ಬಂಟ್ವಾಳ : ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ಓಂ ಶ್ರೀ ಗೆಳೆಯರ ಬಳಗ (ರಿ )ನಾಯಿಲ ಪಾಣೆಮಂಗಳೂರು ಇದರ 2025-26 ಸಾಲಿನ ಅಧ್ಯಕ್ಷರಾಗಿ ಶ್ರೀ ದಿನೇಶ್ ನೆಲ್ಲಿಗುಡ್ಡೆ ಸರ್ವಾನುಮತದಿಂದ ಆಯ್ಕೆಯಾಗಿರುತ್ತಾರೆ.
ಗೌರವ ಅಧ್ಯಕ್ಷರಾಗಿ ಶ್ರೀ ನಾಗೇಶ್ ಕುಲಾಲ್ ಪ್ರಧಾನ ಕಾರ್ಯದರ್ಶಿಯಾಗಿ ಕರುಣಾಕರ, ಉಪಾಧ್ಯಕ್ಷರಾಗಿ ಶುಭಕರ, ಜೊತೆ ಕಾರ್ಯದರ್ಶಿಯಾಗಿ ಪ್ರಸಾದ್, ಕೋಶಾಧಿಕಾರಿಯಾಗಿ ಮಹಾಬಲ, ಕ್ರೀಡಾ ಕಾರ್ಯದರ್ಶಿಯಾಗಿ ಪ್ರಣಾಮ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕಮಲಾಕ್ಷ ಕೊಟ್ಟಾರಿ, ಸಂಘಟನಾ ಕಾರ್ಯದರ್ಶಿಯಾಗಿ ರಾಜೇಶ್ ಕೋಟ್ಯಾನ್, ಗೌರವ ಕಾರ್ಯದರ್ಶಿಯಾಗಿ ರಾಜೇಶ್ ಆಯ್ಕೆಯಾಗಿರುತ್ತಾರೆ, ಸಂಘದ ನಿಕಟ ಪೂರ್ವ ಅಧ್ಯಕ್ಷರು ಶ್ರೀ ಕಿರಣ್ ಅಟ್ಲೂರು ರವರು ಆಯ್ಕೆ ಪ್ರಕ್ರಿಯೆಯನ್ನು ಮಾಡಿಕೊಟ್ಟರು.