ಸಸಿಹಿತ್ಲು: ಸಸಿಹಿತ್ಲು ಶ್ರೀ ಭಗವತಿ ದೇವಿಯ ಅನಂತ ಅನುಗ್ರಹದಿಂದ ದೇವಸ್ಥಾನದಲ್ಲಿ ದಿನಾಂಕ 4-03- 2026 ರಿಂದ 08-03-2026 ರವೆರೆಗೆ ಬ್ರಹ್ಮಕಲಶೋತ್ಸವ ದಿನ ನಿಗದಿಯಾಗಿದ್ದು ಶ್ರದ್ಧಾ ಭಕ್ತಿಯಿಂದ ನೇರವೆರಲಿದೆ. ಈ ಪ್ರಯುಕ್ತ ದೇವಸ್ಥಾನದಲ್ಲಿ ನವೆಂಬರ್ 9, 2025ರಂದು ಬೆಳಗ್ಗೆ 9.30ಕ್ಕೆ “ಮುಷ್ಠಿ ಕಾಣಿಕೆ ಸಮರ್ಪಣೆ” ಮತ್ತು “ಮನವಿ ಪತ್ರ ಬಿಡುಗಡೆ ” ಕಾರ್ಯಕ್ರಮವು ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.
ಮುಷ್ಠಿ ಕಾಣಿಕೆ ಸಮರ್ಪಣೆ ಸಮೂಹ ಭಕ್ತಿಯ ಮತ್ತು ಸೇವಾ ಭಾವನೆಯ ಸಂಕೇತವಾಗಿದೆ. ಭಕ್ತರು ನೀಡುವ ಪ್ರತಿಯೊಂದು ಮುಷ್ಠಿ ಕಾಣಿಕೆಯೂ ದೇವಿ ಭಕ್ತಿಯಿಂದ ತುಂಬಿದ ಒಂದು ಮಹತ್ವದ ಕಾಣಿಕೆ ಆಗಿದ್ದು ಶ್ರೀ ಭಗವತೀ ಅಮ್ಮನವರ ಆಶೀರ್ವಾದ ಪಡೆಯುವ ಸುವರ್ಣವಕಾಶವಾಗಿದೆ.
ಬ್ರಹ್ಮಕಲಶೋತ್ಸವವು 2026ರ ಮಾರ್ಚ್ 4ರಿಂದ 8ರವರೆಗೆ ವೈಭವೋಪೇತವಾಗಿ ನಡೆಯಲಿದ್ದು. ಈ ಸಂದರ್ಭ ಭಕ್ತರು, ಗ್ರಾಮಸ್ಥರು ಹಾಗೂ ದೇವಸ್ಥಾನಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಈ ಮಹೋತ್ಸವವು ಭಕ್ತರ ಸಹಕಾರದಿಂದ ಯಶಸ್ವಿಯಾಗಿ ನೆರವೇರಲಿದೆ. ಎಲ್ಲರೂ ಮನಃಪೂರ್ವಕವಾಗಿ ಭಾಗವಹಿಸಿ ದೇವಿಯ ಅನುಗ್ರಹ ಪಡೆಯಬೇಕು ಎಂದು ಬ್ರಹ್ಮಕಲಶೋತ್ಸವ ಸಮಿತಿಯವರು ವಿನಂತಿಸಿದ್ದಾರೆ.

