೆಯವರು ಇಂಟ್ರಾಕ್ಟ್ ಕ್ಲಬ್ಬಿನ ಸ್ಥಾಪನೆ ಸಂಘದ ಕರ್ತವ್ಯದ ಬಗ್ಗೆ ತಿಳಿಸಿದರು. ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಹಾಗೂ ಇಂಟರಾಕ್ಟ್ ಕ್ಲಬ್ಬಿನ ಮಾರ್ಗದರ್ಶಿ ಶಿಕ್ಷಕರು ಆಗಿರುವ ಶ್ರೀಮತಿ ಲಕ್ಷ್ಮಿ ಹೆಗಡೆಯವರು ಮಕ್ಕಳಿಗೆ ಶುಭ ಹಾರೈಸಿದರು.ಶಾಲೆಯ ಹಿರಿಯ ಶಿಕ್ಷಕಿ ಶ್ರೀಮತಿ ಯಶೋಧಯವರು ನೂತನ ಇಂಟ್ರಾಕ್ಟ್ ಕ್ಲಬ್ಬಿನ ಅಧ್ಯಕ್ಷರಾಗಿರುವಂತ ಪೂರ್ಣಿಮ ಹಾಗೂ ಕಾರ್ಯದರ್ಶಿಯಾಗಿರುವ ಧನುಷ್ ಇವರ ಪರಿಚಯ ಮಾಡಿದರು. ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳೇ ಕಾರ್ಯಕ್ರಮದ ನಿರೂಪಣೆ,ಸ್ವಾಗತ, ಹಾಗೂ ವಂದನಾರ್ಪಣೆ ಮಾಡಿದರು.