ಜೀವನದಲ್ಲಿ ಸಿಗುವ ಉತ್ತಮ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು : ಜಿನೇಂದ್ರ ಖನಗಾವಿ IPS DIG

0
9

ಭಾರತದ ಬಲಿಷ್ಠ ಕಂಬಗಳು ನೀವು ನಿಮ್ಮಜೀವನದಲ್ಲಿ ಅನೇಕ ಅವಕಾಶಗಳು ಸಿಗುತ್ತವೆ. ಅವುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು.ನಿಮಗೆ ನಿಮ್ಮತಂದೆ ತಾಯಿಗಳು ವಿದ್ಯಾಭ್ಯಾಸಕ್ಕೆ ಬೇಕಾದ ಎಲ್ಲಾ ರೀತಿಯ ಸೌಲಭ್ಯವನ್ನುಒದಗಿಸುತ್ತಾರೆ.ಇಲ್ಲಿನ ಶಿಕ್ಷಕರು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸುತ್ತಾರೆ. ಎಕ್ಸಲೆಂಟ್‌ಎನ್ನುವಂತಹ ವಿದ್ಯಾ ಸಂಸ್ಥೆಯಲ್ಲಿ ಕಲಿಯುತ್ತರುವ ನೀವೆಲ್ಲರೂ ಭಾಗ್ಯ ಶಾಲಿಗಳು ಈ ಶಿಕ್ಷಣ ಸಂಸ್ಥೆ ನಿಮ್ಮ ಸಾಧನೆಗೆ ಬೇಕಾದ ಸರ್ವಜ್ಞಾನವನ್ನು ನೀಡುತ್ತಿದೆ.

ಅದನ್ನು ಧನಾತ್ಮಕ ಚಿಂತನೆಯಿಂದ ಸದುಪಯೋಗ ಪಡಿಸಿಕೊಳ್ಳಿ ಎಂದುಡೆಪ್ಯೂಟಿ ಇನ್ಸ್ಪೆಕ್ಟರ್‌ ಜನರಲ್‌ ಆಫ್ ಪೋಲಿಸ್ ಆಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿನೇಂದ್ರ ಖನಗಾವಿ ಅವರು ಕಲ್ಲಬೆಟ್ಟುವಿನ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರೇರಣೆ ಕಾರ್ಯಕ್ರಮದಲ್ಲಿ ಹೇಳಿದರು. ಮುಂದುವರಿದು ಮಾತಾನಾಡಿದ ಅವರು ಸಮಯವೆನ್ನುವುದು ಜೀವನದಲ್ಲಿ ಅತ್ಯಂತ ಅಮೂಲ್ಯವಾದ ಸಂಪನ್ಮೂಲ ಅದನ್ನು ಯಾವುದೇ ಕಾರಣಕ್ಕೂ ವ್ಯರ್ಥಮಾಡಬೇಡಿ.

ನಿಮಗೆ ಎದುರಾಗುವ ಎಲ್ಲಾ ರೀತಿಯ ಸಮಸ್ಯೆಗಳಿಗೆ ನೀವು ಹೆದರದೆ ನಿಮ್ಮ ಗುರಿಯಕಡೆಗೆ ಬಲಿಷ್ಠವಾಗಿರಿ.ಜೀವನದಲ್ಲಿ ಜೀವನದಲ್ಲಿ ತಪ್ಪುಗಳಾಗುವುದು ಸಹಜ ಆದರೆ ಆ ತಪ್ಪುಗಳನ್ನು ತಿದ್ದಿಕೊಂಡು ಜೀವನದಲ್ಲಿ ಮುನ್ನಡೆಯಬೇಕು.ಮಾನಸಿಕ ಒತ್ತಡವನ್ನು ನಿಭಾಯಿಸಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು.ಗುರಿಯಲ್ಲಿ ಸ್ಪಷ್ಟತೆ ಇದ್ದರೆ ಮಾತ್ರಗುರಿ ಮುಟ್ಟಲು ಸಾಧ್ಯ.ಸಾಧನೆಯ ಹಾದಿಯಲ್ಲಿ ಎಡವಿದಾಗ ನಿಮ್ಮನ್ನು ನೋಡಿ ನಗುವ ಅನೇಕ ಜನರಿರುತ್ತಾರೆ.

