ಮಾ.8 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಕಲಾಕುಂಚ ಮಹಿಳಾ ವಿಭಾಗದಿಂದ “ಆಕರ್ಷಕ ಗೃಹಿಣಿ” ಸ್ಪರ್ಧೆ ಉದ್ಘಾಟನೆ

0
23

ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕಲಾಕುಂಚ ಮಹಿಳಾ ವಿಭಾಗದಿಂದ ಮಾರ್ಚ್ 8ನೇ ತಾರೀಖು ಭಾನುವಾರ ಬೆಳಿಗ್ಗೆ 10 ಗಂಟೆಗೆ ದಾವಣಗೆರೆಯ ಕಸ್ತೂರ್ಬಾ ಬಡಾವಣೆಯಲ್ಲಿರುವ ಕಲಾಕುಂಚ ಕಛೇರಿ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ “ಆಕರ್ಷಕ ಗೃಹಿಣಿ” ಉಚಿತ ಸ್ಪರ್ಧೆಯ ಸಮಾರಂಭದ ಉದ್ಘಾಟನೆಯಾಗಲಿದೆ ಎಂದು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.

ಸಮಾರಂಭದ ಉದ್ಘಾಟನೆಯನ್ನು ನಗರದ ಖ್ಯಾತ ವೈದ್ಯರು, ಸಾಹಿತಿಗಳಾದ ಡಾ|| ಶಶಿಕಲಾ ಕೃಷ್ಣಮೂರ್ತಿ ನೆರವೇರಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿಯವರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್‌ಶೆಣೈ, ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಕುಸುಮಾ ಲೋಕೇಶ್, ಕಲಾಕುಂಚ ಎಲೆಬೇತೂರು ಶಾಖೆಯ ಅಧ್ಯಕ್ಷರಾದ ಡಾ|| ನಿರ್ಮಲಾ ವಿಶ್ವನಾಥ್ ಕುಲಕರ್ಣಿ, ಕಲಾಕುಂಚ ಸಿದ್ದವೀರಪ್ಪ ಬಡಾವಣೆಯ ಶಾಖೆಯ ಅಧ್ಯಕ್ಷರಾದ ಲಲಿತಾ ಕಲ್ಲೇಶ್ ಆಗಮಿಸಲಿದ್ದಾರೆ.

ಸಾರ್ವಜನಿಕವಾಗಿ ಮಹಿಳೆಯರು ಗೃಹಿಣಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಸಮಾರಂಭ ಯಶಸ್ವಿಗೊಳಿಸಬೇಕಾಗಿ ಕಲಾಕುಂಚ ಮಹಿಳಾ ವಿಭಾಗದ ಗೌರವ ಅಧ್ಯಕ್ಷರಾದ ವಸಂತಿ ಮಂಜುನಾಥ್ ವಿನಂತಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ 9743897578 ಈ ಸನೀಹವಾಣಿಗೆ ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here