ಕರಂಬಳ್ಳಿ ಸಂಜೀವ ಶೆಟ್ಟಿ 98ನೇ ಜಯಂತಿ ಪ್ರಯುಕ್ತ ನೂತನ ಪುತ್ಥಳಿ ಅನಾವರಣ, ಆಹಾರ ಕಿಟ್ ವಿತರಣೆ

0
28

ಕರಂಬಳ್ಳಿ ಫ್ರೆಂಡ್ಸ್ ರಿ., ಕರಂಬಳ್ಳಿ ಇವರ ವತಿಯಿಂದ ವಿಧಾನ ಪರಿಷತ್ ಮಾಜಿ ಸದಸ್ಯರು, ಹಿರಿಯ ರಾಜಕಾರಣಿ ಹಾಗೂ ಸಮಾಜಸೇವಕರಾದ ಕೀರ್ತಿಶೇಷ ಕರಂಬಳ್ಳಿ ಸಂಜೀವ ಶೆಟ್ಟಿ ಅವರ 98ನೇ ಜನ್ಮ ಜಯಂತಿ ಅಂಗವಾಗಿ ಆಯೋಜಿಸಲಾದ ನೂತನ ಪುತ್ಥಳಿ ಅನಾವರಣ ಹಾಗೂ ಅಶಕ್ತ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮ ಜರಗಿತ್ತು.

ಸಭಾ ಕಾರ್ಯಕ್ರಮದಲ್ಲಿ ದಿವಂಗತ ಸಂಜೀವ ಶೆಟ್ಟಿ ಅವರ ಸಮಾಜಮುಖಿ ಚಿಂತನೆಗಳು, ರಾಜಕೀಯ ಸೇವೆ ಮತ್ತು ಜನಪರ ಕಾರ್ಯಗಳನ್ನು ಸ್ಮರಿಸಿ, ಅವರ ಆದರ್ಶಗಳು ಸಮಾಜಕ್ಕೆ ಸದಾ ಮಾರ್ಗದರ್ಶಕವಾಗಲಿ ಎಂದು ಮಾಜಿ ಉಡುಪಿ ವಿಧಾನಸಭಾ ಶಾಸಕರಾದ ರಘುಪತಿ ಭಟ್ ಅವರು ಶುಭ ಹಾರೈಸಿದರು.

ಈ ಒಂದು ಸಂದರ್ಭದಲ್ಲಿ ಉಡುಪಿ ವಿಧಾನಸಭಾ ಶಾಸಕರಾದ ಯಶ್ ಪಾಲ್ ಸುವರ್ಣ ವರು ಮಾತನಾಡಿ ಕರಂಬಳ್ಳಿ ಸಂಜೀವ ಶೆಟ್ಟಿಯವರ ಕಾರ್ಯವೈಖರಿ ಹಾಗೂ ಆದರ್ಶ ಸರ್ವರಿಗೂ ಮಾದರಿಯಾಗಲಿ ಎಂದು ಶುಭ ಹಾರೈಸಿದರು.

ಈ ಒಂದು ಸಂದರ್ಭದಲ್ಲಿ ಬಿಜೆಪಿ ನಗರ ಅಧ್ಯಕ್ಷರಾದ ದಿನೇಶ್ ಪೂಜಾರಿ ಮಾಜಿ ನಗರಸಭಾ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿ ಹಾಗೂ ಬಿಜೆಪಿ ಮುಖಂಡರಾದ ಸುಪ್ರಸಾದ್ ಶೆಟ್ಟಿ ಹಾಗೂ ಮಹೇಶ್ ಠಾಕೂರ್ ಬಾಲಕೃಷ್ಣ ಶೆಟ್ಟಿ ಶಿವರಾಮ್ ಶೆಟ್ಟಿ ಪ್ರಸಾದ್ ಶೆಟ್ಟಿ ವಿನೋದ್ ಶೆಟ್ಟಿ ಸುಂದರ್ ಶೆಟ್ಟಿ ಗೋಪಾಲ ಪೂಜಾರಿ ಕಿಶೋರ್ ಪೂಜಾರಿ ದೀಪಕ್ ಪೂಜಾರಿ ಕೇಶವ ಶೇರಿಗಾರ ಪ್ರಮುಖ ಮುಖಂಡರು ಹಾಗೂ ಸಂಘ ಸಂಸ್ಥೆಯ ಮುಖಂಡರು ಹಾಗೂ ಅಭಿಮಾನಿಗಳು ಹಾಗೂ ಕುಟುಂಬಿಕರು ಉಪಸ್ಥಿತಿ ಇದ್ದರು.

ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಕರಂಬಳಿ ಫ್ರೆಂಡ್ಸ್ ನ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ ನೆರೆವೇರಿಸಿದರು . ಗಿರಿಧರ್ ಆಚಾರ್ಯ, ನಿಕಟ ಪೂರ್ವ ನಗರಸಭಾ ಸದಸ್ಯ ಕರಂಬಳ್ಳಿ ವಾರ್ಡ್. ಅವರು ಧನ್ಯವಾದ ಕಾರ್ಯಕ್ರಮವನ್ನು ನೆರೆವೇರಿಸಿದರು.

LEAVE A REPLY

Please enter your comment!
Please enter your name here