ಗಾಢ ಕಪ್ಪು ಬಣ್ಣದ ಹೊಚ್ಚ ಹೊಸ ಮ್ಯಾಗ್ನೈಟ್ ಕುರೊ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ ನಿಸ್ಸಾನ್; ಆರಂಭಿಕ ಬೆಲೆ ರೂ. 8.30 ಲಕ್ಷ

0
9


ಗಾಢ ಕಪ್ಪು ಬಣ್ಣದ ಮ್ಯಾಗ್ನೈಟ್ ಕುರೊ ಸ್ಪೆಷಲ್ ಎಡಿಷನ್ ಅನ್ನು ಇದೀಗ ನಿಸ್ಸಾನ್ ನ ಎಲ್ಲಾ ಡೀಲರ್‌ ಶಿಪ್‌ ಗಳಲ್ಲಿ ಮತ್ತು ನಿಸ್ಸಾನ್ ನ ಅಧಿಕೃತ ವೆಬ್‌ಸೈಟ್‌ನಲ್ಲಿ ಕೇವಲ ರೂ.11,000 ನೀಡುವ ಮೂಲಕ ಬುಕ್ ಮಾಡಬಹುದು.

ಮಂಗಳೂರು: ನಿಸ್ಸಾನ್ ಮೋಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಇಂದು ತನ್ನ ಗಾಢ ಕಪ್ಪು ಬಣ್ಣದ, ಬಹುನೀರಿಕ್ಷಿತ ಹೊಚ್ಚ ಹೊಸ ನಿಸ್ಸಾನ್ ಮ್ಯಾಗ್ನೈಟ್ ಕುರೊ ಸ್ಪೆಷಲ್ ಎಡಿಷನ್ ಅನ್ನು ಬಿಡುಗಡೆ ಮಾಡಿದೆ. ಇದರ ಆರಂಭಿಕ ಬೆಲೆ ರೂ.8.30 ಲಕ್ಷ. (ಬೆಂಗಳೂರು ಎಕ್ಸ್ ಶೋರೂಮ್).

ನಿಸ್ಸಾನ್ ನ ಜನಪ್ರಿಯ ಕಾಂಪ್ಯಾಕ್ಟ್ ಎಸ್‌ಯುವಿಯ ಆಕರ್ಷಕ ಮತ್ತು ಗಾಢ ಕಪ್ಪು ಬಣ್ಣದ ರೂಪಾಂತರವಾಗಿರುವ ಈ ಕುರೊ ಸ್ಪೆಷಲ್ ಎಡಿಷನ್ ಸೊಗಸಾದ ಕಪ್ಪು ಒಳಾಂಗಣ ಮತ್ತು ಜಪಾನ್ ಪ್ರೇರಿತ ವಿನ್ಯಾಸ ಹೊಂದಿದೆ. ಈ ಹೊಸ ನಿಸ್ಸಾನ್ ಮ್ಯಾಗ್ನೈಟ್ ಕುರೊ ಸ್ಪೆಷಲ್ ಎಡಿಷನ್ ಅನ್ನು ನಿಸ್ಸಾನ್ ನ ಅಧಿಕೃತ ಡೀಲರ್‌ಶಿಪ್‌ ಗಳಲ್ಲಿ ಮತ್ತು ನಿಸ್ಸಾನ್ ನ ಅಧಿಕೃತ ವೆಬ್‌ಸೈಟ್‌ www.nissan.in ನಲ್ಲಿ ಕೇವಲ ರೂ.11,000 ಪಾವತಿ ಮಾಡುವ ಮೂಲಕ ಬುಕ್ ಮಾಡಬಹುದು.

