ಉಡುಪಿ: ಯಾವುದೇ ಕಾಯ್ದೆಗಳು ಮೂಲಭೂತ ಹಕ್ಕುಗಳಿಗೆ ಧಕ್ಕೆ ತರುವಂತಿರಬಾರದು ಎಂಬ ಸುಪ್ರೀಂಕೋರ್ಟ್ ಸ್ಪಷ್ಟ ನಿರ್ದೇಶನವಿದ್ದರೂ ರಾಜ್ಯ ಸರ್ಕಾರ ದ್ವೇಷ ಭಾಷಣ ಕಾಯ್ದೆ ಮೂಲಕ ಪ್ರಜೆಗಳ ವಾಕ್ ಸ್ವಾತಂತ್ರ್ಯ ಭಾಷಣ ಯಾವುದು ಎಂಬುದನ್ನು ವಿಮರ್ಶಿಸುವ ಅಧಿಕಾರ ನ್ಯಾಯಾಂಗಕ್ಕಿದೆ. ಈಗಾಗಲೇ ಭಾರತೀಯ ನ್ಯಾಯ ಸಂಹಿತೆಯಲ್ಲಿ ಈ ಬಗ್ಗೆ ಉಲ್ಲೇಖವಿದೆ. ಆದರೆ ರಾಜ್ಯ ಸರ್ಕಾರ ಕೇಂದ್ರದ ಕಾನೂನಿಗೆ ಬದಲಾಗಿ ರಾಜಕೀಯ ವಿರೋಧಿಗಳನ್ನು ಮಟ್ಟಹಾಕಲು ಭಾಷಣವನ್ನು ಜಾಮೀನು ರಹಿತ ಅಪರಾಧವಾಗಿ ಪರಿಗಣಿಸಿರುವುದು ಹಾಗೂ ದ್ವೇಷ ಭಾಷಣ ಮಾಡಬಹುದು ಎಂಬುದಾಗಿ ಗೃಹಿಸಿಕೊಂಡು ಮುಂಜಾಗೃತವಾಗಿ ಬಂಧನಕ್ಕೆ ಅವಕಾಸ ಕಲ್ಪಿಸಿರುವುದು ಕಾನೂನು ಜಾರಿಗೊಳಿಸುವುದು ಸರಿಯಲ್ಲ. ಕಾಯ್ದೆ ದುರುಪಯೋಗವಾಗುವ ಸಾಧ್ಯತೆ ಬಗ್ಗೆ ಈಗಾಗಲೇ ವಿರೋಧಪಕ್ಷದ ನಾಯಕರು ರಾಜ್ಯಪಾಲರಿಗೆ ಮನವರಿಕೆ ಮಾಡಿದ್ದಾರೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್, ಜಿಲ್ಲಾ ವಕ್ತಾರ ದಿವಾಕರ ಶೆಟ್ಟಿ ಕಾಪು, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಉಪಸ್ಥಿತರಿದ್ದರು.

