ನ.23ರಂದು ಇತಿಹಾಸ ಪ್ರಸಿದ್ಧ ದೊಡ್ಡಣಗುಡ್ಡೆ ಪಂಚ ಜುಮಾದಿ ದೈವದ ತಂಬಿಲ ಸೇವೆ

0
129

ಉಡುಪಿ ಜಿಲ್ಲೆಯಲ್ಲಿ ಇತಿಹಾಸ ಪ್ರಸಿದ್ಧ ಸಾವಿರಾರು ವರ್ಷಗಳ ಇತಿಹಾಸವಿರುವ ದೊಡ್ಡಣಗುಡ್ಡೆ ಪಂಚ ಜುಮಾದಿ ದೈವಸ್ಥಾನದಲ್ಲಿ ವರ್ಷಂ ಪ್ರತಿ ನಡೆಯುವಂತ
ಕೊಡಿ ತಿಂಗಳ ತಂಬಿಲ ಸೇವೆ ದಿನಾಂಕ 23.11.2025 ಆದಿತ್ಯವಾರದಂದು ಸಂಜೆ 6 ಗಂಟೆಗೆ ಸರಿಯಾಗಿ ಜರಗಲಿರುವುದು. ಈ ಸಂದರ್ಭದಲ್ಲಿ ದೈವ ಪಂಚ ಜುಮಾದಿ ಹಾಗೂ ಬಂಟ ದೈವದ ದರ್ಶನ ಸೇವೆ ಜರಗಲಿರುವುದು.


ಸಾಂಪ್ರದಾಯಿಕ ಪ್ರಕಾರ ಕೊಡಿ ತಿಂಗಳ ಮಂಜದ ಮಾರಿ ಪೂಜೆ ದಿನಾಂಕ 14.12.2025 ಆದಿತ್ಯವಾರದಂದು ಜರಗಲಿರುವುದು. ಹಾಗೂ ಮಧ್ಯಾಹ್ನ ಕರಂಬಳ್ಳಿ ವೆಂಕಟರಮಣ ದೇವಸ್ಥಾನದಲ್ಲಿ ಮಾರಿ ಸಮರಾಧನೆಯ ಅನ್ನಸಂತರ್ಪಣೆ ಜರಗಲಿರುವುದು. ಈ ಒಂದು ಪುಣ್ಯದ ಕಾರ್ಯದಲ್ಲಿ ಭಕ್ತಾದಿಗಳು ದೈವದ ಗಂಧ ಪ್ರಸಾದ ಪಡೆದು ದೈವದ ಕೃಪೆಗೆ ಪಾತ್ರರಾಗಬೇಕಾಗಿ ಕೇಳಿಕೊಳ್ಳುವ ಆಡಳಿತ ಮಂಡಳಿ ಹಾಗೂ ಊರಿನ  ಸಮಸ್ತರು ವಿನಂತಿಸಿದ್ದಾರೆ.

ವಿಶೇಷ ಸೂಚನೆ : ಗ್ರಾಮದ ಸದ್ಭಕ್ತರು ತಂಬಿಲ ಸೇವೆಗೆ ಕೋಳಿ ಕೊಡುವವರು ಸಂಜೆ ಸರಿಯಾಗಿ 6:00 ಒಳಗೆ ದೈವಸ್ಥಾನಕ್ಕೆ ತರಬೇಕೆಂದು ವಿನಂತಿ.

LEAVE A REPLY

Please enter your comment!
Please enter your name here