ಮೂಡುಬಿದಿರೆಯಲ್ಲಿ ನ್ಯೂ ಕಾಂತೇಶ್ವರ ಜ್ಯುವೆಲ್ಲರ್ಸ್ ಉದ್ಘಾಟನೆ

0
9

ಮೂಡುಬಿದಿರೆ: ನಾಲ್ಕು ದಶಕಗಳಿಂದ ಮೂಡುಬಿದಿರೆಯಲ್ಲಿ ಚಿನ್ನ ಉದ್ಯಮದ ಪರಂಪರೆಯಲ್ಲಿ ಪಾರಂಪರಿಕ ಮತ್ತು ಆಧುನಿಕ ವಿನ್ಯಾಸದ ಉತ್ತಮ ಶ್ರೇಣಿಯ ಆಭರಣಗಳನ್ನು ಪರಿಚಯಿಸಿದ ಕಾಂತೇಶ್ವರ ಜುವೆಲ್ಲರ್ಸ್ ಪೋಸ್ಟ್ ಆಫೀಸು ಎದುರು ರಾಮಯ್ಯ ಕಾಂಪ್ಲೆಕ್ಸ್ ನಲ್ಲಿ ನ್ಯೂ ಕಾಂತೇಶ್ವರ ಜ್ಯುವೆಲ್ಲರ್ಸ್ ಸಂಸ್ಥೆಯನ್ನು ಏಪ್ರಿಲ್ 12 ರಂದು ಶುಭಾರಂಭಗೊಳಿಸಿದೆ. ಕಾಂತಾವರ ಜೀವಂಧರ ಜೈನ್ ಅವರು ದೀಪ ಬೆಳಗಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮೂಡುಬಿದಿರೆ ಜೈನ ಮಠದ ಚಾರುಕೀರ್ತೀ ಭಟ್ಟಾರಕ ಸ್ವಾಮೀಜಿ, ಮಾಜಿ ಸಚಿವ ಅಭಯ ಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಚೇರ್ಮನ್ ಡಾ. ಮೋಹನ ಆಳ್ವಾ, ಚೌಟರ ಅರಮನೆಯ ಕುಲದೀಪ್ ಎಂ, ಧನಲಕ್ಷ್ಮಿ ಉದ್ಯಮದ ಶ್ರೀಪತಿ ಭಟ್, ಹಾಗೂ ಇತರರು ಹಾಜರಿದ್ದರು.
ಸಂಸ್ಥೆಯ ಕೆ ಸುರೇಶ್ ಆಚಾರ್ಯ ಅತಿಥಿಗಳನ್ನು ಸ್ವಾಗತಿಸಿದರು. ಕೆ ದಿನೇಶ್ ಆಚಾರ್ಯ ಕಾರ್ಯಕ್ರಮ ಸಂಘಟಿಸಿದ್ದರು. ಕೆ ಸಂಜನ್ ಆಚಾರ್ಯ ವಂದಿಸಿದರು.

LEAVE A REPLY

Please enter your comment!
Please enter your name here