ಹಂದಾಡಿಯ ಬಾಲಕೃಷ್ಣ ನಾಯಕ್ (ಬಲ್ಲಣ್ಣ). ಚೌಕಿಮನೆಯನ್ನು ಅಗಲಿ ಒಂದು ವರ್ಷ ಸಂದಿರುವುದು ನಿಮಗೆಲ್ಲ ಗೊತ್ತೇ ಇದೆ. ಬಲ್ಲಣ್ಣನ ಇರುವಂತಿಗೆಯ ಕಾಲ ಒಂದು ಅನುಭಾವದ ಅನುಭವ. ಅವರ ಹೆಜ್ಜೆಗಳು ನಿರಂತರವಾಗಿ ಪಡಿಮೂಡಿಸಿ ನಮ್ಮೊಳಗೆ ಇದ್ದಾರೆ ಎಂಬ ನಂಬಿಕೆ ನಮ್ಮದು. ಅದು ಸತ್ಯವೂ ಕೂಡ. ಆ ನಂಬಿಕೆಯ ನಿರಂತತಗೆ ನಾವಿಟ್ಟ ಹೆಸರು ‘ನೆನಪು’. ನೆನಪಿರಲಿ ಅಗಲಿದ ಬಲ್ಲಣ್ಣನ ಆತ್ಮಕ್ಕೆ ಗೌರವಿಸುವ ಸಮಯಕ್ಕೆ ನೀವು ಸಾಕ್ಷಿಯಾದರೆ ಅಷ್ಟೇ ಸಾಕು.
ಗಣ್ಯಾತಿಗಣ್ಯರ ಸಮ್ಮುಖದಲ್ಲಿ ನಡೆಯುವ ಸಭಾ ಕಾರ್ಯಕ್ರಮ, ಸನ್ಮಾನ, ಭಾವ ನಮನ , ಯಕ್ಷಗಾನ(ಮೀನಾಕ್ಷಿ ಕಲ್ಯಾಣ) ಹೀಗೆ ಅಂದು ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ದಿ|. ಬಲ್ಲಣ್ಣನ ಕುಟುಂಬ, ಹಾಗೂ ಹಿತೈಷಿಗಳು ಈ ಮೂಲಕ ನಿಮ್ಮನ್ನ ಪ್ರೀತಿಪೂರ್ವಕವಾಗಿ ಆಹ್ವಾನಿಸಿದ್ದಾರೆ.