ಮೂಡುಬಿದ್ರೆ: ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೂಡುಬಿದ್ರೆ ಶ್ರೀ ಗೋಪಾಲ ಕೃಷ್ಣ ದೇವಸ್ಥಾನದ 109ನೇ ವರ್ಷದ ಮೊಸರು ಕುಡಿಕೆ ಉತ್ಸವ ಇದೇ 16.08.2025ನೇ ಶನಿವಾರ ವಿಜೃಂಭಣೆಯಿಂದ ಜರುಗಲಿದೆ. ಮೂಡಬಿದ್ರೆಯ ವಿವಿಧ ಸಂಘ ಸಂಸ್ಥೆಗಳು ಪ್ರತ್ಯೇಕವಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸಲಿದ್ದು, ಈ ನಿಟ್ಟಿನಲ್ಲಿ ಜವನೆರ್ ಬೆದ್ರ ಸಂಘಟನೆಯ ‘ಕೃಷ್ಣೋತ್ಸವ – 2025’ ಕಾರ್ಯಕ್ರಮದ ಪೂರ್ವ ತಯಾರಿ ಭರದಿಂದ ಸಾಗುತ್ತಿದ್ದು. ‘ಕೃಷ್ಣೋತ್ಸವ – ೨೦೨೫’ ರ ಕಾರ್ಯಕ್ರಮದ ಅಂಗವಾಗಿ ಸಂಘಟನೆಯ ವತಿಯಿಂದ ‘ಶ್ರೀ ಕೃಷ್ಣ’ ನ ಫೋಟೋವಿರುವ ಪ್ಲೇಕ್ಸ್ ಗಳನ್ನು ನಗರದ ರಥಬೀದಿಯಲ್ಲಿ ಆಳವಡಿಸಲಾಗಿದೆ. ಮೊಸರು ಕುಡಿಕೆಯ ಪ್ರಯುಕ್ತ ನಡೆಯುವ ‘ಕೃಷ್ಣೋತ್ಸವ – ೨೦೨೫’ ರ ಭರದ ಪೂರ್ವ ತಯಾರಿಯ ನಡುವೆ ಕೆಲವೊಂದು ಆತೃಪ್ತ ಮನಸ್ಸುಗಳು ಕೆಲ ಅಪಸ್ವರಗಳ ಮಾತುಗಳಾನ್ನಾಡುತ್ತಿದ್ದಾರೆ. ಈ ಎಲ್ಲಾ ಅಪಸ್ವರಗಳಿಗೆ ಕಾರ್ಯಕ್ರಮದ ಆಯೋಜರು ಹಾಗೂ ಜವನೆರ್ ಬೆದ್ರ ಸಂಘಟನೆ(ರಿ)ಯ ಸ್ಥಾಪಕಾಧ್ಯಕ್ಷರಾದ ಅಮರ್ ಕೋಟೆ ಸ್ಪಷ್ಟನೆ ನೀಡಿದರು.
ಕೃಷ್ಣೋತ್ಸವ’ ಕಾರ್ಯಕ್ರಮದ ಅಂಗವಾಗಿ ‘ಶ್ರೀ ಕೃಷ್ಣ’ನ ಎಐ ಆಧಾರಿತ ಚಿತ್ರವೊಂದನ್ನು ರಚಿಸಲಾಗಿತ್ತು ಮತ್ತು ಈ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿತ್ತು. Social Media ದಲ್ಲಿ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಭಾರೀ ವೈರಲ್ ಆಗಿ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಆ ಬಳಿಕ ಇದೇ ಚಿತ್ರವನ್ನು ನಗರದಲ್ಲಿ ಆಳವಡಿಸುವ ಫ್ಲೆಕ್ಸ್ ಗಳಲ್ಲಿಯೂ ಬಳಸಲಾಗಿತ್ತು. ಫ್ಲೆಕ್ಸ್ ಗಳ ಆಳವಡಿಕೆ ಕಾರ್ಯ ಸದ್ಯ ಬಹುತೇಕ ಪೂರ್ಣವಾಗಿದ್ದು,ಫ್ಲೆಕ್ಸ್ ಆಳವಡಿಸಿದ ಹತ್ತು ದಿನಗಳ ಬಳಿಕ ಈಗ ಕೆಲ ಆತೃಪ್ತ ಮನಸ್ಸುಗಳು ‘ಶ್ರೀ ಕೃಷ್ಣ’ ಫೋಟೋವನ್ನು ಕಾರ್ಟೂನ್ ರೀತಿ ವಿಕಾರವಾಗಿ ಚಿತ್ರಿಸಲಾಗಿದೆ ಎಂದು ಹೇಳಲಾರಂಭಿಸಿದರು.
ಆಯೋಜಕರಿಂದ ಸ್ಪಷ್ಟನೆ.?
