ಮರೋಳಿಯಲ್ಲಿ ತುಳುವ ಮಹಾಸಭೆ ನೂತನ ಘಟಕ ಆರಂಭ
ಮಂಗಳೂರು: ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ತುಳುವ ಮಹಾಸಭೆಯ ಪ್ರಥಮ ಘಟಕದ ರೂಪಿಕರಣ ಸಭೆ ಮರೋಲಿ ಸೂರ್ಯನಾರಾಯಣ ದೇವಸ್ಥಾನದ ಸಭಾಂಗಣದಲ್ಲಿ ಜರುಗಿತು. ಸಭೆಯಲ್ಲಿ ಆಡಳಿತ ಮೊಕ್ತೆಸರಾದ ಗಣೇಶ ಶೆಟ್ಟಿ ಗುಡ್ಡೆಗುತ್ತು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ “ಆರಾಧನೆ ಕೇಂದ್ರಗಳು ಕೇವಲ ಭಕ್ತಿಯ ಶ್ರದ್ಧಾ ಕೇಂದ್ರಗಳಾಗದೆ, ಸಾಮಾಜಿಕ, ಸಾಂಸ್ಕೃತಿಕ, ಬೌದ್ಧಿಕ ಹಾಗೂ ಶಾರೀರಿಕ ಬೆಳವಣಿಗೆಯ ಉತ್ಥಾನ ಕೇಂದ್ರಗಳಾಗಬೇಕು” ಎಂಬ ಮಹತ್ವದ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಅಭಿವೃದ್ಧಿ ಸಮಿತಿ ಅಧ್ಯಕ್ಷ ಗೀರಿದರ್ ಶೆಟ್ಟಿ ಅವರು ಮಾತನಾಡಿ ಮಕ್ಕಳಿಗೆ ನಮ್ಮ ಆಚಾರ–ವಿಚಾರಗಳನ್ನು ಅರ್ಥವಾಗುವ ರೀತಿಯಲ್ಲಿ ಹಾಗೂ ಖುಷಿಯಾಗುವ ರೀತಿಯಲ್ಲಿ ಬೋಧನೆ ಮಾಡಬೇಕು ಆವಾಗಲೇ ಮಕ್ಕಳಲ್ಲಿ ಆಸಕ್ತಿಯ ಬೆಳವಣಿಗೆ ಸಾಧ್ಯವಾಗುತ್ತದೆ. ಈ ದೃಷ್ಟಿಯಿಂದ ತುಳುವ ಮಹಾಸಭೆ ಕೈಗೊಂಡಿರುವ ಕೆಲಸ ಶ್ಲಾಘನೀಯವಾಗಿದೆ” ಎಂದು ಅವರು ಹೇಳಿದರು.
ತುಳುವ ಮಹಾಸಭೆಯ ಉದ್ದೇಶಗಳು, ಗುರಿಗಳು ಹಾಗೂ ತತ್ವಚಿಂತನೆಗಳ ಬಗ್ಗೆ ಆಧ್ಯಾತ್ಮಗುರು ಹಾಗೂ ತುಳುವ ಮಹಾಸಭೆ ಮಂಗಳೂರು ತಾಲೂಕು ಸಂಚಾಲಕರು ಅರವಿಂದ ಬೆಳ್ಚಾಡ, ಹಾಗೂ ತುಳುವರ್ಲ್ಡ್ ಫೌಂಡೇಶನ್, ಕಟೀಲ್ ಇದರ ನಿರ್ದೇಶಕರಾದ ಡಾ. ರಾಜೇಶ್ ಆಳ್ವ ಬದಿಯಡ್ಕ ಇವರು ಮಾಹಿತಿ ನೀಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಬಾಲಕೃಷ್ಣ ಕೊಟ್ಟಾರಿ, ಗೌರವ ಅಧ್ಯಕ್ಷರು, ಅಭಿವೃದ್ಧಿ ಸಮಿತಿ, ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನ, ಪುಷ್ಪಲತಾ, ಸದಸ್ಯೆ, ವ್ಯವಸ್ಥಾಪನ ಸಮಿತಿ, ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನ, ಸರಳ ಕುಲಾಲ್, ಸದಸ್ಯೆ, ಅಭಿವೃದ್ಧಿ ಸಮಿತಿ, ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನ, ಕೃಷ್ಣ ಎಸ್.ಆರ್., ಗೌರವ ಅಧ್ಯಕ್ಷರು, ಜನ್ಮಭೂಮಿ ಫೌಂಡೇಶನ್ (ರಿ), ಮಂಗಳೂರು, ರಂಜಿತ್ ಮರೋಳಿ, ಅಧ್ಯಕ್ಷರು, ಜನ್ಮಭೂಮಿ ಫೌಂಡೇಶನ್ (ರಿ), ವಿನಯ್ ಮರೋಳಿ, ಉಪಾಧ್ಯಕ್ಷರು, ಜನ್ಮಭೂಮಿ ಫೌಂಡೇಶನ್ (ರಿ), ಮಂಗಳೂರು, ಅಜಿತ್ ಮರೋಳಿ, ಕಾರ್ಯದರ್ಶಿ, ಜನ್ಮಭೂಮಿ ಫೌಂಡೇಶನ್ (ರಿ), ಮಂಗಳೂರು
ಈ ಎಲ್ಲರು ನೂತನ ಘಟಕದ ಸ್ಥಾಪನೆಯನ್ನು ಹರ್ಷದಿಂದ ಸ್ವಾಗತಿಸಿ, ತುಳುವ ಸಂಸ್ಕೃತಿ ಮತ್ತು ಪರಂಪರೆಯ ಉಳಿವಿಗೆ ಮಹಾಸಭೆಯ ಕೆಲಸಗಳು ಪ್ರಭಾವ ಬೀರಲಿ ಎಂದು ಶುಭ ಹಾರೈಸಿದರು.