ನಿಟ್ಟಡೆ ಸ.ಉ.ಪ್ರಾ. ಶಾಲೆ: ತಾಲೂಕು ಮಟ್ಟದ ಖೋಖೋ ಪಂದ್ಯಾಟದ ಸಮಾರೋಪ

0
111

ಕುಕ್ಕೇಡಿ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿ ಹಾಗೂ ನಿಟ್ಟಡೆ ಸ.ಉ.ಪ್ರಾ. ಶಾಲೆಯ ಸಂಯುಕ್ತ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಪ್ರಾಥಮಿಕ ವಿಭಾಗದ ೧೪ರ ವಯೋಮಾನದ ಬಾಲಕ-ಬಾಲಕಿಯರ ಖೋಖೋ ಪಂದ್ಯಾಟದ ಸಮಾರೋಪವು ಸೆ. 15ರಂದು ಜರಗಿತು.

ಬಾಲಕರ ವಿಭಾಗದಲ್ಲಿ ಪ್ರಥಮ ಸರಸ್ವತಿ ಆಂಗ್ಲಮಾಧ್ಯಮ ಶಾಲೆ ಮುಂಡಾಜೆ ಗಳಿಸಿದ್ದು, ದ್ವಿತೀಯ ಸ್ಥಾನವನ್ನು ಸರಕಾರಿ ಉ.ಪ್ರಾ. ಶಾಲೆ ನಿಟ್ಟಡೆ ಪಡೆದುಕೊಂಡಿದೆ. ಬಾಲಕಿಯರ ವಿಭಾಗದಲ್ಲಿ ಸೈಂಟ್‌ ಪೀಟರ್‌ ಅಳದಂಗಡಿ ಶಾಲೆಯಯ ಪ್ರಥಮ ಸ್ಥಾನ ಗಳಿಸಿದ್ದು, ಪಿಯಂಶ್ರೀ ಸ.ಪ್ರಾ.ಶಾಲೆಯ ಬಜಿರೆಯು ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಬಾಲಕರ ವಿಭಾಗದಲ್ಲಿ ಉತ್ತಮ ಹಿಡಿತಗಾರನಾಗಿ ದೀಕ್ಷಿತ್‌ ಮುಂಡಾಜೆ, ಉತ್ತಮ ಓಟಗಾರನಾಗಿ ಸುಶಾನ್‌ ನಿಟ್ಟಡೆ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಉತ್ತಮ ಹಿಡಿತಗಾರ್ತಿಯಾಗಿ ಅಳದಂಗಡಿ ಸೈಂಟ್‌ ಪೀಟರ್‌ ಶಾಲೆಯ ಅಪೇಕ್ಷಾ, ಉತ್ತಮ ಓಟಗಾರ್ತಿಯಾಗಿ ಸಿಂಚನಾ ಬಜಿರೆ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಸವ್ಯಸಾಚಿ ಆಟಗಾರ್ತಿಯಾಗಿ ವೈಷ್ಣವಿ ಅಳದಂಗಡಿ ಪ್ರಶಸ್ತಿ ಗಳಿಸಿದ್ದಾರೆ.

ಸಮಾರೋಪ ಕಾರ್ಯಕ್ರಮದಲ್ಲಿ ನಿಟ್ಟಡೆ ಸ.ಉ.ಪ್ರಾ. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು, ಮುಖ್ಯ ಶಿಕ್ಷಕರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ವೇದಿಕೆಯಲ್ಲಿದ್ದ ಗಣ್ಯರು ಬಹುಮಾನ ವಿತರಿಸಿದರು. ಶಿಕ್ಷಕ ವೃಂದ ಹಾಗೂ ಎಸ್‌ಡಿಎಂಸಿ ಸದಸ್ಯರು ಸಹಕರಿಸಿದರು.

LEAVE A REPLY

Please enter your comment!
Please enter your name here