ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕಲಾಕುಂಚ ಮಹಿಳಾ ವಿಭಾಗದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಮಾರ್ಚ್ 8ನೇ ತಾರೀಖು ಭಾನುವಾರ “ದಾವಣಗೆರೆ ಗೃಹಿಣಿ’’ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ ತಿಳಿಸಿದ್ದಾರೆ.
ಈ ಸ್ಪರ್ಧೆಯಲ್ಲಿ ಆಶುಭಾಷಣ, ನೆನಪಿನ ಶಕ್ತಿ, ಪ್ರಶ್ನೋತ್ತರ ಆಕರ್ಷಕ ಮದುಮಗಳಂತೆ ವೇಷಭೂಷಣ ಮುಂತಾದ ಚಟುವಟಿಕೆಗಳು ಇದ್ದು ದಿನಾಂಕ 28-02-2026 ರೊಳಗೆ ಕಲಾಕುಂಚ ಕಛೇರಿಗೆ ಆಗಮಿಸಿ, ಪ್ರವೇಶ ಪತ್ರ ಭರ್ತಿ ಮಾಡಿಕೊಡಬೇಕಾಗಿ ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್‌ಶೆಣೈ ಪ್ರಕಟಿಸಿದ್ದಾರೆ.
ಯಾವುದೇ ವಯೋಮಾನದ ಮಿತಿ ಇಲ್ಲದೇ ಪ್ರವೇಶ ಪತ್ರ ಸ್ವೀಕರಿಸುವ ವಿಳಾಸ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, ಕೆ.ಬಿ.ಬಡಾವಣೆ, ಕುವೆಂಪು ರಸ್ತೆ, (ಲಾಯರ್ ರೋಡ್), ದಾವಣಗೆರೆ-577002 ಹೆಚ್ಚಿನ ಮಾಹಿತಿಗೆ 9538732777 ಈ ಸನೀಹವಾಣಿಗೆ ಸಂಪರ್ಕಿಸಬೇಕಾಗಿ ಕಲಾಕುಂಚ ಮಹಿಳಾ ವಿಭಾಗದ ಸಮಿತಿ ಸದಸ್ಯರಾದ ಶಿಲ್ಪಾ ಉಮೇಶ್ ವಿನಂತಿಸಿದ್ದಾರೆ.

