ರಾ.ಹೆ 169 : ರಸ್ತೆ ಬದಿ ಕಸ ಹೊತ್ತಿಸಲು ಹಾಕಿದ ಬೆಂಕಿ ಪಂಚಾಯತ್ ಕುಡಿಯುವ ನೀರಿನ ಪೈಪ್ ಲೈನ್ ಸುಟ್ಟು ಕರಕಲು..!?

0
37

ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಡಿಯುವ ನೀರಿನ ಪೈಪ್ ಲೈನ್ ( HDPE ಕಪ್ಪು ಬಣ್ಣದ ಪೈಪ್) ರಸ್ತೆ ಬದಿ ಕಸ ಸುಡಲು ಹಾಕಿದ ಬೆಂಕಿಗೆ ಸಿಲುಕಿ, ಸುಟ್ಟು ಕರಕಲಾಗಿ ಕುಡಿಯುವ ನೀರು ವ್ಯರ್ಥವಾಗಿ ಪೋಲಾಗುವಂತಾಯಿತು.

ನವೆಂಬರ್ 17 ಸೋಮವಾರ ಬೆಳಿಗ್ಗೆ ಸಾಣೂರು ಗ್ರಾಮ ಪಂಚಾಯತ್ ನ ಪಂಪ್ ಆಪರೇಟರ್ ಶ್ರೀ ಜಯಂತರವರು, ಸಾಣೂರು ಶ್ರದ್ಧಾನಂದರ ಕುಡ್ವರ ಮನೆಯ ಬಳಿ ಪೈಪ್ ಲೈನ್ ಬೆಂಕಿ ಬಿದ್ದು ಕರಕಲಾಗಿ ನೀರು ಪೋಲಾಕು ಇದ್ದುದನ್ನು ಗಮನಿಸಿ, ಸ್ಥಳೀಯ ನಿವಾಸಿ ಶ್ರದ್ಧಾನಂದ ಕೊಡುವರನ್ನು ಈ ಬಗ್ಗೆ ವಿಚಾರಿಸಿದಾಗ ಕಸಕ್ಕೆ ಬೆಂಕಿ ಹಾಕಿರುವುದನ್ನು ಒಪ್ಪಿಕೊಂಡಿರುತ್ತಾರೆ.

ಇದನ್ನು ತಿಳಿದು ಸ್ಥಳಕ್ಕೆ ಧಾವಿಸಿದ ಸಾಣೂರು ಗ್ರಾಂ ಪಿಡಿಒ ಶ್ರೀ ವಿಶ್ವನಾಥ್ ಮತ್ತು ಹೆದ್ದಾರಿ ಕಾಮಗಾರಿಯ ಗುತ್ತಿಗೆದಾರ ಸಂಸ್ಥೆಯ ಕನ್ಸ್ಟ್ರಕ್ಷನ್ ಮ್ಯಾನೇಜರ್ ಶ್ರೀ ಬಾಲಾಜಿಯವರು ಕೂಡಲೇ ಸುಟ್ಟು ಕರಕಲು ಆಗಿರುವ ಪೈಪ್ ಲೈನ್ ದುರಸ್ತಿ ಮಾಡಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಸರಿಪಡಿಸುವುದಾಗಿ ಸ್ಥಳೀಯ ನಾಗರಿಕರಿಗೆ ಭರವಸೆ ನೀಡಿರುತ್ತಾರೆ.

LEAVE A REPLY

Please enter your comment!
Please enter your name here