ನಮ್ನ ಪ್ರಧಾನಿ ನಮ್ಮ ಹೆಮ್ಮೆ.ಉಗ್ರರ ವಿರುದ್ಧದ ಆಪರೇಷನ್ ಸಿಂಧೂರ ಶ್ಲಾಘನೀಯ: ರಮಿತಾ ಶೈಲೇಂದ್ರ ಕಾರ್ಕಳ

0
104

ಕಾರ್ಕಳ: ಸಿಂಧೂರ ಹೇಳುವಂತದ್ದು ಭಾರತೀಯ ಮಹಿಳೆಯರ ಮುತ್ತೈದೆ ಸೌಭಾಗ್ಯ. 15 ದಿನಗಳ ಹಿಂದೆ ಪಹಲ್ಗಾಮನಲ್ಲಿ ಪ್ರವಾಸಕ್ಕೆ ತೆರಳಿದ್ದ ಭಾರತೀಯರ ಮೇಲೆ ನಡೆದಿರುವ ದಾಳಿಯಿಂದಾಗಿ 26 ತಾಯಂದಿರು ವಿಧವೆ ಆಗುವಂತಹ ಸನ್ನಿವೇಶ ಎದುರಾಗಿದ್ದು ಇದು ನಮ್ಮ ನೆರೆಯ ರಾಷ್ಟ್ರವಾಗಿರುವ ಪಾಕಿಸ್ತಾನದ ಷಡ್ಯಂತರ ವೆಂಬುವಂತದ್ದು ನಾಚಿಕೆಯ ವಿಷಯವಾಗಿತ್ತು. ಇಡೀ ಭಾರತದ ಜನತೆಗೆ ಇದು ಆತಂಕ ಕೆಡಿಸುವ ವಿಷಯವಾಗಿದ್ದರೂ ಸಮರ್ಥ ನಾಯಕನಿದ್ದರೆ ಪ್ರಜೆಗಳ ಹಿತಾಶಕ್ತಿಯನ್ನು ಬಯಸುವಂತಹ ಪ್ರಧಾನಿ ಇದಕ್ಕೆ ಪ್ರತ್ಯುತ್ತರವನ್ನು ನೀಡುವ ಮೂಲಕ ಸಿಂಧೂರ ಕಳಕೊಂಡವರ ಸಹೋದರನಾಗಿ ನಿಂತು ಭಾರತೀಯ ಸೇನೆಯಿಂದ ಉತ್ತರ ಕೊಟ್ಟಿದ್ದಾರೆ. ಇಡೀ ಭಾರತೀಯರು ಅಲ್ಲದೆ ಪ್ರಪಂಚದ ಇತರ ರಾಷ್ಟ್ರಗಳು ಭಾರತದತ್ತ ಒಮ್ಮೆ ತಿರುಗಿ ನೋಡುವಂತೆ ಮಾಡಿದ್ದಂತು ಸುಳ್ಳಲ್ಲ, ಪಾಕಿನ ಉಗ್ರರನ್ನು ಸದೆಬಡೆಯುವ ಮೂಲಕ ಭಾರತೀಯ ಸೇನೆಯ ಶೌರ್ಯವನ್ನು ತೋರಿಸಿಕೊಟ್ಟರೆ ಇನ್ನೊಂದು ಕಡೆಯಲ್ಲಿ ಭಾರತೀಯ ಹೆಣ್ಣುಮಕ್ಕಳ ತಂಟೆಗೆ ಬಂದಲ್ಲಿ ಅವರ ಸ್ಥಿತಿಗತಿಗಳು ಏನಾಗುತ್ತದೆ ಎಂಬುವಂತ ಪರಂಪರೆಯನ್ನು ಪುನರ್ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಭಾರತದ ಹೆಣ್ಣು ಮಕ್ಕಳ ನಾರಿ ಶಕ್ತಿಯನ್ನು ಯುದ್ಧದ ಮಾಹಿತಿ ಪತ್ರಿಕಾಗೋಷ್ಠಿಯಲ್ಲಿ ಸಿಂಹಿಣಿಯರ ಮೂಲಕ ಹೇಳಿಸಿರುವ ಅಂತದ್ದು ಭಾರತದ ಪ್ರತಿಯೊಂದು ಮಹಿಳೆಯು ಹೆಮ್ಮೆಪಡುವಂತಹ ವಿಷಯ. ನಮ್ಮ ಆಯ್ಕೆಗಳು ಸ್ಪಷ್ಟವಾಗಿದ್ದಲ್ಲಿ ಒಬ್ಬ ಸಮರ್ಥ ನಾಯಕ ದೇಶವನ್ನಳಲು ಸಾಧ್ಯ.

LEAVE A REPLY

Please enter your comment!
Please enter your name here