ಮಂಗಳೂರು: “ವಿಶ್ವದಲ್ಲಿ ಶಾಂತಿ, ಸ್ನೇಹ ಮತ್ತು ಸೌಹಾರ್ದತೆಯನ್ನು ಸಾರುವ ಪ್ರಥಮ ಸ್ವಯಂ ಪ್ರೇರಿತ ಸಂಸ್ಥೆ ಅಂತರಾಷ್ಟ್ರೀ ಯ ರೋಟರಿ ಸಂಸ್ಥೆಯಾಗಿದ್ದು, ಸದಸ್ಯರು ಆರೋಗ್ಯ, ಶಿಕ್ಷಣ, ಸಮಾಜ ಸೇವೆ, ಮೂಲಭೂತ ಸೌರ‍್ಯಗಳನ್ನು ಒದಗಿಸಿ “ಸ್ವಹಿತ ಮೀರಿದ ಸೇವೆ” ಯನ್ನು ನೀಡಿ ಸಂಸ್ಥೆಗೆ ಗೌರವ ಸಂಪಾದಿಸಬೇಕು” ಎಂದು ಮೈಸೂರು ನಗರ ಮೂಲದ ಖ್ಯಾತ ವಾಣಿಜ್ಯೋದ್ಯಮಿ ಹಾಗೂ ರೋಟರಿ ಜಿಲ್ಲಾ 3181 ರ ನಿಯೋಜಿತ ಗವರ್ನರ್‌ರಾದ ಯಶಸ್ವಿ ಸೋಮಶೇಖರ್ ಸಲಹೆ ನೀಡಿದ್ದಾರೆ. ಅವರು ತಾ: 10.07.2025 ರಂದು ನಗರದ ಮಂಗಳೂರು ಕ್ಲಬ್ ಸಭಾಂಗಣದಲ್ಲಿ ಜರಗಿದ ರೋಟರಿ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ವಿಧಿವಿಧಾನವನ್ನು ನೆರವೇರಿಸಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು. ವಿಶ್ವದಲ್ಲಿ ಜೀವಮಾರಕವಾದ ಪೋಲಿಯೋ ರೋಗವನ್ನು ನಿರ್ಮೂಲನೆಗೊಳಿಸುವಲ್ಲಿ ರೋಟರಿ ಸಂಸ್ಥೆಯ ಪಾತ್ರ ಮಹತ್ತರವೆಂದು ಮಾಹಿತಿ ನೀಡಿ ನೂತನ ತಂಡಕ್ಕೆ ಶುಭ ಕೋರಿದರು.
ರೋಟರಿ ಜಿಲ್ಲಾ ವಲಯ ಸಹಾಯಕ ಗವರ್ನರ್‌ದಾದ ಡಾ. ರವಿಶಂಕರ್ ರಾವ್‌ರವರು ರೋಟರಿ ಸಂಸ್ಥೆಯ ಸದಸ್ಯರ ಪರಸ್ಪರ ಪ್ರೀತಿ, ಸ್ನೇಹ, ವಿಶ್ವಾಸ ಒಡನಾಟದ ಬಗ್ಗೆ ವಿವರಣೆ ನೀಡಿ ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ತಮ್ಮ ಸಂಪೂರ್ಣ ಬೆಂಬಲ ಮತ್ತು ಸಹಕಾರ ನೀಡುವ ಆಶ್ವಾಸನೆ ನೀಡಿ ಡಾ. ರಂಜನ್ ಸಂಪಾದಕ್ವದ ಗೃಹವಾರ್ತಾ ಪತ್ರಿಗೆ “ಬಿಟ್ಸ್ ಆಂಡ್ ಬೈಟ್ಸ್” ಯನ್ನು ಬಿಡುಗಡೆಗೊಳಿಸಿದರು.
