ಮೈಸೂರು ದಸರಾ – 2025 ಉದ್ಘಾಟನೆಗೆ ಬಾನು ಮುಶ್ತಾಕ್ ಅವರಿಗೆ ಆಹ್ವಾನ ನೀಡಿರುವುದಕ್ಕೆ ವಿರೋಧ

0
57

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಕರ್ನಾಟಕ ಮುಖ್ಯಮಂತ್ರಿಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಲೀಗಲ್ ನೊಟೀಸ್ – ಮೋಹನ್ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ನಮ್ಮ ಪ್ರಮುಖ ಆಕ್ಷೇಪಗಳು:

1. ಮೈಸೂರು ದಸರಾ ಹಬ್ಬವು ಕೇವಲ ಸಾಂಸ್ಕೃತಿಕ ಕಾರ್ಯಕ್ರಮವಲ್ಲ; ಇದು ಹಿಂದೂ ಧಾರ್ಮಿಕ ಸಂಸ್ಕೃತಿಯ ಪವಿತ್ರ ಹಬ್ಬ. ಪರಂಪರೆಯಿಂದಲೂ ದೀಪಾರಾಧನೆ, ಪುಷ್ಪಾರ್ಚನೆ, ಅರಿಶಿನ-ಕುಂಕುಮ ಹಾಗೂ ಪೂಜೆಗಳೊಂದಿಗೆ ದೇವಿ ಚಾಮುಂಡೇಶ್ವರಿ/ಭುವನೇಶ್ವರಿ ಅವರ ಸಮ್ಮುಖದಲ್ಲಿ ಉದ್ಘಾಟನೆ ನಡೆಯುತ್ತ ಬಂದಿದೆ.

2. ಕನ್ನಡ ಭಾಷೆಯನ್ನೇ ಜನತೆ ದೇವಿ ಭುವನೇಶ್ವರಿ (ಕನ್ನಡಮ್ಮ) ರೂಪದಲ್ಲಿ ಆರಾಧನೆ ಮಾಡುತ್ತಾರೆ. ಕನ್ನಡಕ್ಕೆ ಭಾರತ ಸರ್ಕಾರವೇ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡಿದೆ.

3. 2023ರಲ್ಲಿ ನಡೆದ ಸಾಹಿತ್ಯ ಸಮ್ಮೇಳನಗಳಲ್ಲಿ ಬಾನು ಮುಶ್ತಾಕ್ ಅವರು ಕನ್ನಡವನ್ನು ದೇವಿ ಭುವನೇಶ್ವರಿಯೊಂದಿಗೆ ಜೋಡಿಸಿರುವುದನ್ನು ಹಾಸ್ಯವಾಡಿ ನಿಂದಿಸಿದ್ದು, ಕೆಂಪು-ಹಳದಿ (ಅರಿಶಿನ-ಕುಂಕುಮ) ಧಾರ್ಮಿಕ ಆಚರಣೆಗಳನ್ನು ಹಾಸ್ಯ ಮಾಡಿದ್ದು, ಜೊತೆಗೆ ಮೂರ್ತಿಪೂಜೆಯನ್ನೇ ವಿರೋಧಿಸುವುದಾಗಿ ಘೋಷಿಸಿದ್ದಾರೆ.

4. ಈ ಹೇಳಿಕೆಗಳು ಕನ್ನಡಾಭಿಮಾನಿಗಳ ಹಾಗೂ ಹಿಂದೂ ಸಮಾಜದ ಭಾವನೆಗೆ ಭಾರೀ ನೋವುಂಟುಮಾಡಿವೆ. ಆದರೆ ಇಂದಿಗೂ ಅವರು ಯಾವುದೇ ಕ್ಷಮೆಯಾಚನೆ ಮಾಡಿಲ್ಲ.

5. ಇಂತಹ ವ್ಯಕ್ತಿಗೆ ದಸರಾ ಉದ್ಘಾಟನೆಯ ಗೌರವ ನೀಡುವುದಷ್ಟೇ ಅಲ್ಲದೆ, ಸರ್ಕಾರವು ₹10 ಲಕ್ಷ ರೂ. ಪುರಸ್ಕಾರ ನೀಡುತ್ತಿರುವುದು ಹಿಂದೂಗಳ ಧಾರ್ಮಿಕ-ಸಾಂಸ್ಕೃತಿಕ ಭಾವನೆಗೆ ಅವಮಾನವಾಗಿದೆ.

ನಮ್ಮ ಬೇಡಿಕೆಗಳು:
1. ಬಾನು ಮುಶ್ತಾಕ್ ಅವರಿಗೆ ನೀಡಿರುವ ಉದ್ಘಾಟನಾ ಆಹ್ವಾನ ತಕ್ಷಣ ಹಿಂಪಡೆಯಬೇಕು.
2. ಇಲ್ಲದಿದ್ದರೆ, ಉದ್ಘಾಟನೆ ಹಿಂದೂ ಧಾರ್ಮಿಕ ಆಚರಣೆಗಳ ಪ್ರಕಾರವೇ ನಡೆಯಲಿದೆ ಎಂಬುದನ್ನು ಸರ್ಕಾರವು ಲಿಖಿತವಾಗಿ ಖಾತ್ರಿಪಡಿಸಬೇಕು.
3. ಕನ್ನಡ, ಕನ್ನಡಮ್ಮ ಮತ್ತು ಕರ್ನಾಟಕದ ಪರಂಪರೆಯ ಪವಿತ್ರತೆಯನ್ನು ಕಾಪಾಡಬೇಕು.

ಸರ್ಕಾರಕ್ಕೆ ಎಚ್ಚರಿಕೆ:
7 ದಿನಗಳ ಒಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಹಿಂದೂ ಜನಜಾಗೃತಿ ಸಮಿತಿ, ಕರ್ನಾಟಕ ಹೈಕೋರ್ಟ್‌ನಲ್ಲಿ ಸಾಂವಿಧಾನಿಕ ಅರ್ಜಿ, ಜೊತೆಗೆ ಅಪರಾಧ ಪ್ರಕರಣ ಹಾಗೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಹಾಕಲು ಬದ್ಧವಾಗಿರುತ್ತದೆ.

ಮೈಸೂರು ದಸರಾ ಹಬ್ಬವು ರಾಜಕೀಯ ವೇದಿಕೆ ಅಲ್ಲ, ಇದು ಹಿಂದೂಗಳ ಧಾರ್ಮಿಕ ಹಬ್ಬ. ದೇವಿ ಭುವನೇಶ್ವರಿ, ಕನ್ನಡಮ್ಮ ಮತ್ತು ಹಿಂದೂ ಆಚರಣೆಗಳನ್ನು ಅವಹೇಳನ ಮಾಡುವ ಯಾವುದೇ ಪ್ರಯತ್ನವನ್ನು ಸಹಿಸಲಾಗುವುದಿಲ್ಲ.

LEAVE A REPLY

Please enter your comment!
Please enter your name here