ಕುರೊ ಎಂದರೆ ಜಪಾನ್ ಭಾಷೆಯಲ್ಲಿ ಕಪ್ಪು ಎಂದರ್ಥ. ಹಾಗಾಗಿ ಈ ವಾಹನಕ್ಕೆ ಕುರೊ ಸ್ಪೆಷಲ್ ಎಡಿಷನ್ ಎಂದು ಹೆಸರಿಡಲಾಗಿದೆ. ಈ ವಿಶೇಷ ಆವೃತ್ತಿಯು ಸಂಪೂರ್ಣವಾಗಿ ಗಾಢ ಕಪ್ಪು ಬಣ್ಣದ ಹೊರಾಂಗಣ ಮತ್ತು ಒಳಾಂಗಣವನ್ನು ಹೊಂದಿದ್ದು, ಪ್ರೀಮಿಯಂ, ಆಕರ್ಷಕ ಮತ್ತು ಸ್ಟೈಲಿಶ್ ಲುಕ್‌ ಹೊಂದಿದೆ. ಈ ಕುರೊ ಸ್ಪೆಷಲ್ ಎಡಿಷನ್ ನ ವಿಶೇಷತೆಯನ್ನು ತಿಳಿದುಕೊಳ್ಳಲು ನಿಸ್ಸಾನ್ ವೆಬ್‌ ಸೈಟ್‌ ನಲ್ಲಿ ಫೋಟೋರಿಯಲಿಸ್ಟಿಕ್ ವಿಷುವಲ್ಸ್, ಫೀಚರ್ ಮಾಹಿತಿ ಮತ್ತು ಸಂಪೂರ್ಣ ಖರೀದಿ ಪ್ರಕ್ರಿಯೆ ತಿಳಿಸುವ 3ಡಿ ಕಾನ್ಫಿಗರೇಟರ್ ಬಳಸಿಕೊಳ್ಳಬಹುದು.
ಕುರೊ ಸ್ಪೆಷಲ್ ಎಡಿಷನ್ ವಿಶೇಷತೆಗಳು:
• ಕುರೊ ಸ್ಪೆಷಲ್ ಎಡಿಷನ್ ಟರ್ಬೊ-ಪೆಟ್ರೋಲ್ ಮತ್ತು ಸಾಮಾನ್ಯ ಪೆಟ್ರೋಲ್ ಪವರ್‌ಟ್ರೇನ್ ಆಯ್ಕೆಗಳಲ್ಲಿ ಲಭ್ಯವಿದೆ
• ಮ್ಯಾಗ್ನೈಟ್ ಬ್ರಾಂಡಿಂಗ್‌ ನ ಕೆಳಗಿರುವ ಎಡಗಡೆಯ ಫೆಂಡರ್‌ ನಲ್ಲಿ ವಿಶಿಷ್ಟವಾದ ‘ಕುರೊ’ ಬ್ಯಾಡ್ಜ್ ಲಭ್ಯವಿದೆ.
• • ಪಿಯಾನೋ ಬ್ಲಾಕ್ ಫ್ರಂಟ್ ಗ್ರಿಲ್, ರೆಸಿನ್ ಬ್ಲಾಕ್ ಫ್ರಂಟ್ ಮತ್ತು ರೇರ್ ಸ್ಕಿಡ್ ಪ್ಲೇಟ್‌ ಗಳು, ಗ್ಲಾಸ್ ಬ್ಲಾಕ್ ರೂಫ್ ರೈಲ್ಸ್, ಆರ್16 ಡೈಮಂಡ್ ಕಟ್ ಅಲಾಯ್ ವೀಲ್ ಗಳು ಮತ್ತು ಕಪ್ಪು ಡೋರ್ ಹ್ಯಾಂಡಲ್ ಗಳನ್ನು ಹೊಂದಿದೆ.

• ಗಾಢ ಕಪ್ಪು ಬಣ್ಣದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಲೈಟ್‌ಸೇಬರ್ ಟರ್ನ್ ಇಂಡಿಕೇಟರ್‌ ಹೊಂದಿದೆ.
• ಪ್ರೀಮಿಯಂ ಮತ್ತು ಡಾರ್ಕ್ ಥೀಮ್ ನ ಒಳಾಂಗಣ, ಮಿಡ್‌ನೈಟ್ ಥೀಮ್ ಡ್ಯಾಶ್‌ಬೋರ್ಡ್, ಪಿಯಾನೋ ಬ್ಲಾಕ್ ಫಿನಿಶ್‌ ಹೊಂದಿರುವ ಗೇರ್ ಶಿಫ್ಟ್ ಗಾರ್ನಿಶ್, ಪಿಯಾನೋ ಬ್ಲಾಕ್ ಫಿನಿಶ್‌ ನ ಸ್ಟೀರಿಂಗ್ ಇನ್ಸರ್ಟ್, ಸನ್ ವೈಸರ್‌ ಗಳು ಮತ್ತು ಡೋರ್ ಟ್ರಿಮ್‌ ಗಳು ಇದರ ಸೊಗಸನ್ನು ಹೆಚ್ಚು ಮಾಡಿವೆ.
• ವಿಶಿಷ್ಟ ಬ್ಲಾಕ್ ವೈರ್‌ಲೆಸ್ ಚಾರ್ಜರ್ (ಸ್ಟ್ಯಾಂಡರ್ಡ್) ಮತ್ತು ಅತ್ಯುತ್ತಮ ಡ್ಯಾಶ್‌ಕ್ಯಾಮ್ (ಆಕ್ಸೆಸರಿ) ಒದಗಿಸಲಾಗಿದೆ.