ಆದರೆ ಅವರ ಮಾತಿಗೆ ಅಂಜದೇ ನಿಮ್ಮ ಗುರಿಯಕಡೆಗೆ ಗಮನ ಹರಿಸಬೇಕು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನೀವು ಅತ್ಯಂತಉತ್ತಮ ಜ್ಞಾನವಂತರಾಗಿರಬೇಕು. ಸಾಮಾಜಿಕ ಪ್ರಜ್ಞೆ ಹೊಂದಿರಬೇಕು.ನೀವು ನೋಡುವಂತಹ ಪ್ರತೀ ವಿಷಯದಲ್ಲಿಯೂ ಸಾಮಾನ್ಯಜ್ಞಾನವಿದೆ.ಅದನ್ನು ಪಡೆಯುವ ಪ್ರಯತ್ನ ನಿಮ್ಮಿಂದಾಗಬೇಕು.ಪಾಠ ಕೇಳುವಾಗ ಗಮನವಿರಲಿ ಪ್ರಶ್ನಿಸುವ ಹವ್ಯಾಸ ಇದ್ದಾಗ ಜ್ಞಾನ ಹೆಚ್ಚಾಗುತ್ತದೆ.

ಎಲ್ಲಾ ಜ್ಞಾನದ ಮೂಲಗಳನ್ನು ನೀವು ಹೆಕ್ಕುವ ಕೆಲಸ ಮಾಡಬೇಕು ಸಂಶೋಧಿಸುವ ವಿಮರ್ಶಿಸುವ ಸಾಮಾರ್ಥ್ಯವನ್ನು ಹೊಂದಬೇಕು.ಪ್ರತಿಯೊಬ್ಬ ಮನುಷ್ಯನಲ್ಲಿ ನಾನು ಎನ್ನುವ ಅಹಂಕಾರವಿರುತ್ತದೆ. ನನ್ನಿಂದಲೇ ಎನ್ನುವ ಅಹಮಿಕೆ ಇರುತ್ತದೆ. ಆದರೇ ಇದೆಲ್ಲವನ್ನು ವಿದ್ಯಾರ್ಥಿಗಳಾದ ನೀವು ತೊರೆಯಬೇಕು ಎಂದಿಗೂ ಅಹಮಿಕೆ ನಿಮ್ಮಲ್ಲಿ ಇರಬಾರದು ಅದೇನಾದರು ಬಂದರೇ ಅಂದೇ ನಿಮ್ಮಅಂತ್ಯ.ಹಾಗಾಗಿ ನೀವು ಅಹಂಕಾರಿಗಳಗಬಾರದು ಅದು ಬೆಳವಣಿಗೆೆಯನ್ನು ಕುಂಠಿತಗೊಳಿಸುತ್ತದೆ.