ವಲಯ ಅಧಿಕಾರಿಯವರಾದ ಪ್ರಶಾಂತ್ ರೈಯವರು ಪ್ರಾಸ್ಥಾವಿಕವಾಗಿ ಮಾತನಾಡಿ ಸಂಸ್ಥೆಯು ಜಿಲ್ಲಾ ಮಟ್ಟದಲ್ಲಿ ಪಡೆದ “ಗ್ಲೋಬಲ್ ಎಕ್ಸಲೆನ್ಸ್” ಪ್ರಶಸ್ತಿಯನ್ನು ಶ್ಲಾಘಿಸಿ ನೂತನ ತಂಡವನ್ನು ಅಭಿನಂದಿಸಿದರು.
ನಿರ್ಗಮನ ಅಧ್ಯಕ್ಷ ರೋ. ಗಣೇಶ್ ಕೊಡ್ಲಮೊಗರು ಅವರು ಸ್ವಾಗತಿಸಿ ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಸಹಕಾರ ನೀಡಿದ ಸರ್ವ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ನಿರ್ಗಮನ ಕಾರ್ಯದರ್ಶಿ ಸುದೇಶ್ ವಾರ್ಷಿಕ ವರದಿ ಮಂಡಿಸಿದರು.
ನೂತನ ಅದ್ಯಕ್ಷ ಸ್ಥಾನವನ್ನು ಅಲಂಕರಿಸಿದ ಹಾಗೂ ಸಂಸ್ಥೆಯ ಪ್ರಥಮ ಮಹಿಳೆ ಅದ್ಯಕ್ಷೆಯವರಾದ ಶ್ರೀಮತಿ ಸಜ್ನ ಭಾಸ್ಕರ್‌ರವರು ತಮ್ಮ ಅಧಿಕಾರವಧಿಯಲ್ಲಿ ಶಿಕ್ಷಣ, ಆರೋಗ್ಯ, ಸಮಾಜದ ಮೂಲಭೂತ ಸೌರ‍್ಯಗಳಿಗೆ ಆದ್ಯತೆ ನೀಡುವ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ನುಡಿದು ಅದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸರ್ವ ಸದಸ್ಯರ ಉತ್ಸಾಹ ಪ್ರೋತ್ಸಾಹ ಕೋರಿದರು. ಈ ಸಂದರ್ಭದಲ್ಲಿ ಜೇಸನ್ ರೇಗೊ, ರೋಶನ್ ಮಥಾಯಸ್ ಮತ್ತು ಶ್ರೀಮತಿ ರೇಷ್ಮ ಕರ್ಕೆರಾ ರವರನ್ನು ಸಂಸ್ಥೆಗೆ ನೂತನ ಸದಸ್ಯರಾಗಿ ಸೇರ್ಪಡಿಸಲಾಯಿತು. ನೂತನ ಕಾರ್ಯದರ್ಶಿ ಸುಜೀರ್ ಪದ್ಮನಾಭ್ ನಾಯ್ಕ್ ವಂದಿಸಿದರು.
ಪದಾಧಿಕಾರಿಗಳ ವಿವರ: ಉಪಾದ್ಯಕ್ಷ ಅನಿಲ್ ಗೊನ್ಸಾಲ್ವಿಸ್, ಧಂಡಾಧಿಕಾರಿ ಶ್ರೀಮತಿ ಸರಿತಾ ಡಿ’ಸೋಜಾ, ಕೋಶಾಧಿಕಾರಿ ಶ್ರೀಮತಿ ಪ್ರತಿಭಾ ರಾವ್,
ನಿರ್ದೇಶಕರು: ಸಂಸ್ಥೆ ಸೇವೆ: ಡಾ. ರಂಜನ್ ರಾವ್, ವೃತ್ತಿಪರ ಸೇವೆ: ನಿತಿನ್ ದೇವಾಡಿಗ, ಸಮುದಾಯ ಸೇವೆ:ಸನೀತ್ ಶೇಟ್, ಅಂತರಾಷ್ರಿö್ಟÃಯ ಸೇವೆ: ಸುಮಿತ್ ರಾವ್, ಯುವಜನ ಸೇವೆ: ಕೆನ್ಯೂಟ್ ಪಿಂಟೋ.

