ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ),ಕನ್ನಡ ಗ್ರಾಮ, ಕಾಸರಗೋಡು ಇದರ 35ನೇ ಸಂಸ್ಥಾಪನಾ ವರ್ಷಾಚರಣೆ ಹಾಗೂ ಕಾಸರಗೋಡು ಕನ್ನಡ ಗ್ರಾಮದ ಸಂಸ್ಥಾಪಕ ಶಿವರಾಮ ಕಾಸರಗೋಡು ಅವರ 60 ನೇ ವರ್ಷದ ಜನ್ಮದಿನೋತ್ಸವ- ಅಭಿನಂದನಾ ಕಾರ್ಯಕ್ರಮವು ಕಾಸರಗೋಡು ಕನ್ನಡ ಗ್ರಾಮದಲ್ಲಿ 2025 ನವಂಬರ್ 4 ಮಂಗಳವಾರದಂದು ಸಂಜೆ ಗಂಟೆ 4.00ಕ್ಕೆ ನಡೆಯಲಿದೆ.
ಶಿವರಾಮ ಕಾಸರಗೋಡು 60ನೇ ವರ್ಷದ ಜನ್ಮದಿನೋತ್ಸವವನ್ನು ಗೋ ಸೇವೆಯ ಮೂಲಕ ಗುರುತಿಸಿಕೊಳ್ಳುವುದಕ್ಕಾಗಿ ಕಾಸರಗೋಡು ಕನ್ನಡ ಗ್ರಾಮದ ಆವರಣದಲ್ಲಿ 25 ಲಕ್ಷ ರೂ ವೆಚ್ಚದಲ್ಲಿ” ಕಾಸರಗೋಡು ಗೋ-ಕ್ಷೇತ್ರ-” ಗೋ-ಕುಟೀರ”ಕ್ಕೆ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಭೂಮಿ ಪೂಜೆ ಸಲ್ಲಿಸಿ, “ಗೋ-ಕ್ಷೇತ್ರ” “ಗೋ-ಕುಟೀರ”ದ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ .
ಜಗಜ್ಜನನಿ ಗೋಮಾತೆಯ ಆಶೀರ್ವಾದವನ್ನು ಪಡೆಯುವುದಕ್ಕಾಗಿ ದೇಸಿ ಗೋವುಗಳನ್ನು ಉಳಿಸಿ ಬೆಳೆಸುವುದಕ್ಕಾಗಿ ಕಾಸರಗೋಡು ಗೋ-ಕ್ಷೇತ್ರ- ಗೋ-ಕುಟೀರವನ್ನು ಒಂದು ಧಾರ್ಮಿಕ ಶ್ರದ್ದಾ ಕೇಂದ್ರವನ್ನಾಗಿ ರೂಪುಗೊಳಿಸುವುದಕ್ಕಾಗಿ ಸಾರ್ವಜನಿಕರು, ಗೋ ಭಕ್ತರ ಸಹಕಾರದಿಂದ ಬೃಹತ್ ಕಾರ್ಯ ಯೋಜನೆಯನ್ನು ಕೈಗೊಳ್ಳಲಾಗಿದೆ.
ಕಾಸರಗೋಡು ಪ್ರದೇಶದ ಪ್ರತಿಯೊಂದು ಮನೆ ಮನೆಗಳಿಂದ ಗೋವುಗಳಿಗೆ ಭಕ್ತಿ ಪೂರ್ವಕವಾಗಿ ಮೇವು, ಗೋ-ಆಹಾರವನ್ನು ಭಕ್ತಿ ಶ್ರದ್ಧೆಯಿಂದ “ಹೊರೆಕಾಣಿಕೆ-ಹಸಿರು ವಾಣಿ” ಮಾದರಿಯಲ್ಲಿ ದಿನನಿತ್ಯ ಗೋ ಸೇವೆಯನ್ನು ಸಲ್ಲಿಸುವ ಮೂಲಕ ಗೋ ಸೇವಾ ಅಭಿಯಾನವನ್ನು ಪ್ರಾರಂಭಿಸುವ ಉದ್ದೇಶವನ್ನು ಹೊಂದಲಾಗಿದೆ.
