ಮೂಲ್ಕಿ: ಹೊಸ ಅಂಗಣ ಪ್ರಕಾಶನ, ಮೂಲ್ಕಿ ವತಿಯಿಂದ ಹರಿಶ್ವಂದ್ರ ಪಿ. ಸಾಲಿಯಾನ್ ಅವರ ಕೃತಿ ‘ಮೂಲ್ಕಿಯ ಕೀರ್ತಿಶೇಷ ಸಾಧಕರು’ ಕೃತಿಯ ಬಿಡುಗಡೆ ಸಮಾರಂಭ ನವಂಬರ್ 30, 2025 ರಂದು ಮೂಲ್ಕಿ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮವು ಸಂಜೆ 4.00 ಗಂಟೆಗೆ ಆರಂಭವಾಗಲಿದ್ದು, ಈ ಸಂದರ್ಭದಲ್ಲಿ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಿಥುನ್ ರೈ ಕೃತಿ ಬಿಡುಗಡೆ ಮಾಡಲಿರುವರು. ಧರ್ಮದರ್ಶೀ ಡಾ. ಹರಿಕೃಷ್ಣ ಪುನರೂರು, ಮಾಜಿ ರಾಜ್ಯಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು — ಪ್ರಧಾನ ಭಾಷಣ ಅಧ್ಯಕ್ಷತೆ ವಹಿಸಲಿರುವರು.
ಅತಿಥಿಗಳಾಗಿ ಇನಿಯಾತ್ ಆಲಿ, ಪ್ರದೀಪ್ ಕುಮಾರ್ ಕಲ್ಕೂರ, ಡಾ. ಅರುಣ್ ಕುಡ್ವ , ಧನಂಜಯ ಅಂಚನ್, ಉಪಸ್ಥಿತರಿರಲಿರುವರು.
ಕಾರ್ಯಕ್ರಮಕ್ಕೆ ಹೊಸ ಅಂಗಣ ಪ್ರಕಾಶನ ಹಾಗೂ ಹಳೆಬಂದ ಪಿ. ನಾಯನಾ್ ಆತಿಥೇಯರಾಗಿದ್ದಾರೆ.

