ಪಡುಕುಡೂರು ಸರ್ಕಾರಿ ಶಾಲೆ : ಶತಮಾನೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆ

0
24

ಪಡುಕುಡೂರು : ಶತಮಾನೋತ್ಸವ ಸಂಭ್ರಮದಲ್ಲಿರುವ ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಸಂಭ್ರಮದ ವಿಜ್ಞಾಪನಾ ಮನವಿಯನ್ನು ಶುಕ್ರವಾರ ಪಡುಕುಡೂರು ಶ್ರೀ ಭದ್ರಕಾಳಿ ಅಮ್ಮನವರಿಗೆ ಹೂವಿನ ಪೂಜೆಯೊಂದಿಗೆ ಮೊದಲು ಸಮರ್ಪಣೆ ಮಾಡಿ ಬಳಿಕ ಗೌರವಾಧ್ಯಕ್ಷ ಪ್ರಶಾಂತ ಶೆಟ್ಟಿ ದೊಡ್ಮನೆ ಬಿಡುಗಡೆ ಮಾಡಿದರು‌.

ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಭಾರವಿ ಶೆಟ್ಟಿ ಪಟೇಲರಮನೆ, ಸಂಚಾಲಕ ಪ್ರಸನ್ನ ಶೆಟ್ಟಿ ಪಡುಕುಡೂರು, ಪ್ರಧಾನ ಕಾರ್ಯದರ್ಶಿ ಹರೀಶ ಪೂಜಾರಿ ಎಸ್‌, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಶೆಟ್ಟಿ, ಉಪಾಧ್ಯಕ್ಷ ಹರೀಶ ಪೂಜಾರಿ, ಪ್ರಮುಖರಾದ ಅಶೋಕ್‌ ಎಂ ಶೆಟ್ಟಿ, ಉದಯ ಪೂಜಾರಿ, ಜ್ಯೋತಿ ಪ್ರಸಾದ ಶೆಟ್ಟಿ ಸೇರಿದಂತೆ ಸಮಿತಿಯ ಸಂಚಾಲಕರು, ಸಹ ಸಂಚಾಲಕರು ಹಾಗೂ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here