ಆ.31ರಂದು ಓಣಂ ಹಬ್ಬ ಆಚರಣೆ

0
2


ಉಡುಪಿ: ಕೇರಳ ಕಲ್ಚರಲ್​ ಅಂಡ್​ ಸೋಶಿಯಲ್​ ಸೆಂಟರ್​ 31ನೇ ವಾರ್ಷಿಕೋತ್ಸವ ಹಾಗೂ ಓಣಂ ಸಂಭ್ರಮ&2025 ಆ. 31ರಂದು ಅಂಬಲಪಾಡಿಯಲ್ಲಿನ ಶಾಮಿಲಿ ಸಭಾಭವನದಲ್ಲಿ ನಡೆಯಲಿದೆ ಎಂದು ಸೆಂಟರ್​ ಸದಸ್ಯ ಮನೋಜ್​ ಕಡಬ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಿಗ್ಗೆ 11ಕ್ಕೆ ಉದ್ಘಾಟನಾ ಸಮಾರಂಭದಲ್ಲಿ ಮಲಯಾಳಂ ಚಲನಚಿತ್ರ ನಟ ಹಾಗೂ ಕೊಲ್ಲಂ ವಿಧಾನಸಭಾ ಸದಸ್ಯ ಮುಕೇಶ್​ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಶಾಸಕ ಯಶ್ಪಾಲ್​ ಸುವರ್ಣ, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಎಸ್ಪಿ ಹರಿರಾಂ ಶಂಕರ್​, ಮಾಜಿ ಸಚಿವ ವಿನಯಕುಮಾರ್​ ಸೊರಕೆ, ಕೊಲ್ಲೂರು ದೇವಸ್ಥಾನ ಟ್ರಸ್ಟಿ ಅಭಿಲಾಷ್​ ಪಿ.ವಿ., ಕೇರಳ ಸಮಾಜಂ ಅಧ್ಯಕ್ಷ ಟಿ.ಕೆ.ರಾಜನ್​ ಮೊದಲಾದವರು ಉಪಸ್ಥಿತರಿರುವರು. ಸಭೆಯಲ್ಲಿ 5 ಮಂದಿ ಸಾಧಕರನ್ನು ಸನ್ಮಾನಿಸಲಾಗುವುದು. ಸದಸ್ಯರ ಮಕ್ಕಳಲ್ಲಿ ಈ ಬಾರಿಯ 10ನೇ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಉನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಗುವುದು ಎಂದರು.
ಮಧ್ಯಾಹ್ನ 2.30ಕ್ಕೆ ತ್ರಿಶೂರ್​ನ ಖ್ಯಾತ ಜನ ನಯನ ತಂಡದಿಂದ ಕೇರಳೀಯ ವೈಭವಂ ಭವ್ಯ ಸಾಂಸತಿಕ ಕಾರ್ಯಕ್ರಮ ನಡೆಯಲಿದೆ. ಸಾಯಂಕಾಲ 4.30ಕ್ಕೆ ಸಮಾರೋಪ ಕಾರ್ಯಕ್ರಮ ಹಾಗೂ ಬಹುಮಾನ ವಿತರಣೆ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಓಣಂ ಸಂಭ್ರಮ ಸಮಿತಿ ಅಧ್ಯಕ್ಷ ಶಿನೋದ್​ ಟಿ. ಆರ್​., ಕೆಸಿಎಸ್​ಸಿ ಅಧ್ಯಕ್ಷ ಸುಗುಣ ಕುಮಾರ್​, ಕಾರ್ಯದರ್ಶಿ ಬಿನೇಶ್​ ವಿ. ಸಿ., ತೇಜಸ್ವಿನಿ ಮಹಿಳಾ ವಿಭಾಗದ ಅಧ್ಯೆ ಶೈನಿ ಸತ್ಯಭಾಮ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here