ಬದುಕಿನ ಪ್ರಶ್ನೆಗಳಿಗೆ ಹಲವರಿಗೆ ಉತ್ತರ ಸಿಕ್ಕಿದ್ದು ಉತ್ತರಾಖಂಡದಲ್ಲಿ ಎಂದು ಕೆಲವರು ಹೇಳಿದನ್ನು ಕೇಳಿದ್ದೆ. ನಾವು ಉತ್ತರಾಖಂಡಕ್ಕೆ ಹೊರಟಿದ್ದೇವೆ ಎಂದು ಹೇಳಿದೆ – ಪ್ರಾಸಕವಿ ಖ್ಯಾತಿಯ ಮೋರ್ಟಿನ ಕಿರಣ್ ಶೆಟ್ರು – ನೈಕಂಬ್ಳಿ ಟು ನೈನಿತಾಲ್ ಎಂದು ಟೈಟಲ್ ಕೊಟ್ಟು – ಪಯಣ ದೀರ್ಘ ಅನುಭವ ಸ್ವರ್ಗ ಎಂದುಬಿಟ್ಟರು. ಹೌದಲ್ವ ಎನಿಸಿತು. ಇದೇ ಸೆಪ್ಟೆಂಬರಿನಲ್ಲಿ ನಾವೆಲ್ಲ ಓಂ ಪರ್ವತ, ಆದಿ ಕೈಲಾಸ ಸೇರಿದಂತೆ ಹಲವು ಸ್ಥಳಗಳಿಗೆ ತೆರಳಲಿದ್ದೇವೆ. ನೀವು ಆಸಕ್ತರಾದರೆ ಆಗಮಿಸಬಹುದು. ಬೆಂಗಳೂರಿನಿಂದ ಹಲವರು ಹೊರಡುತ್ತಿದ್ದೇವೆ, ಕೆಲವರು ಮುಂಬಯಿಯಿಂದ ಕೂಡಿಕೊಳ್ಳಲಿದ್ದಾರೆ. ಹಲ್ದ್ವಾನಿ ಇಂದ ಅಕ್ಷರಶಃ ಸ್ವರ್ಗಲೋಕ ಪಯಣ ಆರಂಭ!
ನೈನಿತಾಲಿನಲ್ಲಿ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ ಇದೆ. ತೇಜಸ್ವಿಯವರ “ರುದ್ರಪ್ರಯಾಗದ ನರಭಕ್ಷಕ” ನಾವೆಲ್ಲ ಓದಿದ್ದೇವೆ. ಅಷ್ಟಕ್ಕೂ ನಮಗೆಲ್ಲ ಜಿಮ್ ಕಾರ್ಬೆಟ್ ಪರಿಚಯ ಆಗಿದ್ದೆ ತೇಜಸ್ವಿಯವರ ಮೂಲಕ. ನೈನಿತಾಲ್ ಮಗ್ಗುಲಲ್ಲೇ ಕೈಂಚಿ ಧಾಮ್ ಇದೆ, ಅಲ್ಲಿದ್ದಾರೆ ನೀಮ್ ಕರೋಲಿ ಬಾಬಾ! ಈಗ ಆಪಲ್ ಕಂಪನಿ ಕಟ್ಟಿ, ಜಾಗತಿಕ ಧೈತ್ಯ ಉದ್ಯಮಿ ಎನಿಸಿಕೊಂಡಿದ್ದ ಸ್ಟೀವ್ ಜಾಬ್ ಹಿಂದೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳುವ ನಿಲುವಿಗೆ ಬಂದಿದ್ದರು. ಹಾಗಾಗಿ 1974ನೇ ಇಸವಿಗೆ ಈ ಸ್ಟೀವ್ ಜಾಬ್ ನೀಮ್ ಕರೋಲಿ ಬಾಬಾರನ್ನು ಹುಡುಕಿಕೊಂಡು ಇಲ್ಲಿಗೆ ಬಂದಿದ್ದರು. ಯಾವಾಗ ನೀಮ್ ಕರೋಲಿ ಆಶ್ರಮಕ್ಕೆ ಸ್ಟೀವ್ ಭೇಟಿ ಕೊಟ್ಟರೋ ಅವರ ಹಣೆಬರಹ ಬದಲಾಗಿ ಹೋಗಿತ್ತು! ಅದರ ನಂತರವೇ ಆಪಲ್ ಕಂಪೆನಿ ಜಾಗತಿಕವಾಗಿ ಎದ್ದು