ಗೋ ಭಕ್ತರ ಕುಟುಂಬಸ್ಥರ ಮಕ್ಕಳಿಗೆ ದೇಸಿ ಗೋವಿನ ಹಾಲಿನ ಬಳಕೆಯ ಉದ್ದೇಶದಿಂದ ಹಿಂದು ಸಮಾಜದ ಪ್ರತಿ ಕುಟುಂಬದವರು,ಕ್ಷೇತ್ರಗಳು, ಮಠ, ಮಂದಿರ, ದೈವಸ್ಥಾನ, ದೇವಸ್ಥಾನಗಳ ಧಾರ್ಮಿಕ ಉತ್ಸವ ಕಾರ್ಯಕ್ರಮಗಳಿಗೆ ಗೋ-ಸೆಗಣಿ ಇತ್ಯಾದಿ ಅವಶ್ಯಕತೆ ಇರುವವರಿಗೆ, ನಮ್ಮ “ಗೋ-ಕ್ಷೇತ್ರ” “ಗೋ-ಕುಟೀರ”ದಲ್ಲಿ ದಿನನಿತ್ಯ ನಿರಂತರವಾಗಿ ದೊರಕುವಂತೆ ಮಾಡಲು ಉದ್ದೇಶಿಸಲಾಗಿದೆ.
2025 ರ ದೀಪಾವಳಿ ಹಬ್ಬದಂದು ಗೋ ಪೂಜೆಯನ್ನು ಸಲ್ಲಿಸುವ ಮೂಲಕ ಗೋ ಸಂಭ್ರಮವನ್ನು ಶ್ರದ್ಧಾ ಪೂರ್ವಕವಾಗಿ ಆಚರಿಸಿ ಗೋ ಸಂಕಲ್ಪ ಮಾಡಲಾಗುವುದು.
ಈ ದಿನದಿಂದಲೇ ಸಮುದಾಯದವರೆಲ್ಲರೂ ಸಕ್ರಿಯವಾಗಿ ಭಾಗವಹಿಸಿ, ಗೋ ಮಾತೆಯ ಸೇವೆಯನ್ನು ಪ್ರತಿಯೊಂದು ಮನೆಯವರು, ಕುಟುಂಬದವರು ಶ್ರದ್ಧಾ ಭಕ್ತಿಯಿಂದ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ಕುಟುಂಬದವರು ಒಂದು ದಿನ ಗೋಮಾತೆಯ ಸೇವೆ ಸಲ್ಲಿಸಿ ಅನುಗ್ರಹ ಪಡೆಯಲು,ತಮ್ಮ ಮನೆಗಳಲ್ಲಿ ನಡೆಯುವ ಶುಭ ಸಮಾರಂಭಗಳ ನಿಮಿತ್ತ ಗೋ-ಕ್ಷೇತ್ರ ಗೋ-ಕುಟೀರಕ್ಕೆ ಆಗಮಿಸಿ ಗೋ- ಸೇವೆಯೊಂದಿಗೆ ಕುಟುಂಬದವರು ಸಂಭ್ರಮವನ್ನು ಹಂಚಿಕೊಳ್ಳಲು ಉದ್ದೇಶಿಸಲಾಗಿದೆ.
ಪ್ರತಿಯೊಬ್ಬರೂ ಕುಟುಂಬ ಸಮೇತರಾಗಿ ಕಾಸರಗೋಡು ಕನ್ನಡ ಗ್ರಾಮಕ್ಕೆ ಆಗಮಿಸಿ ಗೋ – ಹಟ್ಟಿ, ಗೋ- ಕ್ಷೇತ್ರ, ಗೋ – ಕುಟೀರದಲ್ಲಿ ಪ್ರಾರ್ಥನೆ ಸಲ್ಲಿಸಿ ತಮ್ಮ ಇಷ್ಟಾರ್ಥವನ್ನು ಪಡೆದುಕೊಳ್ಳಬಹುದು.
ಗೋ – ಸೇವೆಯಲ್ಲಿ ಭಾಗವಹಿಸಲಿಚ್ಚಿಸುವ ದಾನಿಗಳು ಶಿವರಾಮ ಕಾಸರಗೋಡು, ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ),ಕನ್ನಡ ಗ್ರಾಮ, ಕನ್ನಡ ಗ್ರಾಮ ರಸ್ತೆ,
ಕಾಸರಗೋಡು -671121
ಮೊಬೈಲ್ :-9448572016 ಇವರನ್ನು ಸಂಪರ್ಕಿಸಬಹುದು.
ಗೋ-ಹಟ್ಟಿ,ಗೋ-ಕ್ಷೇತ್ರ,ಗೋ – ಕುಟೀರ ನಿರ್ಮಾಣಕ್ಕೆ ದೇಣಿಗೆ ನೀಡಲಿಚ್ಚಿಸುವವರು
SHIVARAMA KASARAGOD Google pay No-9448572016 ಇಲ್ಲಿಗೆ ಕಳುಹಿಸಬಹುದು.
Home Uncategorized ನ.4: ಕಾಸರಗೋಡು ಕನ್ನಡ ಗ್ರಾಮದಲ್ಲಿ 25 ಲಕ್ಷ ರೂ ವೆಚ್ಚದಲ್ಲಿ “ಗೋ-ಹಟ್ಟಿ”, ಕಾಸರಗೋಡು ಗೋ- ಕ್ಷೇತ್ರ-...
