ವರದಿ ಮಂದಾರ ರಾಜೇಶ್ ಭಟ್, ತುಳುನಾಡು ವಾರ್ತೆ
ಮಂಗಳೂರು :-ರಾಷ್ಟ್ರೀಯ ಮಾನವ ಹಕ್ಕುಗಳು ಮಹಿಳೆಯರು, ಮಕ್ಕಳು ಮತ್ತು ವಯಸ್ಕರ ಹಕ್ಕುಗಳ ರಕ್ಷಣೆ ಮತ್ತು ಉನ್ನತಿ ಸಂಸ್ಥೆಯ ಮೂಡುಬಿದಿರೆ ತಾಲೂಕು ಅಧ್ಯಕ್ಷರಾಗಿ ಸಮಾಜ ಸೇವಕಿ, ತಾಲೂಕು ಜಾನಪದ ಪರಿಷತ್ ಅಧ್ಯಕ್ಷೆ, ವಾಯ್ಸ್ ಆಫ್ ಆರಾಧನಾ ತಂಡದ ನಿರ್ದೇಶಕಿ, ಪದ್ಮಶ್ರೀ ಭಟ್ ಆಯ್ಕೆಯಾಗಿದ್ದಾರೆ ಎಂದು ಪತ್ರಿಕೆಯೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಉದ್ದೇಶಗಳ ಜಾಗೃತಿ ಕಾರ್ಯಕ್ರಮ ಮಂಗಳೂರಿನ ಓಶಿಯನ್ ಪರ್ಲ್ ಹೋಟೆಲ್ ನಲ್ಲಿ ನಡೆಯಿತು.
ಜನಜಾಗೃತಿ ಕಾರ್ಯಕ್ರಮದಲ್ಲಿ ಡಾ. ನಿರಂಜನ್ ಎಸ್. ಶೆಟ್ಟಿ , ಡಾ. ಸಂಧ್ಯಾ ಉಪಾಧ್ಯಾಯ, ಶ್ರೀಮತಿ ನಿಶಿತಾ ಶೆಟ್ಟಿ,ಹಾಗೂ ರಾಷ್ಟ್ರೀಯ, ರಾಜ್ಯ, ತಾಲೂಕು ಘಟಕ ಅಧ್ಯಕ್ಷರುಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಸ್ಥೆಯ ವಲಯ ಕಾರ್ಯದರ್ಶಿ ಶ್ರೀಮತಿ ಮಂಜುಳ ನಾಯಕ್ ಇವರ ಶಿಫಾರಸ್ಸಿನ ಮೇರೆಗೆ ಆಯ್ಕೆಯಾಗಿದ್ದು ಕಾರ್ಯಕ್ರಮದಲ್ಲಿ ಪದ್ಮಶ್ರೀ ಭಟ್ಟರನ್ನು ಮೂಡಬಿದಿರೆ ಅಧ್ಯಕ್ಷರಾಗಿ, ರಾಷ್ಟ್ರೀಯ ಮಾನವ ಹಕ್ಕುಗಳು ಇದರ ಅಧ್ಯಕ್ಷರು ನೇಮಕಗೊಳಿಸಿ ಗುರುತು ಪತ್ರ ನೀಡಿ ಘೋಷಿಸಿದರು ಎಂದು ಪದ್ಮಶ್ರೀ ಅವರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
Home ಮೂಡುಬಿದಿರೆ ರಾಷ್ಟ್ರೀಯ ಮಾನವ ಹಕ್ಕುಗಳು, ಮಹಿಳೆಯರು ಮಕ್ಕಳು ಮತ್ತು ವಯಸ್ಕರ ಹಕ್ಕುಗಳ ರಕ್ಷಣೆ ಸಂಸ್ಥೆಯ ಮೂಡುಬಿದಿರೆ ತಾಲೂಕು...