ನಿಂತಿತು. ಅದೆಲ್ಲವೂ ನೀಮ್ ಕರೋಲಿ ಬಾಬಾ ಆಶೀರ್ವಾದ ಎನ್ನುವುದು ಸ್ಟೀವ್ ನಂಬಿಕೆಯಾಗಿತ್ತು, ಬಾಬಾ ಹೆಸರು ಜಗದಗಲ ಹಬ್ಬಿತು. ಸ್ಟೀವ್ ಜಾಬ್ ಬೆಡ್ ರೂಮಿನಲ್ಲೇ ನೀಮ್ ಕರೋಲಿ ಬಾಬ ಪೋಟೋ ಇದೆಯೆಂದು ಖುದ್ದು ಸ್ಟೀವ್ ಜಾಬ್ ಹೇಳಿಕೊಳ್ಳುತ್ತಾರೆ. ಆ ನಂತರ ಸ್ಟೀವ್ ಜಾಬ್ ಸಲಹೆಯ ಮೇರೆಗೆ ಮಾರ್ಕ್ ಜುಕರ್ ಬರ್ಗ್, ಕ್ರಿಕೆಟಿಗ ಯುವರಾಜ್ ಸಿಂಗ್, ವಿರಾಟ್ ಕೊಹ್ಲಿ, ಲ್ಯಾರಿ ಪೇಜ್ ಮತ್ತು ಸರ್ಜಿ ಬ್ರಿನ್, ಮುಂದೆ ರಜನಿಕಾಂತ್, ರಾಮ ದಾಸ್ ಆದ ರಿಚರ್ಡ್ ಆಲ್ಬರ್ಟ್, ಕತ್ರಿನಾ ಕೈಪ್, ವಿಕ್ಕಿ ಕೌಶಲ್ ಹೀಗೆ ಸಾಲು ಸಾಲು ಸೆಲೆಬ್ರಿಟಿಗಳು ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಮತ್ತು ಬಾಬಾ ಆಶ್ರಮದ ಭೇಟಿಯ ನಂತರ ಆದ ಪಾಸಿಟೀವ್ ಬದಲಾವಣೆಯ ಬಗ್ಗೆಯೂ ಮಾತಾಡಿದ್ದಾರೆ.
ನಾನಿಲ್ಲಿ ಹೇಳಿರುವುದು ಕೇವಲ ಒಂದು ಸ್ಥಳದ ಬಗ್ಗೆ ಮಾತ್ರ. ಐದು ದಿನಗಳ ಪಯಣದಲ್ಲಿ ಇನ್ನೂ ಹಲವು ಸ್ಥಳಗಳಿಗೆ ಭೇಟಿ ನೀಡಲಿದ್ದೇವೆ. ಆ ಸ್ಥಳಗಳ ವಿಶಿಷ್ಟತೆ ಮತ್ತೊಮ್ಮೆ ಬರೆಯಲಿದ್ದೇನೆ. ಅಕ್ಟೋಬರ್ ನಂತರ ಹಿಮ ಬೀಳಲು ಆರಂಭವಾದರೆ, ಮುಂದಿನ ಮೇ ತನಕ ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಪ್ರವೇಶ ನಿಷಿದ್ಧವಾಗಿರುತ್ತದೆ. ಹಾಗಾಗಿ ಇದೇ ಸೆಪ್ಟಂಬರ್ 22ರಿಂದ ನಾವೊಂದಿಷ್ಟು ಜನರು ಉತ್ತರಾಖಂಡದ ಹಲ್ದವಾನಿಯಿಂದ ಹೊರಟು, ಆದಿ ಕೈಲಾಸ, ಓಂ ಪರ್ವತ, ಅಲ್ಮೋರಾದ ಚಿಟೈ ಗೋಲು ದೇವತಾ, ಕಾಳಿ ನದಿಯ ಉಗಮ ಸ್ಥಾನ, ಗಣೇಶ ಪರ್ವತ, ನಾಗ ಪರ್ವತ ನೀಮ್ ಕರೋಲಿ ಬಾಬಾ ಮಂದಿರ, ಸಂದರ್ಶಿಸಲಿದ್ದೇವೆ.
ಆಗಮಿಸುವ ಆಸಕ್ತರಿದ್ದರೆ ಸಂಪರ್ಕಿಸಿ 63634 92234 ಜೊತೆಯಾಗಬಹುದು.
- ನಾಗರಾಜ್ ನೈಕಂಬ್ಳಿ 9741474255