ಬೈಂದೂರು ತಾಲೂಕು ಕೆರ್ಗಾಲ್ ಗ್ರಾಮದಲ್ಲಿ ಪರಿಶ್ರಮ ಕೋ-ಆಪರೇಟಿವ್ ಸೊಸೈಟಿ (ನಿ) ಕೊಕ್ಕೇಶ್ವರ ಕಾಂಪ್ಲೆಕ್ಸ್ ನಾಯ್ಕನಕಟ್ಟೆ, ನೂತನವಾಗಿ ಲೋಕಾರ್ಪಣೆಗೊಂಡಿದೆ.
ಗ್ರಾಮೀಣ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಸೊಸೈಟಿ ಲೋಕಾರ್ಪಣೆಗೊಂಡಿದೆ ಮತ್ತು ಆಕರ್ಷಕ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುವುದು ಹಾಗೂ ಆಸ್ತಿ ಅಡಮಾನ ಸಾಲ, ವ್ಯವಹಾರ ಸಾಲ, ಚಿನ್ನಾಭರಣ ಸಾಲ, ವೈಯಕ್ತಿಕ ಸಾಲ, ವಾಹನ ಸಾಲ, ಸ್ವ-ಸಹಾಯ ಗುಂಪು ಸಾಲ,ಹಾಗೂ ಹಲವಾರು ಠೇವಣಿಗಳು, ಬಂಪರ್ ಆರ್ ಡಿ ಯೋಜನೆಗಳು,ಮತ್ತು ಸಹಕಾರಿ ಸಂಘ ಪ್ರಾರಂಭೋತ್ಸವದ ಪ್ರಯುಕ್ತ ಠೇವಣಿಗಳಿಗೆ 0.5% ಅಧಿಕ ಬಡ್ಡಿ ದರಗಳು. ಹಿರಿಯ ನಾಗರಿಕರಿಗೆ ಮಹಿಳೆಯರಿಗೆ ಅಂಗವಿಕಲರಿಗೆ 0.5% ಹೆಚ್ಚಿನ ಬಡ್ಡಿ ಒಂದು ವರ್ಷದಿಂದ ಮೇಲ್ಪಟ್ಟು ನೀಡಲಾಗುವುದು.
ಮಾಜಿ ಶಾಸಕ ಕೆ ಗೋಪಾಲ್ ಪೂಜಾರಿಯವರು ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಹಕಾರ ಸಂಘವು ಗ್ರಾಹಕರ ನಡುವೆ ಹಣವನ್ನು ವರ್ಗಾಯಿಸುತ್ತದೆ. ಹಣಕಾಸಿನ ವಿಷಯಗಳಲ್ಲಿ ವಿಶ್ವಾಸ, ಪ್ರಾಮಾಣಿಕತೆ ಮತ್ತು ನಂಬಿಕೆ ಬಹಳ ಮುಖ್ಯ. ಈ ಸಂಸ್ಥೆ ವಿವಿಧ ಹಣಕಾಸು ಸಂಬಂಧಿತ ಕಾಳಜಿಗಳಿಗೆ ಕೇಂದ್ರವಾಗಿರುವುದರಿಂದ ಪರಿಶ್ರಮ ಕೋ-ಆಪರೇಟಿವ್ ಸೊಸೈಟಿಯು ಮುಂದಿನ ದಿನಗಳಲ್ಲಿ ಆರ್ಥಿಕ ಬಲಿಷ್ಠ ಸಹಕಾರಿಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಎಸ್ ಪ್ರಕಾಶ್ ಚಂದ್ರ ಶೆಟ್ಟಿ ಕಂಬದಕೋಣೆ ರೈತರ ಸೇವಾ ಸಂಘ ನಿಯಮಿತ ಉಪ್ಪಂದ ಭದ್ರತಾ ಕೊಠಡಿ ಉದ್ಘಾಟಿಸಿ ಶುಭ ಹಾರೈಸಿದರು.
ಶೇಖರ್ ಪೂಜಾರಿ ಅಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರಿ ನೌಕರ ಸಂಘ ಬೈಂದೂರು ಸಹಕಾರಿ ಲಾಂಛನ ಬಿಡುಗಡೆ ಮಾಡಿದರು. ಜಗದೀಶ್ ಪೂಜಾರಿ ಹಕ್ಕಾಡಿ ಅಧ್ಯಕ್ಷರು ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ನಾವುಂದ ಗಣಕಯಂತ್ರ ಉದ್ಘಾಟಿಸಿ ಶುಭ ಹಾರೈಸಿದರು.
