ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರು ಹಾಗೂ ಜಾನಪದ ವಿದ್ವಾಂಸರೂ ಆಗಿದ್ದ ಡಾ. ವಾಮನ ನಂದಾವರ ಅವರ ಸಂಸ್ಮರಣೆ ಹಾಗೂ ಕೃತಿ ಬಿಡುಗಡೆ ಕರ‍್ಯಕ್ರಮ ಮಾ.14ರಂದು ಅಪರಾಹ್ನ 2:30ಕ್ಕೆ ಮಂಗಳೂರಿನ ತುಳು ಭವನದಲ್ಲಿ ನಡೆಯಲಿದೆ.
ಆಕೃತಿ ಆಶಯ ಪಬ್ಲಿಕೇಶನ್ಸ್ ಸಹಯೋಗದಲ್ಲಿ ನಡೆಯುವ ಈ ಕರ‍್ಯಕ್ರಮದಲ್ಲಿ ಚಂದ್ರಕಲಾ ನಂದಾವರ ಅವರು ಸಂಪಾದಿಸಿರುವ ಡಾ. ವಾಮನ ನಂದಾವರ ಅವರು ಬರೆದಿರುವ ಜಾತಿ ಜನಾಂಗಗಳ ಅಧ್ಯಯನಾತ್ಮಕ ಲೇಖನಗಳ ಕೃತಿ ‘ಆದಿಮ’ ಮತ್ತು ಅವರ ಕವನ ಸಂಕಲನ ಕೃತಿ ‘ತಾಳಮೇಳ’ ಬಿಡುಗಡೆಗೊಳ್ಳಲಿದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ಅಧ್ಯಕ್ಷತೆ ವಹಿಸಿ ಕೃತಿ ಬಿಡುಗಡೆ ಮಾಡುವರು. ಉಚ್ಚಿಲ ಕಲಾಗಂಗೋತ್ರಿಯ ನರ‍್ದೇಶಕ ಕೆ. ಸದಾಶಿವ ಅವರು ‘ವಾಮನ ನಂದಾವರ ಚಾವಡಿ’ ನಾಮಫಲಕ ಅನಾವರಣ ಮಾಡಲಿದ್ದಾರೆ.
ಶಾಸ್ತ್ರೀಯ ಅಧ್ಯಯನ ಕೇಂದ್ರದ ಡಾ. ಚಲಪತಿ ಆರ್. ಮೈಸೂರು ಅವರು ‘ಆದಿಮ’ ಕೃತಿಯನ್ನು ಮತ್ತು ಕವಯಿತ್ರಿ ಜ್ಯೋತಿ ಮಹಾದೇವ ಅವರು ‘ತಾಳಮೇಳ’ ಕೃತಿಯನ್ನು ಪರಿಚಯ ಮಾಡಲಿದ್ದಾರೆ.
ರತ್ನಾವತಿ ಬೈಕಾಡಿ ತಂಡದವರು ಮತ್ತು ಜಯಲಕ್ಷ್ಮಿ ಶಾಸ್ತ್ರೀಯವರು ಗಾಯನ ಕರ‍್ಯಕ್ರಮ ನಡೆಸಿ ಕೊಡಲಿದ್ದಾರೆ ಎಂದು ತುಳು ಅಕಾಡೆಮಿ ಪ್ರಕಟಣೆ ತಿಳಿಸಿದೆ.