‘ಕೃಷ್ಣೋತ್ಸವ’ ಕಾರ್ಯಕ್ರಮದ ಆಯೋಜಕರು ಈ ಎಲ್ಲಾ ಅಪಸ್ವರಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಆಯೋಜಕರು ‘ಶ್ರೀ ಕೃಷ್ಣ’ ನ ಫೋಟೋವನ್ನು ವಿಕಾರವಾಗಿ ಕಾರ್ಟೂನ್ ರೀತಿಯಲ್ಲಿ ರಚಿಸಲಾಗಿದೆ ಎಂಬ ಮಾತಿನಲ್ಲಿ ಯಾವುದೇ “ಹುರುಳಿಲ್ಲ”. ನಾವೂ ಪ್ರಸ್ತುತ ಪಡಿಸಿರುವ ಚಿತ್ರದಲ್ಲಿ ಯಾವುದೇ ರೀತಿಯ ಅಗೌರವ ತೋರಿಸಲಾಗಿಲ್ಲ, ಅಧುನಿಕ ತಂತ್ರಜ್ಞಾನ ಎಐ ಬಳಸಿಕೊಂಡು ಶ್ರೀ ಕೃಷ್ಣನ ಚಿತ್ರವನ್ನು ರಚಿಸಲಾಗಿದೆ. ಮೊಸರು ಕುಡಿಕೆ ಎಂದರೆ ಮಕ್ಕಳಿಗೆ ಬಹು ಪ್ರಿಯ, ಮಕ್ಕಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಚಿತ್ರ ನಿರ್ಮಿಸಲಾಗಿದೆ ಹೊರತು ಯಾವುದೇ ರೀತಿಯ ಅಗೌರವ, ಚ್ಯುತಿ ತರುವಂತಹ ಅಂಶವನ್ನು ಚಿತ್ರದಲ್ಲಿ ತೋರ್ಪಡಿಸಲಾಗಿಲ್ಲ ಎಂದು ಹೇಳಿದ್ದಾರೆ.
ಶ್ರೀ ಕೃಷ್ಣನಿಗೆ ಸಂಬಂಧಪಟ್ಟ ಯಾವುದೇ ಅಧಿಕೃತ ಚಿತ್ರಗಳು ಲಭ್ಯವಿಲ್ಲ. ಬೇರೆ ಬೇರೆ ಚಿತ್ರ ಕಲಾವಿದರೂ ತಮ್ಮ ಕಲ್ಪಿತ ಯೋಚನೆಯ ಪ್ರಕಾರ ಚಿತ್ರಗಳನೂ ಬಿಡಿಸಿದ್ದಾರೆ. ಅದೇ ರೀತಿಯಲ್ಲಿ ಈ ಚಿತ್ರವನ್ನು ಎಐ ತಂತ್ರಜ್ಞಾನವನ್ನು ಬಳಸಿ ರಚಿಸಲಾಗಿದೆ. ನಾವು ರಚಿಸಿರುವ ಚಿತ್ರದಲ್ಲಿ ಕೃಷ್ಣನ ವೇಷ ಭೂಷಣದಲ್ಲಿ ಯಾವುದೇ ಚ್ಯುತಿ ತಂದಿಲ್ಲ ಎಂದು ಸ್ವಷ್ಟ ಪಡಿಸಿದರು. ಬಾಲ ಹನುಮನ್, ಬಾಲ ರಾಮ, ಅದೇ ರೀತಿ ಗಣಪತಿಯ ಕಾರ್ಟೂನ್ ಚಿತ್ರಗಳು ಬಳಕೆಯಲ್ಲಿದ್ದು ಅವುಗಳಲ್ಲಿ ಯಾವುದೇ ಚ್ಯುತಿಯಾಗಿಲ್ಲ ಎಂದರು.
ಮೂಡಬಿದ್ರೆಯ ಶ್ರೀ ಗೋಪಾಲ ಕೃಷ್ಣ ದೇವಸ್ಥಾನದ ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಹಲವಾರು ವರ್ಷಗಳಿಂದ ನಮ್ಮ ಸಂಘಟನೆ ಜೊತೆಯಾಗಿದ್ದು, ಯಾವುದೇ ಆಸ್ತಿಕರ ಭಾವನೆಗೆ ಧಕ್ಕೆ ತರುವಂತಹ ಕೆಲಸಗಳು ನಡೆದಿಲ್ಲ ಮುಂದೆಯೂ ನಡೆಯುವುದಿಲ್ಲ ಎಂಬ ಮಾತನ್ನು ಹೇಳಿದರು.
