ನ್ಯೂಟ್ರಿಲೈಟ್ ಬಯೊಟಿನ್ ಸಿ ಪ್ಲಸ್ ಬಿಡುಗಡೆ

0
55

ಮಂಗಳೂರು : ನಿದ್ರಾಹೀನತೆ, ಅಧಿಕ ಒತ್ತಡ ಮತ್ತು ಕಡಿಮೆ ಪೆÇೀಷಕಾಂಶಗಳ ಆಹಾರ ಕ್ರಮದ ಇಂದಿನ ಜಗತ್ತಿನಲ್ಲಿ, ಆರೋಗ್ಯಕರ ಕೂದಲು, ಚರ್ಮ ಮತ್ತು ಉಗುರುಗಳು ಚೈತನ್ಯ ಕಳೆದುಕೊಳ್ಳುವ ಅಪಾಯವನ್ನು ತಡೆಯವ ಉದ್ದೇಶದಿಂದ ಆಮ್ವೇ ಇಂಡಿಯಾ, ನ್ಯೂಟ್ರಿಲೈಟ್ ಬಯೊಟಿನ್ ಸಿ ಪ್ಲಸ್ (ಜಿಂಕ್ ಮತ್ತು ಬೀಟಾ ಕೆರೋಟಿನ್ ಜೊತೆ) ಪರಿಚಯಿಸಿದೆ.

ದೇಹದೊಳಗಿನಿಂದ ಆರೋಗ್ಯಕರ ಕೂದಲುಗಳು, ಚರ್ಮ ಮತ್ತು ಉಗುರುಗಳನ್ನು ಪೋಷಿಸುವ ಸಾಮಗ್ರಿಗಳನ್ನು ಒಳಗೊಂಡಿರುವ ವೈಜ್ಞಾನಿಕವಾಗಿ ಸೂತ್ರೀಕರಣಗೊಂಡ ನ್ಯೂಟ್ರಾಸೆಟಿಕಲ್ ಇದಾಗಿದೆ. ‘ಬಯೊಟಿನ್ ಅದರಾಚೆ’ ಸೂತ್ರೀಕರಣದಂತೆ ಈ ಉತ್ಪನ್ನವು ಶಿಫಾರಸು ಮಾಡಲಾದ ಆಹಾರ ಕ್ರಮದಲ್ಲಿರುವ ಬಯೊಟಿನ್, ವಿಟಮಿನ್ ಸಿ ಮತ್ತು ಜಿಂಕ್‍ಪೋಷಕಾಂಶಗಳ ಜತೆಗೆ ಬೀಟಾ ಕೆರೊಟೀನ್ ಅಂಶಗಳನ್ನು ಶೇಕಡ 100ರಷ್ಟು ಪೂರೈಸುತ್ತದೆ ಎಂದು ಆಮ್ವೇ ಇಂಡಿಯಾದ ನಿರ್ವಾಹಕ ನಿರ್ದೇಶಕರಾದ ರಜನೀಶ್ ಚೋಪ್ರಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಈ ಮೂಲಕ ವಿಜ್ಞಾನ ಆಧಾರಿತ ಪೋಷಣೆ ಮತ್ತು ಸಸ್ಯ-ಆಧಾರಿತ ಆರೋಗ್ಯಕ್ಷೇಮದ ಮೇಲೆ ಆಮ್ವೇ ಇಂಡಿಯಾ ಇರಿಸಿದ ಗಮನವನ್ನು ಸಹ ಬಲಪಡಿಸುತ್ತದೆ. ನ್ಯೂಟ್ರಿಲೈಟ್ ನ 90ಕ್ಕೂ ಅಧಿಕ ವರ್ಷಗಳಿಗಿಂತ ಹೆಚ್ಚಿನ ಪೆÇೀಷಣೆ ಪರಿಣಿತಿಯೊಂದಿಗೆ ಅಭಿವೃದ್ಧಿಪಡಿಸಲಾಗಿರುವ ಈ ಉತ್ಪನ್ನವು ಅಗತ್ಯ ಪೋಷಕಾಂಶಗಳನ್ನು ಒಟ್ಟಾಗಿ ನೀಡುತ್ತದೆ.

ವಿಟಮಿನ್ ಸಿ ಕೊಲಾಜೆನ್ ಉತ್ಪಾದನೆಯಲ್ಲಿ ಸಹಾಯ ಮಾಡುತ್ತದೆ ಮತ್ತು ಆಕ್ಸಿಡೇಟಿವ್ ಒತ್ತಡದ ವಿರುದ್ಧ ಜೀವಕೋಶಗಳನ್ನು ರಕ್ಷಿಸುತ್ತದೆ. ಈ ಸೂತ್ರೀಕರಣವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು, ಪ್ರಕೃತಿಯ ಸಮೃದ್ಧ ಸಸ್ಯ ಸಂಪನ್ಮೂಲಗಳಾದ ಶೈವಲಗಳಿಂದ ಬೀಟಾ ಕ್ಯಾರೋಟಿನ್ ಪಡೆಯಲಾಗಿದೆ. ಇದು ಸೂರ್ಯನ ಹಾನಿಯಿಂದ ಚರ್ಮವನ್ನು ರಕ್ಷಿಸುತ್ತದೆ ಮತ್ತು ಅತಿನೇರಳೆ ಕಿರಣಗಳಿಂದ ಚರ್ಮ ಕೆಂಪಾಗುವಿಕೆಯಿಂದ (ಎರಿಥಿಮಾ) ಇದು ರಕ್ಷಣೆ ನೀಡುತ್ತದೆ ಎಂದು ವಿವರಿಸಿದ್ದಾರೆ.

LEAVE A REPLY

Please enter your comment!
Please enter your name here