ಬಾಬು ಹೆಗ್ಡೆ ಕೊಲ್ಲೂರು ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಸಂಸ್ಥೆಯ ಆಡಳಿತ ಮಂಡಳಿ ಕಚೇರಿಯನ್ನು ಉದ್ಘಾಟಿಸಿ ಶುಭ ಹಾರೈಸಿದರು.ಫಾದರ್ ಮಿನ್ಸೆಂಟ್ ಕುವೆಲ್ಲೋ ಫಾದರ್ ಹೋಲಿ ಕ್ರಾಸ್ ಚರ್ಚ್ ಬೈಂದೂರು ಠೇವಣಿ ಪತ್ರ ಬಿಡುಗಡೆ ಮಾಡಿ ಶುಭ ಹಾರೈಸಿದರು.ಮಹೇಂದ್ರ ಪೂಜಾರಿ ಮಾಜಿ ಅಧ್ಯಕ್ಷರು ತಾಲೂಕು ಪಂಚಾಯತ್ ಬೈಂದೂರು ಪಾಸ್ ಬುಕ್ ಬಿಡುಗಡೆ ಮಾಡಿ ಶುಭ ಹಾರೈಸಿದರು
ಶ್ರೀ ಗೋಕುಲ್ ಶೆಟ್ಟಿ ಉದ್ಯಮಿಗಳು ಪ್ರಥಮ ದರ್ಜೆ ಗುತ್ತಿಗೆದಾರರು ಉಪ್ಪುಂದ ಸ್ವ ಸಹಾಯ ಗುಂಪು ಉದ್ಘಾಟನೆ ಮಾಡಿ ಶುಭ ಹಾರೈಸಿದರು.
ಸಂಸ್ಥೆ ಅಧ್ಯಕ್ಷರಾದ ಶ್ರೀನಿವಾಸ್ ಪೂಜಾರಿಯವರು ಮಾತನಾಡಿ ಪರಿಶ್ರಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಹಲವಾರು ಜನರ ಪರಿಶ್ರಮದಿಂದ ಇಂದು ಲೋಕಾರ್ಪಣೆಗೊಂಡಿದೆ ಸಂಸ್ಥೆಯ ಉಪಾಧ್ಯಕ್ಷರು ಬಲಿಷ್ಠ ನಿರ್ದೇಶಕ ಮಂಡಳಿ ಸಹಕಾರದಿಂದ ಮುಂದಿನ ದಿನಗಳಲ್ಲಿ ಉತ್ತಮ ಸೇವೆ ನೀಡುವುದರ ಮೂಲಕ ತಾಲೂಕಿನಲ್ಲಿ ಮತ್ತು ಜಿಲ್ಲೆಯಲ್ಲಿ ಒಂದು ಹೆಸರಾಂತ ಸಹಕಾರಿ ಸಂಸ್ಥೆಯಾಗಿ ಮೂಡಿಬರಲಿದೆ ಎಂದರು..
ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷರು, ಜನಪ್ರತಿನಿಧಿಗಳಿಗೆ, ಊರಿನ ಪ್ರಮುಖರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆ ಉಪಾಧ್ಯಕ್ಷರಾದ
ಪ್ರಕಾಶ ಪೂಜಾರಿ, ನಿರ್ದೇಶಕ ಮಂಡಳಿ ಸದಸ್ಯರಾದ ನಾಗರಾಜ್
ನಾಗರಾಜ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ನಾಗೇಶ ಖಾರ್ವಿ ಶಶಿಧರ ಶೆಟ್ಟಿ
ವಿಜಿತ್ ನರಸಿಂಹ ಪೂಜಾರಿ,
ರವೀಂದ್ರ ಪೂಜಾರಿ,
ಪ್ರದ್ಯುಮ್ನ ಹೆಬ್ಬಾರ್,
ನರಸಿಂಹ ಪೂಜಾರಿ
ರವೀಂದ್ರ ಪೂಜಾರಿ,
ಸುರೇಶ್ ದೇವಾಡಿ,
ಶ್ರೀಮತಿ ಅನಿತಾ ಡಿಸೋಜಾ
ಶ್ರೀಮತಿ ನಾಗರಾತ್ನ ಪೂಜಾರಿ ಹಾಗೂ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಸದಸ್ಯರು ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.