ಈ ವರ್ಷದ ಪ್ರಥಮ ಕಂಬಳ ಪಣಪಿಲ ಜಯ-ವಿಜಯ ಜೋಡುಕರೆ ಕಂಬಳವು ನವೆಂಬರ್ 15ರಂದು ನಡೆಯಲಿದೆ.ಕಂಬಳದ ಯಶಸ್ಸಿಗಾಗಿ ಕಳೆದ ಒಂದು ತಿಂಗಳಿನಿಂದ ಕಂಬಳ ಸಮಿತಿಯ ಸದಸ್ಯರು ಹಾಗೂ ಊರ ಸ್ವಯಂ ಸೇವಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ಕಂಬಳದ ಕರೆ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಎಲ್ಲಾ ಅಚ್ಚುಕಟ್ಟಿನ ವ್ಯವಸ್ಥೆಗಳು ನಡೆಯುತ್ತಿವೆ ಎಂದು ಕಂಬಳ ಸಮಿತಿಯ ಅಧ್ಯಕ್ಷ ನಂದೊಟ್ಟು ಯುವರಾಜ್ ಜೈನ್ ತಿಳಿಸಿದರು.
ಸುಮಾರು 160ಕ್ಕೂ ಹೆಚ್ಚು ಜೋಡಿ ಕೋಣಗಳು ಈ ಕಂಬಳದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ‘ಹಳ್ಳಿಯ ಕೂಟ’ ಎಂಬ ಕಂಬಳ ಇಂದಿಗೂ ಉಳಿದುಕೊಂಡು ಬಂದಿದೆ ಎಂದರೆ, ಅದಕ್ಕೆ ಪಣಪಿಲ ಕಂಬಳವೇ ಸಾಕ್ಷಿ” ಎಂದು ಕಾರ್ಯಧ್ಯಕ್ಷ ಸುಭಾಶ್ಚಂದ್ರ ಚೌಟ ಹೇಳಿದರು.
ಕಂಬಳ ಪ್ರೋತ್ಸಾಹಕರ ಕುರಿತು ಉಪಾಧ್ಯಕ್ಷ ಮುನಿರಾಜ್ ಹೆಗ್ಡೆ ಅವರು ಮಾಹಿತಿ ನೀಡಿದರು. ಪ್ರಧಾನ ಕಾರ್ಯದರ್ಶಿ ಅಶ್ವಥ್ ಕೆ. ಪಣಪಿಲ ಅವರು ಸ್ವಾಗತಿಸಿ, ಕಂಬಳದ ಕುರಿತು ಮತ್ತು ಅಲ್ಲಿನ ವ್ಯವಸ್ಥೆಗಳ ಕುರಿತು ಮಾಹಿತಿ ನೀಡಿದರು.
ಪ್ರಧಾನ ಕಾರ್ಯದರ್ಶಿ ಅಶ್ವತ್ಥ ಪಣಪಿಲ ಮಾತನಾಡಿ, ಬೆಳಗ್ಗೆ 8.ಕ್ಕೆ ಉದ್ಘಾಟನೆ ದಿ. ದೇಜಪ್ಪ ಪೂಜಾರಿ, ಬುಲಾಯಿ ವೇದಿಕೆಯ ಉದ್ಘಾಟನಾ ಸಮಾರಂಭ ನಡೆಯಲಿದೆ. ಶಾಸಕ, ಸಮಿತಿಯ ಗೌರವಾಧ್ಯಕ್ಷ ಉಮಾನಾಥ್ ಎ. ಕೋಟ್ಯಾನ್ ಉದ್ಘಾಟಿಸುವರು. ಕಂಬಳ ಸಮಿತಿ ಅಧ್ಯಕ್ಷ ಯುವರಾಜ್ ಜೈನ್ ನಂದೊಟ್ಟು ಅಧ್ಯಕ್ಷತೆ ವಹಿಸುವರು. ವಿಮಲ್ ಕುಮಾರ್ ಶೆಟ್ಟಿ, ಪಣಪಿಲ ಅರಮನೆ ಸಹಿತ ಗಣ್ಯರು ಉಪಸ್ಥಿತರಿರುವರು.
ರಾತ್ರಿ 8:30ಕ್ಕೆ ಸಭಾ ಕಾರ್ಯಕ್ರಮ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ. ಉಪಾಧ್ಯಕ್ಷ ಮುನಿರಾಜ ಹೆಗ್ಡೆ, ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
.ವರದಿ ರಾಯಿ ರಾಜ ಕುಮಾರ

