ಅಕ್ರಮ ಕಟ್ಟಡ, ಅರಣ್ಯ ನಾಶ, ಕಂದಾಯ ಭೂಮಿ ನುಂಗಲು ಹೊರಟ ಸದಾನಂದನಿಗೆ ಅಧಿಕಾರಿಗಳಿಂದ ಕಠಿಣ ಕಾನೂನು ಕ್ರಮ

0
35

ತುಳುನಾಡು÷ ಮೂಡುಬಿದಿರೆ ವ್ಯಾಪ್ತಿಯ ಶಿರ್ತಾಡಿ ಪಂಚಾಯತ್ ಒಳಪಟ್ಟ ಮೂಡುಕೋಣಾಜೆ ಗ್ರಾಮದ ಕುಂಟಲ ಎಂಬಲ್ಲಿ ಸರ್ವೇ ನಂಬರ್ 197ರಲ್ಲಿ ಸುಮಾರು ಎರಡು ಎಕರೆ ಸರ್ಕಾರಿ ಕಂದಾಯ ಭೂಮಿಯ ಪ್ರಕೃತಿ ನಾಶ ಮತ್ತು ಸಹಜ ಪ್ರಕೃತಿಯ ವಿರೂಪ ಗೊಳಿಸುವಿಕೆ ಮತ್ತು ಅತಿಕ್ರಮಣ ಹಾಗೂ ಅನಧಿಕೃತ ಕಟ್ಟಡ ನಿರ್ಮಾಣ ಸಂಬಂಧ ಪಂಚಾಯತ್ ಸಭೆ ನಡೆಸಿ ಚರ್ಚಿಸಿ ಒಮ್ಮತದ ನಿರ್ಣಯ ಕೈಗೊಂಡು ಅಕ್ರಮ ಕಟ್ಟಡ ಮತ್ತು ಕಂದಾಯಭೂಮಿ ಅತಿಕ್ರಮಣದಾರ ಸದಾನಂದ ವಶಪಡಿಸಿಕೊಳ್ಳಲಾಗಿದೆ,ತೆರವುಗೊಳಿಸಲು ನಿರ್ಧರಿಸಿ ನೋಟೀಸು ಜಾರಿ ಮಾಡಲಾಗಿದೆ ಹಾಗೂ ಶಿರ್ತಾಡಿ ಗ್ರಾಮ ಪಂಚಾಯತ್ ಕಾರ್ಯಾಲಯ ದಿನಾಂಕ 13. 11. 2025ರಂದು ಪತ್ರ ಸಂಖ್ಯೆ 159 /25 -26 ಮಾನ್ಯ ತಹಶೀಲ್ದಾರರು ಮೂಡಬಿದರೆ ಇವರಿಗೆ ತೆರವು ಕ್ರಮ ಕೈಗೊಳ್ಳಲು ಮಾಹಿತಿ ಪತ್ರ ರವಾನಿಸಿದೆ ಎಂದು ತುಳುನಾಡು ವಾರ್ತೆ ಪತ್ರಿಕೆಗೆ ಮಾಹಿತಿ ಲಭ್ಯವಾಗಿದೆ
ಹಾಗೂ ಅರಣ್ಯ ನಾಶದ ಕುರಿತು ಗಂಭೀರವಾಗಿ ಪರಿಗಣಿಸಿದ ಅರಣ್ಯ ಇಲಾಖೆ ಪ್ರಕರಣ ಸಂಖ್ಯೆ ಪ್ರಕರಣ ಸಂಖ್ಯೆ18/ 2025 -26 ದಾಖಲಿಸಿ ಕಲಂ 25 (3), 33(2)ಅರಣ್ಯ ಕಾನೂನು 1963ರ ಮತ್ತು1969ರ ಪ್ರಕಾರ ದಿನಾಂಕ 18.11.2025 ರಂದು ಸದಾನಂದ ಎಂಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದೆ ಎಂಬ ಮಾಹಿತಿಯೂ ಪತ್ರಿಕೆಗೆ ಲಭ್ಯವಾಗಿದೆ ಪ್ರಕರಣದಲ್ಲಿ ಪ್ರಾಕೃತಿಕ ಅರಣ್ಯ ನಾಶಕ್ಕೆ ಸಂಬಂಧಿಸಿ ಸಮಗ್ರ ತನಿಖೆಯ ನಂತರ ಸದಾನಂದನಿಗೆ ದಂಡ ಅಥವಾ ಜೈಲು ಅಥವಾ ದಂಡ ಸಹಿತ ಜೈಲು ಶಿಕ್ಷೆ ಆಗುವ ಸಾಧ್ಯತೆ ಇದೆ.

