ಮೂಡುಬಿದಿರೆ: ಮಾನವೀಯ ಮೌಲ್ಯ, ನಿಸ್ವಾರ್ಥ ಸೇವೆ ಸಾರ್ಥಕ ಬದುಕಿನ ಅಮೂಲ್ಯ ರತ್ನಗಳು. ಸಂಘಟನೆಯನ್ನು ಸ್ಥಾಪಿಸುವುದು ಮಾತ್ರವಲ್ಲ. ಸೇವಾ ಚಟುವಟಿಕೆಗಳನ್ನು ರೂಪಿಸಿ, ಅದನ್ನು ಸಮರ್ಥವಾಗಿ ಅನುಷ್ಠಾನಗೊಳಿಸುವಂತಹ ಕೆಲಸವಾಗಬೇಕು. ಕಡಂದಲೆ, ಕಲ್ಲಮುಂಡ್ಕೂರು, ಕಾಂತಾವರ ಪರಿಸರದಲ್ಲಿ ಹೊಸ ಬೆಳಕು ಸಂಘಟನೆಯು ತಮ್ಮ ವಿಶಿಷ್ಟ ಸೇವೆಯ ಮುಖಾಂತರ ಅಶಕ್ತರ ಬಾಳಿಗೆ ಹೊಸ ಬೆಳಕು ನೀಡುತ್ತಿದೆ ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ನುಡಿದರು.
ಕಡಂದಲೆ-ಪಾಲಡ್ಕ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಸಭಾಭವನದಲ್ಲಿ ಭಾನುವಾರ ನಡೆದ ಹೊಸ ಬೆಳಕು ಸಮಾಜ ಸೇವಾ ಬಳಗ ಪಾಲಡ್ಕ, ಕಡಂದಲೆ, ಕಲ್ಲಮುಂಡ್ಕೂರು, ಕಾಂತಾವರ ವಲಯದ ಪ್ರಥಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಕಟೀಲು ಮೇಳದ ಅರ್ಚಕ ಗುರುಪ್ರಸಾದ್ ಭಟ್ ಎಣ್ಣೆಹೊಳೆ ಸಮಾರಂಭ ಉದ್ಘಾಟಿಸಿದರು.
ಮೋಹನ್‌ದಾಸ್ ಅಡ್ಯಂತಾಯ ಅಧ್ಯಕ್ಷತೆವಹಿಸಿ, ನಮ್ಮ ಸಂಘಟನೆಯಲ್ಲಿ 600 ಮಂದಿ ಸದಸ್ಯರಿದ್ದಾರೆ. ಸದಸ್ಯರು ತಮ್ಮಿಂದಾದ ನೆರವು ನೀಡಿದರೆ ಮತ್ತಷ್ಟು ಸೇವಾ ಚಟುವಟಿಕೆಗಳನ್ನು ಮಾಡಲು ಸಾಧ್ಯ. ಯುವಕ-ಯುವತಿಯರಲ್ಲಿ ಸೇವಾ ಚಟುವಟಿಕೆಯ ಮನೋಭಾವ ಹೆಚ್ಚುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.
ಸನ್ಮಾನ: ಪ್ರದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಸಮಾಜಸೇವಕ ರವಿ ಕಟಪಾಡಿ ಹಾಗೂ ಹ್ಯೂಮಾನಿಟಿ ಸಂಸ್ಥೆಯ ಸ್ಥಾಪಕ ರೋಶನ್ ಬೆಳ್ಮಣ್ ಅವರನ್ನು ಸನ್ಮಾನಿಸಲಾಯಿತು. ಅಶಕ್ತರಿಗೆ ಆರ್ಥಿಕ ನೆರವಿನ ಚೆಕ್ ವಿತರಿಸಲಾಯಿತು.
ಕೆಎಂಎಫ್ ನಿರ್ದೇಶಕ ಕೆ.ಪಿ ಸುಚರಿತ ಶೆಟ್ಟಿ, ಯುವವಾಹಿನಿ ಮೂಡುಬಿದಿರೆ ಘಟಕಾಧ್ಯಕ್ಷ ಮುರಳೀಧರ ಎಸ್.ಕೋಟ್ಯಾನ್, ಖಲಂದರ್ ಚಾರಿಟೇಬಲ್ ಟ್ರಸ್ಟ್ನ ಸುಲೇಮಾನ್ ಶೇಖ್ ಬೆಳುವಾಯಿ, ಉದ್ಯಮಿ ರಘುನಾಥ ದೇವಾಡಿಗ ಅಂಬೊಡಿಮಾರು, ಜೆಸಿಐ ವಲಯ15ರ ವಲಯ ಉಪಾಧ್ಯಕ್ಷ ಪ್ರಶಾಂತ್ ಕುಮಾರ್ ಪಾಲಡ್ಕ ಮುಖ್ಯ ಅತಿಥಿಯಾಗಿದ್ದರು.
ಹೊಸಬೆಳಕು ಸಂಘ ಸಂಘಟನೆಯ ಸ್ಥಾಪಕ ಮಹೇಶ್ ಜೆ.ಕೋಟ್ಯಾನ್, ಗೌರವಾಧ್ಯಕ್ಷರಾದ ಉದಯ ಶೆಟ್ಟಿ ಪಾಲಡ್ಕ, ಶೇಖರ್ ನೇರಲ್‌ಪಲ್ಕೆ, ಅಶೋಕ್ ಅಡ್ಯಂತಾಯ ಬೇಲಾಡಿ, ಪದ್ಮನಾಭ ಎಸ್.ಅಮೀನ್, ಶಿವಪ್ರಸಾದ್ ಶೆಟ್ಟಿ, ಸ್ಥಾಪಕ ಸಂಚಾಲಕರಾದ ಸತೀಶ್ ಪಾಲಡ್ಕ, ಮಹೇಶ್ ಕುಮಾರ್, ಉಪಾಧ್ಯಕ್ಷರಾದ ಜಯ ಸಿ.ಅಂಚನ್, ಕಾರ್ಯದರ್ಶಿ ಪ್ರಶಾಂತ್ ಆಚಾರ್ಯ, ಕೋಶಾಧಿಕಾರಿ ರೋಹಿತ್ ನೂಜಿ ಉಪಸ್ಥಿತರಿದ್ದರು.
ರಾಮ್ ಕುಮಾರ್ ಮಾರ್ನಾಡು ನಿರೂಪಿಸಿದರು.