ಇಂಟರ್ ನೆಟ್ ನಲ್ಲಿ ಲಭ್ಯವಿರುವ ಬಹುತೇಕ ಎಲ್ಲಾ ಚಿತ್ರಗಳು ಇದೇ ರೀತಿಯಾದ್ದಾಗಿದ್ದು ಬಹುತೇಕರು ಇದನ್ನೇ ಬಳಸುತ್ತಿದ್ದಾರೆ ಎಂಬ ಅಂಶವನ್ನು ಉಲ್ಲೇಖಿಸಿದರು. ಕೆಲವೂ ಸಂಘಟನೆಗಳು ಮಣ್ಣಿನ ಕುಡಿಕೆಯಲ್ಲಿ ಶ್ರೀ ಕೃಷ್ಣನ ಚಿತ್ರ ಬಿಡಿಸಿ ಅದೇ ಮಡಿಕೆಯನ್ನು ಹೊಡೆದು ಆ ಬಳಿಕ ಅದರ ಮೇಲೆಯೆ ನಡೆದುಕೊಂಡು ಹೋಗುತ್ತಾರೆ ಇದು ಆಚರಣೆ ಹಾಗೂ ನಂಬಿಕೆಗೆ ತೋರುವ ಅಗೌರವ ಎಂದು ತಿಳಿಸಿದರು.
ಇತಿಹಾಸ ಪ್ರಸಿದ್ದ ಮೂಡುಬಿದ್ರೆಯ ಶ್ರೀ ಗೋಪಾಲ ಕೃಷ್ಣ ದೇವಸ್ಥಾನದ ಹೆಸರನ್ನು ಮುಂದಿಟ್ಟುಕೊಂಡು ನಮ್ಮ ಸಂಘಟನೆ 109ನೇ ವರ್ಷದ ಮೊಸರು ಕುಡಿಕೆಯ ಪ್ರಯುಕ್ತ ‘ಕೃಷ್ಣೋತ್ಸವ’ ಕಾರ್ಯಕ್ರಮವನ್ನು ಆಯೋಜಿಸಿದ್ದು, ಮೂಡುಬಿದ್ರೆಯಲ್ಲಿ ಮೊದಲು ಮೊಸರು ಕುಡಿಕೆಯನ್ನು ಆರಂಭಿಸಿದ ದಿವಂಗತ ವೇಣೂರು ಕೃಷ್ಣಯ್ಯರಿಗೂ ಗೌರವ ಕೊಟ್ಟ ಏಕೈಕ ಸಂಘಟನೆ ನಮ್ಮದು ಎಂದರು. ಇದು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಸಂಬಂಧಿಸಿದ ಕಾರ್ಯಕ್ರಮವಲ್ಲ ಬದಲಾಗಿ ದೇವಸ್ಥಾನದ ಉತ್ಸವಕ್ಕೆ ಪೂರಕವಾಗಿ ನಡೆಯುವ ಕಾರ್ಯಕ್ರಮವಾಗಿದೆ.
ನಾವು ಈ ಬಾರಿ ರಚಿಸಿರುವ ಶ್ರೀ ಕೃಷ್ಣನ ಚಿತ್ರಕ್ಕೆ ಜನಸಾಮಾನ್ಯರಿಂದ ಬಹಳ ಮೆಚ್ಚುಗೆ ವ್ಯಕ್ತವಾಗಿದ್ದು ಅದು ನಮಗೆ ಸಂತೋಷ ತಂದಿದೆ ಬದಲಾಗಿ ಕೆಲವರು ಅಪಪ್ರಚಾರ ನಡೆಸಿದರೆ ಅದರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು. ಜವನೆರ್ ಬೆದ್ರ ಸಂಘಟನೆ ನೇತೃತ್ವದಲ್ಲಿ ನಡೆಯುವ ‘ಕೃಷ್ಣೋತ್ಸವ’ ಕಾರ್ಯಕ್ರಮಕ್ಕೆ ಎಲ್ಲಾರೂ ಆಗಮಿಸಿ ಕಾರ್ಯಕ್ರಮವನ್ನು ಮತ್ತಷ್ಟು ವಿಜೃಂಭನೆಗೊಳಿಸಿ ಎಂದು ಕೇಳಿಕೊಂಡರು.
ಹಿರಿಯರ ಮಾರ್ಗದರ್ಶನದ ಮೇರೆಗೆ ಎಐ ಬಳಕೆಯಲ್ಲಿದ್ದ ಚಿತ್ರವನ್ನು ತೆಗೆದುಹಾಕಿ ನೈಜ ಚಿತ್ರವಿರುವ ಫ್ಲೆಕ್ಸ್ ಗಳನ್ನು ಆಯೋಜಕರು ಆಳವಡಿಸಿದ್ದು, ಇದರ ಉದ್ದೇಶ ಹಳೆಯ ಚಿತ್ರ ತಪ್ಪು ಎಂದಲ್ಲ ಬದಲಾಗಿ ಹಿರಿಯರ ಮಾರ್ಗದರ್ಶನದಂತೆ ಹಾಗೂ ಅವರ ಮಾತಿಗೆ ಬೆಲೆ ಕೊಟ್ಟು ಈ ನಿರ್ಧಾರ ಕೈಗೊಳ್ಳಲಾಗಿದೆ.