ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಘಕಟದಿಂದ ಮಾರ್ಚ್ 7 ರಂದು ಶನಿವಾರ ಅಪರಾಹ್ನ 3-30 ರಿಂದ 4-30 ರವರೆಗೆ ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿಯ ಸಾಕ್ಷಾತ್ಕಾರ ಮನೆಯಲ್ಲಿ ಕಾಸರಗೋಡಿನ ದೇವಸ್ಥಾನಗಳ ಶಿಲ್ಪ ವೈಭವದ ಕುರಿತಂತೆ “ಮನೆಯಂಗಳದಲ್ಲಿ ಸಾಹಿತ್ಯ ಅಭಿಯಾನ” ಹಮ್ಮಿಕೊಳ್ಳಲಾಗಿದೆ ಎಂದು ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ವಿಚಾರ ಮಂಡನೆಯನ್ನು ಕಾಸರಗೋಡಿನ ಸರ್ಕಾರಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕರಾದ ಡಾ. ಬಾಲಕೃಷ್ಣ ಹೊಸಂಗಡಿ ನಡೆಸಿಕೊಡಲಿದ್ದಾರೆ ಎಂದು ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಪ್ರಥಮ ಅಧ್ಯಕ್ಷರಾದ ಜಯಲಕ್ಷ್ಮಿ ಕಾರಂತ್ ಪ್ರಕಟಿಸಿದ್ದಾರೆ.
ಕಾಸರಗೋಡಿನ ವಿವಿಧ ಐತಿಹಾಸಿಕ ಆಧ್ಯಾತ್ಮಿಕ ಪರಂಪರೆಯ ದೇವಸ್ಥಾನಗಳ ಸನಾತನ ಕಾಲದ ಇತಿಹಾಸವನ್ನು ಮನವರಿಕೆ ಮಾಡಿಕೊಳ್ಳಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಸಾಹಿತ್ಯ ಅಭಿಯಾನ ಯಶಸ್ವಿಗೊಳಿಸಬೇಕಾಗಿ ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ನೂತನ ಅಧ್ಯಕ್ಷರಾದ ರಾಧಾಮಣಿ ಮೀಯಪದವು ವಿನಂತಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 8281283091.

