ಮೂಡುಬಿದಿರೆ ಯಲ್ಲಿ ನೂತನ ತಾಲೂಕು ಕಾನೂನು ಸೇವೆಗಳ ಸಮಿತಿ ಉದ್ಘಾಟನೆ

0
38

♦️ ಮಂದಾರ ರಾಜೇಶ್ ಭಟ್

​ ಮೂಡುಬಿದಿರೆ : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದಕ್ಷಿಣ ಕನ್ನಡ, ನ್ಯಾಯಾಂಗ ಇಲಾಖೆ ಮೂಡಬಿದ್ರೆ ಹಾಗೂ ವಕೀಲರ ಸಂಘ ಮೂಡಬಿದ್ರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿಯ ಉದ್ಘಾಟನಾ ಸಮಾರಂಭವು ಫೆಬ್ರವರಿ 23ರಂದು ಮಧ್ಯಾಹ್ನ 2.00 ಗಂಟೆಗೆ ಮೂಡುಬಿದಿರೆಯ ನ್ಯಾಯಾಲಯದ ಆವರಣದಲ್ಲಿ ನಡೆಯಲಿದೆ.

​ಕಾರ್ಯಕ್ರಮದ ವಿವರ

ದಕ್ಷಿಣ ಕನ್ನಡ ಜಿಲ್ಲೆಯ ಗೌರವಾನ್ವಿತ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಬಸವರಾಜ್ ಅವರು ಸಮಿತಿಯನ್ನು ಉದ್ಘಾಟಿಸಲಿದ್ದಾರೆ. ಮೂಡಬಿದ್ರೆ ವಕೀಲರ ಸಂಘದ ಅಧ್ಯಕ್ಷರಾದ ಹರೀಶ್ ಪಿ. ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

​ಮುಖ್ಯ ಅತಿಥಿಗಳು

ಈ ಸಮಾರಂಭದಲ್ಲಿ ನ್ಯಾಯಾಂಗ ಮತ್ತು ಆಡಳಿತ ರಂಗದ ಗಣ್ಯರು ಉಪಸ್ಥಿತರಿರಲಿದ್ದಾರೆ, ಜೈಬನ್ನೀಸಾ: ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು.

ಮಧುಕರ್ ಪಿ. ಭಾಗವತ್: ಹಿರಿಯ ಸಿವಿಲ್ ನ್ಯಾಯಾಧೀಶರು, ಮೂಡಬಿದ್ರೆ ಹಾಗೂ ಅಧ್ಯಕ್ಷರು, ತಾಲೂಕು ಕಾನೂನು ಸೇವೆಗಳ ಸಮಿತಿ. ಎಂ. ಬಾಹುಬಲಿ ಪ್ರಸಾದ್: ಮಾಜಿ ಸದಸ್ಯರು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ. ​ಶ್ರೀ ಕೆ. ಆರ್. ಪಂಡಿತ್: ಹಿರಿಯ ನ್ಯಾಯವಾದಿಗಳು, ​ನೇತ್ರಾವತಿ ಹಾಗೂ ಶೋಭಾ ಎಸ್.: ಸಹಾಯಕ ಸರ್ಕಾರಿ ಅಭಿಯೋಜಕರು.
ಶ್ರೀಧರ್ ಎಸ್. ಮುಂಡಲಮನೆ: ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿಗಳು, ಮೂಡುಬಿದಿರೆ .ಜಯಪ್ರಕಾಶ್ ಭಂಡಾರಿ: ಪ್ರಧಾನ ಕಾರ್ಯದರ್ಶಿಗಳು, ವಕೀಲರ ಸಂಘ, ಮೂಡುಬಿದಿರೆ ಭಾಗವಹಿಸಲಿದ್ದು ​ಸಾರ್ವಜನಿಕರಿಗೆ ಕಾನೂನು ನೆರವು ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಈ ನೂತನ ಸಮಿತಿಯು ಪ್ರಮುಖ ಪಾತ್ರ ವಹಿಸಲಿದ್ದು, ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸ್ವಾಗತ ಕೋರಲಾಗಿದೆ.

LEAVE A REPLY

Please enter your comment!
Please enter your name here