ಈಗಾಗಲೇ ಕಂದಾಯ ಇಲಾಖೆಯು ಕಾರ್ಯಪ್ರವೃತ್ತರಾಗಿ ನಾಶಪಡಿಸಿದ ಸರ್ವೆ ನಂಬರ್ 197 ರಲ್ಲಿ ಸಾರ್ವಜನಿಕ ಅತಿಕ್ರಮಣ ನಿಷೇಧ ಫಲಕ ಅಳವಡಿಸಿದ್ದು, ಮೀಸಲಿಟ್ಟ ಕಂದಾಯ ಸರ್ಕಾರಿ ಭೂಮಿಯಾಗಿದ್ದು ಯಾವುದೇ ಕಾರಣಕ್ಕೂ ಅತಿಕ್ರಮಣ ನಿಷಿದ್ಧ ಎನ್ನಲಾಗಿದೆ. ಅತಿಕ್ರಮಿಸಿರುವ ಸದಾನಂದ ಅರಣ್ಯ ಇಲಾಖೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ , ಗ್ರಾಮ ಆಡಳಿತ ಅಧಿಕಾರಿ, ತಹಶೀಲ್ದಾರರು ಮೂಡುಬಿದಿರೆ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳ ಮುಂದೆ ಹಾಜರಾಗಬೇಕಿದ್ದು, ನೋಟಿಸು ನೀಡಲಾಗಿದೆ ಎನ್ನುವ ಮಾಹಿತಿ ಪತ್ರಿಕೆಗೆ ಲಭ್ಯವಾಗಿದೆ ಆದರೆ ಅತಿಕ್ರಮಣದಾರ ಸದಾನಂದ ತಲೆಮರಿಸಿಕೊಂಡಿದ್ದು ಹಾಜರಾಗದಿದ್ದಲ್ಲಿ ಬಂಧನ ಸಾಧ್ಯತೆ ಇದೆ ಕುಂಟಲ ಪರಿಸರದಲ್ಲಿ ಘರ್ಜಿಸುತ್ತಿದ್ದ ಸದಾನಂದ ಗುಳ್ಳೆ ನರಿಯಂತೆ ಕಾಣೆಯಾಗಿದ್ದಾನೆ ಎಲ್ಲೆಂದರಲ್ಲಿ ರೇಗಾಡುತ್ತಿದ್ದ ಸದಾನಂದ, ಈಗ ತಲೆ ಮರೆಸಿಕೊಂಡು ಮೌನವಾಗಿದ್ದಾನೆ, ಅಧಿಕಾರಿಗಳ ದಿಟ್ಟ ಕಾರ್ಯಾಚರಣೆಗೆ ಸದಾನಂದ ತತ್ತರಿಸಿದ್ದಾನೆ ಮಾಡಿದ್ದುಣ್ಣೋ ಮಹಾರಾಯ ಎಂಬಂತಾಗಿದೆ ಸದಾನಂದನ ಸ್ಥಿತಿ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳ ದಿಟ್ಟ ಕಾರ್ಯಾಚರಣೆ, ಪತ್ರಿಕಾ ವರದಿಗಳು, ಮತ್ತು ಕಾನೂನು ಕ್ರಮಕ್ಕಾಗಿ ಸಾರ್ವಜನಿಕರು ಅಭಿನಂದಿಸಿದ್ದಾರೆ ಸಂತಸ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here