ನಿಟ್ಟೆ- ಆದರ್ಶ ಸ್ವಸಹಾಯ ಸಂಘಗಳ ಸಮಾವೇಶ

0
17


ನಿಟ್ಟೆ:ಆದರ್ಶ ಗ್ರಾಮಾಭಿವೃದ್ಧಿ ಮತ್ತು ಸೇವಾ ಸಂಸ್ಥೆ ಇದರ ರಜತ ಮಹೋತ್ಸವ ಪ್ರಯುಕ್ತ ವಲಯದ ಸ್ವಸಹಾಯ ಸಂಘಗಳ ರಜತ ಮಹೋತ್ಸವ ಮತ್ತು ಸದಸ್ಯರ ಸಮಾವೇಶವು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಿಟ್ಟೆ ಇಲ್ಲಿಜರುಗಿತು ನಿಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಮಾರಿ ಶೋಭಾ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು . ಆದರ್ಶ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಜೇಕಬ್ ವರ್ಗೀಸ್ ಅಧ್ಯಕ್ಷತೆ ವಹಿಸಿದ್ದರು. ನಿಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಅಶೋಕ್ ಶೆಟ್ಟಿಗಾರ್, ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾಕ್ಟರ್ ಹರೀಶ್ ಆಚಾರ್ಯ, ನಿವೃತ್ತ ಮುಖ್ಯ ಶಿಕ್ಷಕರಾದ ಎನ್ ತುಕರಾಮ್ ಶೆಟ್ಟಿ ಕೆದಿಂಜೆ, ನವಚೇತನ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಮೂಡಬಿದ್ರೆ ಇದರ ಅಧ್ಯಕ್ಷೆ ವಸಂತಿ ಶೆಟ್ಟಿ ನಿಟ್ಟೆ ವಲಯಾಧ್ಯಕ್ಷೆ ವಿಜಯಶ್ರೀ, ನಿಟ್ಟೆ ವಲಯದ ಸಹಕಾರಿ ನಿರ್ದೇಶಕಿ ಸುಮಿತ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸ್ವಸಹಾಯ ಸಂಘಗಳ ಹಿರಿಯ ಸದಸ್ಯರನ್ನು ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಾತ್ವಿಕ್ ಹೆಗ್ಡೆ ಹಾಗೂ ಆಶಾ ಕಾರ್ಯಕರ್ತೆ ಶ್ರೀಮತಿ ಶೀಲಾವತಿ ಇವರನ್ನು ಸನ್ಮಾನಿಸಲಾಯಿತು. ಶ್ರೀಮತಿ ಶೀಲಾವತಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಲಲಿತಾ ಹೆಗ್ಡೆ ಸ್ವಾಗತಿಸಿ ಶ್ರೀಮತಿ ಸುಮಿತ್ರ ಧನ್ಯವಾದ ನೀಡಿದರು.

LEAVE A REPLY

Please enter your comment!
Please enter your name here