ಲಯನ್ಸ್ ಕ್ಲಬ್, ಅಲಂಗಾರು ವತಿಯಿಂದ ಲಯನ್ಸ್ ಜಿಲ್ಲಾ ಗವರ್ನರ್ ಅವರ ಅಧಿಕೃತ ಭೇಟಿ ಕಾರ್ಯಕ್ರಮವು ಶನಿವಾರ ಫೆಬ್ರವರಿ 14, 2026ರಂದು ಸಂಜೆ ಕಡಲಕೆರೆಯ ಸ್ರಷ್ಟಿ ಗಾರ್ಡನಲ್ಲಿ ಯಶಸ್ವಿಯಾಗಿ ನಡೆಯಿತು.
ಈ ಸಂದರ್ಭದಲ್ಲಿ ನೆಲ್ಲಿಗುಡ್ಡೆಯ ವಿಕಲಚೇತನ ಸದಸ್ಯನಿರುವ ಕುಟುಂಬವೊಂದಕ್ಕೆ ಕ್ಲಬ್ ವತಿಯಿಂದ ರೂ. 35,000 ವೆಚ್ಚದಲ್ಲಿ ಸ್ಥಾಪಿಸಲಾದ ಸೌರ ಜಲತಾಪಕ (Solar Water Heater) ಶಾಶ್ವತ ಯೋಜನೆಯನ್ನು ಜಿಲ್ಲಾ ಗವರ್ನರ್ ಲಯನ್ ಕುಡ್ಪಿ ಅರವಿಂದ್ ಶೆಣ್ಯೆಯವರು ಉದ್ಘಾಟಿಸಿದರು.
ಸಮಾಜಸೇವೆಯಲ್ಲಿ ಅಪಾರ ಕೊಡುಗೆ ನೀಡಿರುವ ಶಿರ್ತಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ “ಆಪದ್ಬಾಂಧವ”ರಾಗಿ ಗುರುತಿಸಿಕೊಂಡಿರುವ ಸೂರಜ್ ಜೈನ್ ಹಾಗೂ ಮೌನವಾಗಿ ಮಾನವೀಯ ಸೇವೆ ಸಲ್ಲಿಸುತ್ತಿರುವ ಲಯನ್ಸ್ ಕ್ಲಬ್ ಅಲಂಗಾರು ಇದರ ಹಿಂದಿನ ಅಧ್ಯಕ್ಷ ಲಯನ್ ಹರ್ಮನ್ ರೊಡ್ರಿಗಸ್ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ್ ಶೆಣ್ಯೆಯವರು ತಮ್ಮ ಮಾತಿನಲ್ಲಿ ಅಲಂಗಾರು ಕ್ಲಬ್ ನಡೆಸುತ್ತಿರುವ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಶ್ಲಾಘಿಸಿ, ಸದಸ್ಯತ್ವದಲ್ಲಿ 50% ಏರಿಕೆ ಸಾಧಿಸಿದ ಕ್ಲಬ್ ಅಧ್ಯಕ್ಷ ಲಯನ್ ಅಮಿತ್ ಡಿಸಿಲ್ವ ಇವರ ಕಾರ್ಯಕ್ಷಮತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂತೀಯ ಅಧ್ಯಕ್ಷ ಲಯನ್ ಜಗದೀಶ್ ಚಂದ್ರ D.K., ವಲಯ ಒಂದರ ಅಧ್ಯಕ್ಷ ಲಯನ್ ಮೆಲ್ವಿನ್ ಸಲ್ಡಾನ, ವಲಯ ಎರಡರ ಅಧ್ಯಕ್ಷ ಲಯನ್ ಜೊಸ್ಸಿ ಮಿನೇಜಸ್, ಕ್ಯಾಬಿನೆಟ್ ಕಾರ್ಯದರ್ಶಿ ಲಯನ್ ಚಂದ್ರೆಗೌಡ ಹಾಗೂ ಜಿಲ್ಲೆಯ ಹೆಚ್ಚಿನ ಕ್ಲಬ್ಬುಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಕುಟುಂಬ ವರ್ಗದವರು ಹಾಜರಿದ್ದರು.
ಅಲಂಗಾರು ಕ್ಲಬ್ ಅಧ್ಯಕ್ಷ ಅಮಿತ್ ಡಿಸಿಲ್ವರವರು ಸ್ವಾಗತಿಸಿ, ಕಾರ್ಯದರ್ಶಿ ಲಯನ್ ರಿಚರ್ಡ್ ಡಿಸೋಜ ವಂದನಾರ್ಪಣೆಗೈದ ಈ ಕಾರ್ಯಕ್ರಮವನ್ನು ಲಯನ್ ಮನೋಹರ್ ಕುಟಿನ್ನಾರವರು ನಿರೂಪಿಸಿದರು.