ಅದರಿಂದ ದೂರವಿದ್ದು ಗುರಿಯಕಡೆಗೆ ಗಮನ ಹರಿಸಿದರೆ ಜೀವನದಲ್ಲಿ ಅತ್ಯುತ್ತಮ ಸಾಧಕರಾಗಬಹುದು. ದೇಶದಉತ್ತಮ ಪ್ರಜೆಯಾಗಬಹುದು ಸಮಾಜಗೌರವಿಸುವ ವ್ಯಕ್ತಿನೀವಾಗುತ್ತೀರಿ ಹಾಗಾಗಿ ನೀವು ಉನ್ನತವಾದ ಗುರಿಯನ್ನು ಇಟ್ಟುಕೊಂಡರೆ ನೀವೆಷ್ಟೇ ಕಲಿಕೆಯಲ್ಲಿ ಹಿಂದಿದ್ದರು ಗುರಿ ಸಾಧನೆ ಸಾಧ್ಯ.ಅದಕ್ಕಾಗಿ ನಿಮ್ಮಲ್ಲಿ ಆತ್ಮ ವಿಶ್ವಾಸ ಸದಾಜಾಗೃತವಾಗಿರಬೇಕು.ನೀವು ನಿಮ್ಮ ವ್ಯಕ್ತಿತ್ವವನ್ನು ಗುರುತಿಸಿಕೊಳ್ಳಬೇಕಾದರೆ ಅತೀ ದೊಡ್ಡಗುರುಯನ್ನು ಇಟ್ಟುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಮಾತುಗಳನ್ನು ಆಡಿದರು.ನಂತರ ವಿದ್ಯಾರ್ಥಿಗಳ ಜೊತೆಯಲ್ಲಿ ಸಂವಾದಚರ್ಚೆಯಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್‌ಜೈನ್ ಮಾತನಾಡಿ ನಿಮ್ಮಲ್ಲಿರುವ ಋಣಾತ್ಮಕ ಚಿಂತನೆಗಳಿಗೆ ಈ ಕಾರ್ಯಕ್ರಮದಿಂದ ಉತ್ತರ ಸಿಕ್ಕಿದೆ ಇಂತಹ ವ್ಯಕ್ತಿಗಳು ನಿಮಗೆ ಮಾದರಿಯಾಗಬೇಕು. ಯು ಪಿ ಎಸ್ ಸಿ ಬಗ್ಗೆ ಯಾರೋ ಹೇಳಿದ ತಪ್ಪು ಕಲ್ಪನೆಗಳಿಗೆ ಮರುಳಾಗಬೇಡಿ ಯಾರಲ್ಲಿ ಜ್ಞಾನವಿರುತ್ತದೆಯೋ ಅವರಿಗೆಯು ಪಿ ಎಸ್ ಸಿ ಪಾಸ್ ಮಾಡುವುದು ಕಷ್ಟವೇನಲ್ಲ ಜೀವನದಲ್ಲಿ ಸವಾಲುಗಳಿರಬೇಕು ಆ ಸವಾಲುಗಳನ್ನು ಮೆಟ್ಟಿ ನಿಲ್ಲುವ ಸಾಮಾರ್ಥ್ಯವನ್ನು ಬೆಳೆಸಿಕೊಳ್ಳಬೇಕು.

ಮನುಷ್ಯ ಎಷ್ಟು ವರ್ಷ ಬದುಕಿದ ಎನ್ನುವುದು ಮುಖ್ಯವಲ್ಲ ಹೇಗೆ ಬದುಕಿದ ಎನ್ನುವುದು ಮುಖ್ಯವಾಗುತ್ತದೆ ಹಾಗಾಗಿ ಸಮಾಜಗೌರವಿಸುವ ವ್ಯಕ್ತಿಯಾಗಿ ಬಾಳಿ ಬದುಕಬೇಕು ನಿಮ್ಮ ಸಾಧನೆಗೆ ಪೂರಕವಾಗುವ ಚಟುವಟಿಕೆಗಳಿಗೆ ಹೆಚ್ಚಿನ ಗಮನ ಹರಿಸಿ ಬೇರೆ ಯಾವುದೇ ಋಣಾತ್ಮಕ ಚಟುವಟಿಕೆಗಳಿಗೆ ದಾಸರಾಗಬೇಡಿ ಹೆತ್ತವರು ಹೆಮ್ಮೆ ಪಡುವಂತಹ ಸಾಧಕರು ನೀವಾಗಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್, ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು. ಶಿಕ್ಷಕಿ ಜಯಲಕ್ಷ್ಮೀ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here