ಈ ಕುರಿತು ಮಾತನಾಡಿರುವ ನಿಸ್ಸಾನ್ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಸೌರಭ್ ವತ್ಸ ಅವರು, “ಸೊಗಸಾದ ವಿನ್ಯಾಸ ಮತ್ತು ಅತ್ಯುತ್ತಮ ಕಾರ್ಯಕ್ಷಮತೆಯುಳ್ಳ ವಾಹನ ಒದಗಿಸುವ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿಶಿಷ್ಟ, ಪ್ರೀಮಿಯಂ ಮತ್ತು ಅತ್ಯುನ್ನತ ಫೀಚರ್ ಲಭ್ಯವಿರುವ ಹೊಸ ನಿಸ್ಸಾನ್ ಮ್ಯಾಗ್ನೈಟ್ ಕುರೊ ಸ್ಪೆಷಲ್ ಎಡಿಷನ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಹಿಂದಿನ ಕುರೊ ಆವೃತ್ತಿಯು ಅದ್ಭುತ ಪ್ರತಿಕ್ರಿಯೆ ಪಡೆದಿದ್ದು, ಅದಕ್ಕೆ ಪೂರಕವಾಗಿ ಈ ಆವೃತ್ತಿ ರಚಿಸಲಾಗಿದೆ. ವಿಶೇಷವಾಗಿ ಇತ್ತೀಚೆಗೆ ನಿಸ್ಸಾನ್‌ ಮ್ಯಾಗ್ನೈಟ್ ಗೆ 5-ಸ್ಟಾರ್ ಜಿಎನ್‌ಸಿಎಪಿ ಸೇಫ್ಟಿ ರೇಟಿಂಗ್ ದೊರಕಿದ್ದು, ಸುರಕ್ಷತೆ ಕಡೆಗಿನ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ಈ ಸಾಧನೆಯನ್ನು ಸಂಭ್ರಮಿಸಲು ನಾವು ಮ್ಯಾಗ್ನೈಟ್ ಉತ್ಪನ್ನ ಶ್ರೇಣಿಗೆ ಹೊಸ ಮೆಟಾಲಿಕ್ ಗ್ರೇ ಬಣ್ಣದ ಆಯ್ಕೆಯನ್ನು ಸೇರಿಸುತ್ತಿದ್ದೇವೆ” ಎಂದರು.

ಹೊಸ ನಿಸ್ಸಾನ್ ಮ್ಯಾಗ್ನೈಟ್ ಇತ್ತೀಚೆಗೆ ಗ್ಲೋಬಲ್ ಎನ್‌ಸಿಎಪಿಯಿಂದ 5-ಸ್ಟಾರ್ ಪ್ಯಾಸೆಂಜರ್ ಸೇಫ್ಟಿ ರೇಟಿಂಗ್ ಪಡೆದಿದ್ದು, ಈ ಮೂಲಕ ಭಾರತ ಮತ್ತು ದಕ್ಷಿಣ ಆಫ್ರಿಕಾದಲ್ಲಿ ದೊರೆಯುವ ಅತ್ಯಂತ ಸುರಕ್ಷಿತ ಎಸ್‌ಯುವಿಗಳಲ್ಲಿ ಒಂದು ಎಂಬ ಹೆಗ್ಗಳಿಗೆ ಪಡೆದಿದೆ. ಅತ್ಯಾಧುನಿಕ ಸಿಎಂಎಫ್ ಎ+ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿತವಾದ ಈ ವಾಹನವು 6 ಏರ್‌ಬ್ಯಾಗ್‌ಗಳು, 67% ಹೈ ಟೆನ್ಸೈಲ್ ಸ್ಟ್ರೆಂಗ್ತ್ ಸ್ಟೀಲ್, ಎಬಿಎಸ್ + ಇಬಿಡಿ, ಇ.ಎಸ್.ಸಿ, ಟಿಸಿಎಸ್, ಎಚ್ಎಸ್ಎ, ಬ್ರೇಕ್ ಅಸಿಸ್ಟ್, ಟಿಪಿಎಂಎಶ್ ಸೇರಿದಂತೆ 40ಕ್ಕೂ ಹೆಚ್ಚು ಸ್ಟ್ಯಾಂಡರ್ಡ್ ಸುರಕ್ಷತಾ ಫೀಚರ್ ಗಳನ್ನು ಹೊಂದಿದೆ.

LEAVE A REPLY

Please enter your comment!
Please enter your name here