ಹೆಬ್ರಿಯ ಕುಚ್ಚೂರು ಹೆರ್ಗ ವಿಠ್ಠಲ ಶೆಟ್ಟಿ ಸರ್ಕಾರಿ ಪ್ರೌಢಶಾಲೆಯ 9 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

0
55

ಕುಚ್ಚೂರು ಸರ್ಕಾರಿ ಪ್ರೌಢಶಾಲೆಯ 9 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ.

ಹೆಬ್ರಿ : ಹೆಬ್ರಿಯ ಕುಚ್ಚೂರು ಹೆರ್ಗ ವಿಠ್ಠಲ ಶೆಟ್ಟಿ ಸರ್ಕಾರಿ ಪ್ರೌಢಶಾಲೆಯ 9 ವಿದ್ಯಾರ್ಥಿಗಳು ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತ ಇಲಾಖೆಯ ಉಪ ನಿರ್ದೇಶಕರ ಕಚೇರಿ ಹಾಗೂ ಜನತಾ ನ್ಯೂ ಆಂಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ ಹೆಮ್ಮಾಡಿಯ ಜನತಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ೧೪ ಮತ್ತು ೧೭ರ ವಯೋಮಾನದ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಪವನ್ ಯು. ಶೆಟ್ಟಿ ೮೦ ಮೀಟರ್‌ ಹರ್ಡಲ್ಸ್‌ ಪ್ರಥಮ, ೨೦೦ ಮೀಟರ್‌ ದ್ವಿತೀಯ, ೧೦೦ ಮೀಟರ್‌ ತೃತೀಯ, ೧೪ರ ವಯೋಮಾನದ ವೈಯಕ್ತಿಕ ಚಾಂಪಿಯನ್ ಪಡೆದರು. ಸಂಪ್ರೀತ್‌ ೬೦೦ ಮೀಟರ್‌ ದ್ವಿತೀಯ, ಕೃತಿಕಾ ೬೦೦ ಮೀಟರ್‌ ಪ್ರಥಮ, ಸುರೇಶ್‌ ನಾಯ್ಕ್‌ ಪೋಲೋ ವಾಲ್ಟ್‌ ಪ್ರಥಮ, ಪ್ರಜ್ವಲ್‌ ತ್ರಿಪ್ಪಲ್‌ ಜಂಪ್‌ ದ್ವಿತೀಯ, ತ್ರಿಷಾ ಪೋಲೋ ವಾಲ್ಟ್‌ ಪ್ರಥಮ, ಸೌಜನ್ಯ, ಸಿಂಚನಾ ಮತ್ತು ಅನಿತಾ ೪-೧೦೦ ಮೀಟರ್‌ ರಿಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಬಿ. ಹರ್ಷ ಶೆಟ್ಟಿ, ಮುಖ್ಯ ಶಿಕ್ಷಕಿ ಪ್ರಭಾವತಿ, ಪೃಭಾವತಿ, ದೈಹಿಕ ಶಿಕ್ಷಣ ಶಿಕ್ಷಕಿ ಕಮಲಿನಿ, ತಂಡ ವ್ಯವಸ್ಥಾಪಕಿ ತುಳಸಿ ಮತ್ತು ಶಿಕ್ಷಕ ವೃಂದ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here